ನಾಯಕನಹಟ್ಟಿ: ಪಟ್ಟಣದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ಪೂರ್ವ ಬಾಲಕರ ಹಾಸ್ಟೆಲ್ಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ಅಲ್ಲಿರುವ ವಿದ್ಯಾರ್ಥಿಗಳು ಪಟ್ಟಣ ಪಂಚಾಯಿತಿಯ ಸಮುದಾಯ ಭವನದಲ್ಲಿ ಆಶ್ರಯ ಪಡೆದು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪಟ್ಟಣದ ಪಾದಗಟ್ಟೆಯ ಸಮೀಪದ 1975-76ರಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ಪೂರ್ವ ಬಾಲಕರ ಹಾಸ್ಟೆಲ್ ಆರಂಭಿಸಲಾಗಿದೆ. ಆಗಿಂದ ಈವರೆಗೂ ಈ ಕಟ್ಟಡದಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ 5ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 75ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಆದರೆ, ಡಿಸೆಂಬರ್ 5ರಂದು ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡವನ್ನು ತೊರೆದು ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಸುವರ್ಣ ಗ್ರಾಮ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಅಲ್ಲಿ ಮೂಲ ಸೌಕರ್ಯ ಕೊರತೆಯಿದ್ದು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

50 ವರ್ಷದ ಕಟ್ಟಡ: ಪಾದಗಟ್ಟೆ ಬಳಿ ಇರುವ ಡಿ.ದೇವರಾಜ ಅರಸು ಮೆಟ್ರಿಕ್ಪೂರ್ವ ಬಾಲಕರ ಹಾಸ್ಟೆಲ್ ಕಟ್ಟಡಕ್ಕೆ 50 ವರ್ಷಗಳಾಗಿದ್ದು, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆ ಬಂದರೆ ಚಾವಣಿ ಸೋರುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಕೊರತೆ ಇತ್ತು. ಶುದ್ಧಗಾಳಿ ಮತ್ತು ಬೆಳಕಿಲ್ಲ, ವಾಸಿಸಲು ಯೋಗ್ಯವಲ್ಲದ ಸ್ಥಿತಿ ಎದುರಾಗಿತ್ತು. ಹಲವು ಬಾರಿ ವಿಷಜಂತುಗಳು ಹಾಸ್ಟೆಲ್ ಕಟ್ಟಡದೊಳಗೆ ನುಗ್ಗಿದ್ದವು. ಇದರಿಂದ ವಿದ್ಯಾರ್ಥಿಗಳು ಜೀವಭಯದಲ್ಲಿ ಇದ್ದರು. ಇದನ್ನು ಮನಗಂಡ ಹಾಸ್ಟೆಲ್ ವಾರ್ಡನ್ ಸೇರಿದಂತೆ ಬಿಸಿಎಂ ಇಲಾಖೆಯ ಅಧಿಕಾರಿಗಳು ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

₹ 94.95 ಲಕ್ಷ ಅನುದಾನ ಮಂಜೂರು: 2023 ಫೆಬ್ರುವರಿ 16ರಂದು ಸರ್ಕಾರವು ಹಾಸ್ಟೆಲ್ ದುರಸ್ತಿಗೆ ₹ 94.95ಲಕ್ಷ ಅನುದಾನವನ್ನು ಮಂಜೂರು ಮಾಡಿತ್ತು. ನಿರ್ಮಾಣದ ಹೊಣೆಯನ್ನು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. 2024ರ ಫೆಬ್ರುವರಿ 14ರಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಳೆಯ ಕಟ್ಟಡ ಪರಿಶೀಲಿಸಿ, ‘ವಾಸಕ್ಕೆ ಯೋಗ್ಯವಾಗಿಲ್ಲ. ಕಟ್ಟಡವನ್ನು ನೆಲಸಮ ಮಾಡಬೇಕು’ ಎಂದು ವರದಿ ನೀಡಿದ್ದರು. ಅದರಂತೆ 2025 ಡಿಸೆಂಬರ್ 5ರಂದು ಹಾಸ್ಟೆಲ್ ಖಾಲಿ ಮಾಡಿ ಪಟ್ಟಣ ಪಂಚಾಯಿತಿಯ ಸುಪರ್ದಿಯಲ್ಲಿರುವ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳೇ ಕಟ್ಟಡ ಕೆಡವಿಲ್ಲ, ಹೊಸ ಕಟ್ಟಡ ನಿರ್ಮಾಣ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳು ಸಮುದಾಯ ಭವನದಲ್ಲೇ ಆಶ್ರಯ ಪಡೆದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ
ಎನ್ಐಎಂಡಿ. ಮನ್ಸೂರ್, ಪ.ಪಂ. ಮಾಜಿ ಸದಸ್ಯ

ಸಾರ್ವಜನಿಕ ಶೌಚಗೃಹವೇ ಗತಿ..!

ಸುವರ್ಣ ಗ್ರಾಮ ಯೋಜನೆ ಅಡಿ ನಿರ್ಮಾಣವಾದ ಸಮುದಾಯ ಭವನವನ್ನು ಪ್ರಸ್ತುತ ಪಟ್ಟಣ ಪಂಚಾಯಿತಿಯು ದಾಸ್ತಾನು ಕೊಠಡಿಯನ್ನಾಗಿಸಿಕೊಂಡಿದೆ. ಈ ಸಮುದಾಯ ಭವನದಲ್ಲಿ ಯಾವುದೇ ಸೌಕರ್ಯಗಳಿಲ್ಲ. ಇರುವ ಸ್ವಲ್ಪ ಜಾಗದ ಒಂದು ಭಾಗದಲ್ಲಿ ಹಳೆಯ ಸಾಮಗ್ರಿಗಳಿದ್ದರೆ ಮತ್ತೊಂದು ಭಾಗದಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಅವರಿಗೆ ವರಾಂಡದಲ್ಲೇ ಅಡುಗೆ ತಯಾರಿಸಬೇಕಿದೆ. ಅವರು ಸಮೀಪದಲ್ಲೇ ಇರುವ ಸಾರ್ವಜನಿಕ ಶೌಚಗೃಹಕ್ಕೆ ತೆರಳಬೇಕಿದೆ. ಇಲ್ಲಿಯೂ ಸಹ ವಿಷಜಂತುಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.