ನವಲಗುಂದ: ‘ಜನಗಣತಿ ಕಾರ್ಯದಿಂದ ದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ. ಈ ಬಾರಿಯ ಜನಗಣತಿ ಸುಲಭ ಹಾಗೂ ಸರಳವಾಗಿದ್ದು, ಡಿಜಿಟಲ್ ಮೊಬೈಲ್ ಆಧಾರಿತವಾಗಿದೆ ’ಎಂದು ಜನಗಣತಿ ನೋಡಲ್ ಅಧಿಕಾರಿ ಆರ್.ದೇವರಾಜ ಹೇಳಿದರು.

ಸ್ಥಳೀಯ ಶಂಕರ ಮಹಾವಿದ್ಯಾಲಯದಲ್ಲಿ ಮಂಗಳವಾರ ಭಾರತ ಜನಗಣತಿ 2027ರ ಅಂಗವಾಗಿ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಏ.1 ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏ.16ರಿಂದ ಗಣತಿದಾರರು ಮನೆಬಾಗಿಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಗಣತಿದಾರರು ಗೊಂದಲ ಮಾಡಿಕೊಳ್ಳದೇ ತರಬೇತಿದಾರರ ಮಾರ್ಗದರ್ಶನದ ಮೇರೆಗೆ ಮಾಹಿತಿ ಸಂಗ್ರಹಿಸಿ ಎಂದರು.

ಡಿಜಿಟಲ್ ಜನಗಣತಿ ಕಾರ್ಯಕ್ರಮಕ್ಕೆ ತಾಲ್ಲೂಕು ಆಡಳಿತದಿಂದ ಗ್ರಾಮೀಣ ಭಾಗದಲ್ಲಿ 157 ಗಣತಿದಾರರು, 26 ಮೇಲ್ವಿಚಾರಕರು, 9 ತರಬೇತಿದಾರರು ಹಾಗೂ ಕಾಯ್ದಿದಿರಿಸಿದ 16 ಗಣತಿದಾರರು ಹಾಗೂ ಮೂವರು ಮೇಲ್ವಿಚಾರಕರು ಸೇರಿ ನೇಮಿಸಲಾಗಿದೆ ತಹಶೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಡಿ.ರಂಗಣ್ಣವರ, ಎನ್.ವಿ. ಕುರವತ್ತಿಮಠ, ಜಿ.ಎಂ.ಮಾಕಣ್ಣವರ, ಉಪ ತಹಶೀಲ್ದಾರ್ ಗಣೇಶ ಚಳ್ಳಕೆರೆ, ಹನುಮರಡ್ಡಿ ದೇವರಡ್ಡಿ ಸೇರಿ ತರಬೇತಿದಾರರು, ಮೇಲ್ವಿಚಾರಕರು, ಗಣತಿದಾರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-24-297812421

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.