ನಿಡಗುಂದಿ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ. ನಾಡು ನುಡಿ, ನೆಲ-ಜಲ ಕಾಪಾಡುವ ಹಾಗೂ ಸಂಸ್ಕೃತಿ - ಪರಂಪರೆ ಉಳಿಸಿ ಬೆಳೆಸುವ ಕಾರ್ಯ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಮಣಗೂರು ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ಸಾಹಿತ್ಯದ ಮೇಲಿರುವ ಹಂಬಲ ಕ್ಷೀಣಿಸುತ್ತಿದೆ. ಮಾತೃಭಾಷೆ, ಆಡಳಿತಭಾಷೆ ಕನ್ನಡವಾಗಿರುವಾಗ ನಾವೆಲ್ಲರೂ ಕನ್ನಡ ವಾತಾವರಣ ಸೃಷ್ಟಿಸೋಣ ಎಂದರು.

ಕಸಾಪ ವಿಜಯಪುರ ನಗರ ಘಟಕದ ಗೌರವಾಧ್ಯಕ್ಷೆ ಜಯಶ್ರೀ ಹಿರೇಮಠ ಮಾತನಾಡಿ, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದ್ದು, ಅತಿ ಹೆಚ್ಚಿನ ಜ್ಞಾನಪೀಠ ಪುರಸ್ಕೃತರನ್ನು ಹೊಂದಿದೆ. ನೆರೆಯ ರಾಜ್ಯಗಳ ಪ್ರಭಾವದಿಂದ ಕನ್ನಡ ಭಾಷಿಕರ ಸಂಖ್ಯೆ ಕುಸಿತಗೊಂಡಿದೆ. ಕನ್ನಡ ಅನ್ನದ ಭಾಷೆಯಾಗಿ ಕಡ್ಡಾಯಗೊಳಿಸಬೇಕು ಎಂದರು. ನಿಡಗುಂದಿ ತಾಲ್ಲೂಕು ಕಸಾಪ ಅಧ್ಯಕ್ಷ ಸಂಗಮೇಶ ಕೆಂಭಾವಿ ಮಾತನಾಡಿದರು.

ಈ ವೇಳೆ ಪರಿಷತ್ತಿನ ಪದಾಧಿಕಾರಿಗಳಾದ ಶಶಿಧರ ಪಾಟೀಲ, ಚನ್ನಬಸಪ್ಪಗೌಡ ಬಿರಾದಾರ, ಮಲ್ಲಯ್ಯ ಬೂದಿಹಾಳಮಠ, ಬಸವರಾಜ ಗೌಡರ, ನಜೀರ ಗುಳೇದ, ಬಸವರಾಜ ಒಂದಾಳ, ರಾಜು ತೊರಗಲ್ಲಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-483585164

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.