ನಿಪ್ಪಾಣಿ: ‘ಶಿಕ್ಷಣಕ್ಕಿಂತ ದೊಡ್ಡ ಶಕ್ತಿ ನಮ್ಮ ದೇಶದಲ್ಲಿ ಯಾವುದೂ ಇಲ್ಲ. ಬಡತನ ಪರಿಸ್ಥಿತಿಯಲ್ಲೂ ದೊಡ್ಡ ಕನಸುಗಳನ್ನು ನನಸಾಗುವುದು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ಜೀವನದಲ್ಲಿ ದೊಡ್ಡ ಕನಸುಗಳನ್ನು ಇಟ್ಟುಕೊಳ್ಳಬೇಕು’ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್ಸಿಯು)ದ ಆಡಳಿತ ವಿಭಾಗದ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು.

ಸ್ಥಳೀಯ ವಿಎಸ್ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ-ಎಂಸಿಎ ವಿಭಾಗದಿಂದ ವಿಎಸ್ಎಂ ಕನ್ವೆನ್ಶನಲ್ ಹಾಲ್ನಲ್ಲಿ ಗುರುವಾರ ನಡೆದ ‘ಅನ್ವೇಷಣೆ 2026’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತಂತ್ರಜ್ಞಾನವನ್ನು ನಮ್ಮ ಜ್ಞಾನದ ವೃದ್ಧಿಗಾಗಿ ಬಳಸಬೇಕು. ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆ ಪ್ರಕಾರ ಪ್ರತಿಯೊಬ್ಬರ ಏಕಾಗ್ರತೆ ಕೇವಲ 7 ಸೆಕೆಂಡ್ಗೆ ಬಂದು ನಿಂತಿದೆ. ಈಗ ನಿಮ್ಮ ಏಕಾಗ್ರತೆ ಕೇವಲ ಪುಸ್ತಕ, ಅಧ್ಯಯನದ ಮೇಲೆ ಇರಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ‘ವಿದ್ಯಾರ್ಥಿಗಳು ಆಡಳಿತ ಮಂಡಳಿಯ ನಿಯೋಜನೆಗೆ ತಕ್ಕಂತೆ ಪರಿಶ್ರಮಪಟ್ಟು ಪ್ರಯತ್ನಿಸಿದಲ್ಲಿ ಅವರ ಭವಿಷ್ಯ ಸಾರ್ಥಕವಾಗುತ್ತದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿರುವುದು ಅನುಕರಣೀಯ’ ಎಂದು ತಿಳಿಸಿದರು.

ಆರ್ಸಿಯೂದಿಂದ ‘ಇವಿದ್ಯಾ’ ಪೋರ್ಟಲ್ ಆರಂಭಿಸಿದ್ದು ವಿದ್ಯಾರ್ಥಿಗಳು ಇಲ್ಲಿ ಲಾಗಿನ್ ಆಗಿ ಅಧ್ಯಯನದ ಒಳ್ಳೆಯ ವಿಡಿಯೋಗಳನ್ನು ನೋಡಬಹುದು. 340 ಕಾಲೇಜುಗಳನ್ನು ಹೊಂದಿರುವ 50 ಕಾಲೇಜುಗಳಲ್ಲಿ ಆರ್ಸಿಯೂ ಫೆಸ್ಮಾ ಯೋಜನೆ ಆರಂಭಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗವಕಾಶ ಪಡೆಯುವುದು ಗ್ಯಾರಂಟಿ’ ಎಂದರು.

ಸಂಚಾಲಕ ವಕೀಲ ಸಂಜಯ ಶಿಂತ್ರೆ, ಸಿಇಒ ಸಿದ್ಧಗೌಡ ಪಾಟೀಲ ಮಾತನಾಡಿದರು. ಮಂಡಳದ ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಸಂಚಾಲಕ ಸಂಜಯ ಮೊಳವಾಡೆ, ಸಚಿನ ಹಾಲಪ್ಪನವರ, ಪ್ರಾಚಾರ್ಯ ಉಮೇಶ ಪಾಟೀಲ, ಎಲ್ಲ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಎಂಬಿಎ ವಿಭಾಗದ ಮುಖ್ಯಸ್ಥ ಪ್ರವೀಣ ಪಾಟೀಲ, ಎಂಸಿಎ ವಿಭಾಗದ ಮುಖ್ಯಸ್ಥೆ ಗಾಯತ್ರಿ ಪಾಟೀಲ, ಉಪನ್ಯಾಸಕಿ ಶೃತಿ ಪಾಟೀಲ, ಉಪನ್ಯಾಸಕಿ ಶ್ರದ್ಧಾ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-21-1227989876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.