ನರಗುಂದ: ಪಟ್ಟಣದ ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ ಐ.ಕ್ಯೂ.ಎ.ಸಿ. ಪ್ರಾಯೋಜಿತ ‘ಪ್ರಗತಿ ಮತ್ತು ಪರಂಪರೆ: ವಿಕಸಿತ ಭಾರತ 2047ಗಾಗಿ ನಾವಿನ್ಯತೆ ಮತ್ತು ಪರಂಪರೆಯ ಸಮ್ಮಿಲನ” ವಿಷಯದ ಕುರಿತು ಬಹುಶಾಸ್ತ್ರೀಯ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಆನ್ಲೈನ್ ಮೂಲಕ ಶುಕ್ರವಾರ ನಡೆಯಲಿದೆ.

ಸಮ್ಮೇಳನದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಆನಂದಕುಮಾರ ಲಾಲಸಂಗಿ ವಹಿಸಲಿದ್ದಾರೆ. ವಿಕಸಿತ ಭಾರತ ಕುರಿತು ಪ್ರಧಾನ ಭಾಷಣವನ್ನು ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಉಮಾ ಎಚ್. ಆರ್. ಮಾಡಲಿದ್ದಾರೆ.

ಸಮ್ಮೇಳನದಲ್ಲಿ ರಾಮು ಎಂ.ಎಸ್, ಐ.ಕ್ಯೂ.ಎ.ಸಿ. ಸಂಚಾಲಕ ಯಶೋದಾ ಅಂಗಡಿ . ಭೀಮನ ಗೌಡ ಕಲಬುರ್ಗಿ, ಸಾಗರ್ ಬಂಬೋಲಿ ಭಾಗವಹಿಸಲಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಸುಮಾರು 90 ಸಂಶೋಧನಾರ್ಥಿಗಳುಮತ್ತು ಪ್ರಾಧ್ಯಾಪಕರು ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ ಮತ್ತು ಅರ್ಥಶಾಸ್ತ್ರ, ಕಲೆ ಮತ್ತು ಮಾನವಿಕ ಶಾಸ್ತ್ರಗಳು ಹಾಗೂ ಸಾಹಿತ್ಯ ಉಪವಿಷಯಗಳಡಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಮಧು ಜಿ. ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-23-1566266759

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.