ನೀಟ್–ಯುಜಿ 2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಂಡಿದೆ. ಇನ್ನೊಂದೆಡೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮರುಪರೀಕ್ಷೆಯನ್ನು ಘೋಷಣೆ ಮಾಡಿದೆ. ಈ ನಡುವೆ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಭಾರತ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯು ಶಿಫಾರಸ್ಸುಗಳನ್ನು ಸಲ್ಲಿಸಿದೆ.

ಸಾಂಸ್ಥಿಕ ಸಾಮರ್ಥ್ಯ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಬಲಪಡಿಸಲು ಹಲವು ಕ್ರಮಗಳನ್ನು ತಜ್ಞರ ಸಮಿತಿಯು ನೀಡಿದೆ. ನೀಟ್ ಯುಜಿ–2026 ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ, 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹಾಗಾಗಿ, ಪರೀಕ್ಷೆಯಲ್ಲಿ ಪಾರದರ್ಶಕತೆ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಎನ್ಟಿಎ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಪ್ರತೀ ವರ್ಷ 1 ಕೋಟಿಗೂ ಅಧಿಕ ಅಭ್ಯರ್ಥಿಗಳು ಭಾಗವಹಿಸುವ ಪರೀಕ್ಷೆಯಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಹೊಸ ಕ್ರಮಗಳನ್ನು ಅಳವಡಿಸಲಾಗಿದೆ ಎಂದು NTA ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಿತ ವರ್ಗವು ಎದುರಿಸುತ್ತಿರುವ ಆತಂಕವನ್ನು ಸಂಸ್ಥೆ ಒಪ್ಪಿಕೊಂಡಿದೆ. ಹಾಗಾಗಿ, ಅವರ ಆತಂಕವನ್ನು ದೂರ ಮಾಡುವ ಸಲುವಾಗಿ ಸುಧಾರಣಾ ಕ್ರಮಗಳು ಜಾರಿಗೊಳಿಸಲು ಎನ್ಟಿಎ ಮುಂದಾಗಿದೆ. ಪರೀಕ್ಷೆಯ ಚೌಕಟ್ಟನ್ನು ಬದಲಾಯಿಸಲು ರಚನಾತ್ಮಕ, ತಾಂತ್ರಿಕ ಮತ್ತು ಮಾನವ ಸಂಪನ್ಮೂಲ ಮಧ್ಯಸ್ಥಿಕೆ ಒಳಗೊಂಡ ‘ಸಮಗ್ರ ಮತ್ತು ನಿರಂತರ ಕಾರ್ಯಕ್ರಮದ’ ಭಾಗವಾಗಿದೆ ಎಂದು ತಿಳಿಸಿದೆ.

ನಾಯಕತ್ವ ಬಲಪಡಿಸಲು ಹಿರಿಯ ಅಧಿಕಾರಿಗಳ ನೇಮಕ

ಸುಧಾರಣಾ ಕ್ರಮಗಳ ಭಾಗವಾಗಿ, ಭಾರತ ಸರ್ಕಾರವು ಕಳೆದ ಕೆಲವು ದಿನಗಳಿಂದ ಎನ್ಟಿಎಯ ಆಡಳಿತದ ನಾಯಕತ್ವವನ್ನು ಬಲಪಡಿಸಲು 4 ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ.

ನೇಮಕಾತಿಯಲ್ಲಿ ಇಬ್ಬರು ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮತ್ತು ಇಬ್ಬರು ನಿರ್ದೇಶಕ ಮಟ್ಟದ ಅಧಿಕಾರಿಗಳು ಇರಲಿದ್ದಾರೆ. ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳ ಪ್ರಕಾರ, ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸಂಸ್ಥೆಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ.

ಕೇಂದ್ರ ಸೇವೆಗಳು ಮತ್ತು ಅಂತರ ಸಚಿವಾಲಯದ ನಿಯೋಜನೆಗಳಿಂದ ಅಧಿಕಾರಿಗಳು ಹೆಚ್ಚುವರಿ ಆಡಳಿತಾತ್ಮಕ ಅನುಭವವನ್ನು ಜಾರಿಗೊಳಿಸುತ್ತಾರೆ. ಇದು ಸಂಸ್ಥೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು NTA ಹೇಳಿದೆ.

ವಿಶೇಷ ನಾಯಕತ್ವ ಸ್ಥಾನಗಳು

ಸಂಸ್ಥೆಯು 3 ಪ್ರಮುಖ ತಜ್ಞ ನಾಯಕತ್ವ ಹುದ್ದೆಗಳನ್ನು ಪರಿಚಯಿಸಿದ್ದು, ಅದಕ್ಕಾಗಿ ಅರ್ಜಿ ಕೂಡ ಆಹ್ವಾನಿಸಿದೆ. ಅವುಗಳಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO), ಮುಖ್ಯ ಹಣಕಾಸು ಅಧಿಕಾರಿ (CFO) ಮತ್ತು ಜನರಲ್ ಮ್ಯಾನೇಜರ್ (ಮಾನವ ಸಂಪನ್ಮೂಲ) ಹುದ್ದೆಗಳನ್ನು ಒಳಗೊಂಡಿವೆ.

NTA ಪ್ರಕಾರ, ಈ ನೇಮಕಾತಿಯು ತಂತ್ರಜ್ಞಾನ, ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಉನ್ನತ ಮಟ್ಟದ ಪರಿಣತಿಯನ್ನು ತಂದು ಸಂಸ್ಥೆಯನ್ನು ಹೊಸದಾಗಿ ಮಾರ್ಪಡಿಸಲು ಮತ್ತು ಬಲಿಷ್ಠ ಕಾರ್ಯಾಚರಣೆಯ ವ್ಯವಸ್ಥೆಗಳನ್ನು ಸ್ಥಾಪಿಸಲು ನೆರವಾಲಿವೆ.

ವಿಶಾಲವಾದ ಸಾಂಸ್ಥಿಕ ಸುಧಾರಣೆ

ಉನ್ನತ ಮಟ್ಟದ ತಜ್ಞರ ಸಮಿತಿಯ ಶಿಫಾರಸುಗಳು ಮತ್ತು ಶಿಕ್ಷಣ ಸಚಿವಾಲಯ ಹೊರಡಿಸಿದ ನಿರ್ದೇಶನಗಳಿಗೆ ಅನುಗುಣವಾಗಿ ಜಾರಿಗೆ ತರಲಾಗುತ್ತಿರುವ ದೊಡ್ಡ ಸಾಂಸ್ಥಿಕ ಸುಧಾರಣಾ ಕಾರ್ಯಕ್ರಮದ ಭಾಗವಾಗಿ ತನ್ನ ನಾಯಕತ್ವ ತಂಡವನ್ನು ಬಲಪಡಿಸಲಾಗುತ್ತಿದೆ ಎಂದು NTA ಹೇಳಿದೆ.

ಶಿಫಾರಸ್ಸಿನಲ್ಲಿ ಪ್ರಶ್ನೆಪತ್ರಿಕೆ ತಯಾರಿಕೆ, ಅನುವಾದ, ಮುದ್ರಣ ಮತ್ತು ಪರೀಕ್ಷೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ಒಳಗೊಂಡಿವೆ. ಪ್ರತಿ ಹಂತವೂ ತಂತ್ರಜ್ಞಾನದಿಂದ ಪರಿಶೀಲಿಸಿದ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರಲಿದೆ ಎಂದು ಎನ್ಟಿಎ ಧೃಡಪಡಿಸಿದೆ.

ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು NTA ಆಡಳಿತ ಮಂಡಳಿಯ ನಿಕಟ ಮೇಲ್ವಿಚಾರಣೆ ಮತ್ತು ಬೆಂಬಲದೊಂದಿಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.