ನಿಪ್ಪಾಣಿ: ‘ಆರ್ಐಟಿ ಹ್ಯಾಕಥಾನ್ 2026’ರಲ್ಲಿ ಸ್ಥಳೀಯ ವಿಎಸ್ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್ಎಂಎಸ್ಆರ್ಕೆಐಟಿ)ದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ರಾಜಾರಾಮನಗರದ ರಾಜಾರಾಮ ಬಾಪು ತಾಂತ್ರಿಕ ಮಹಾವಿದ್ಯಾಲಯ (ಆರ್ಐಟಿ)ದ ಸಿಎಸ್ಇ (ಎಐ ಮತ್ತು ಎಂಎಲ್) ವಿಭಾಗವು ಭಾರತ ಫೋರ್ಜ್ ಸಹಯೋಗದೊಂದಿಗೆ ಈಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ‘ಸ್ಟ್ರಕ್ಚರಲ್ ಮಾಡೆಲಿಂಗ್ ಆಂಡ್ ಇಂಟೆಲಿಜೆಂಟ್ ಡಿಜೈನ್’ ವಿಷಯದಲ್ಲಿ ವಿಎಸ್ಎಂಎಸ್ಆರ್ಕೆಐಟಿ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ವಿಎಸ್ಎಂಎಸ್ಆರ್ಕೆಐಟಿಯ ಸಿಎಸ್ಇ ಮತ್ತು ಎಐಎಂಎಲ್ ವಿಭಾಗದ 6ನೇಯ ಸೆಮಿಸ್ಟರ್ನ ತಮನ್ನಾಬಾನು ಗವಂಡಿ ನೇತೃತ್ವದ ರಕ್ಷಿತಾ ಸ್ವಾಮಿ, ವೀನಾ ಪಾಟೀಲ ಮತ್ತು ವೈಷ್ಣವಿ ಚೌಗುಲೆ ವಿದ್ಯಾರ್ಥಿನಿಯರ ತಂಡವು ಸ್ಪರ್ಧೆಯಲ್ಲಿ ವಿಜೇತರಾಗಿ ವಿಎಸ್ಎಂಎಸ್ಆರ್ಕೆಐಟಿಯ ಕಿರೀಟದಲ್ಲಿ ಮತ್ತೊಂದು ಗರಿ ಸೇರಿಸಿದ್ದಾರೆ ಎಂದು ಪ್ರಾಚಾರ್ಯ ಡಾ.ಉಮೇಶ ಪಾಟೀಲ ಹೇಳಿದರು.

ಯಶಸ್ವಿ ವಿದ್ಯಾರ್ಥಿಗಳಿಗೆ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ ಮತ್ತು ಆಡಳಿತ ಮಂಡಳಿಯ ಸದಸ್ಯರು, ಸಿಇಒ ಡಾ.ಸಿದ್ಧಗೌಡ ಪಾಟೀಲ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-21-1519790625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.