ನ್ಯಾಮತಿ: ಕನ್ನಡ ನಾಡು, ನುಡಿ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದರು ಎಂದು ಇತಿಹಾಸ ಉಪನ್ಯಾಸಕ ಜಿ.ದೊಡ್ಡಪ್ಪ ಹೇಳಿದರು.

ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಂಸ್ಕೃತಿಕ ಶ್ರೀಮಂತಿಕೆಯ ನಾಡು ಕರ್ನಾಟಕ. ನಿಘಂಟು ಪ್ರಭಣ್ಣ, ರೈತ ಮುಖಂಡ ಎಚ್.ಎಸ್.ರುದ್ರಪ್ಪ, ಜಲತರಂಗ ದೇವೇಂದ್ರಪ್ಪ, ಎಚ್.ದೇವೀರಪ್ಪ ಅವರು ನ್ಯಾಮತಿ ತಾಲ್ಲೂಕಿನವರು ಎಂಬುದು ಹೆಮ್ಮೆಯ ವಿಚಾರ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ನಿರ್ದೇಶಕ ಸೈಯದ್ ಅಫ್ಸರ್ ಪಾಷಾ, ‘ಕನ್ನಡ ಭಾಷೆ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿ.ಗಣೇಶ ದತ್ತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಂ.ಪಿ.ಅರುಣಕುಮಾರ ಮಾಸಡಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ವಾಸಪ್ಪ, ನಿರ್ದೇಶಕರಾದ ರಾಜೀವ್, ರವಿಕುಮಾರ ಅವರನ್ನು ಗೌರವಿಸಲಾಯಿತು.

ಪರಿಷತ್ತಿನ ಗಡೆಕಟ್ಟೇರ ನಿಜಲಿಂಗಪ್ಪ, ಜಿ.ಪಿ.ಚಂದನ್, ರಬ್ಬಳಿಗೆ ಸುಂದರೇಶ, ಬಿ.ಜಯರಾಂ, ಎಂ.ಜಿ.ಕವಿರಾಜ, ಬಿ.ಆರ್.ಉಷಾ, ಬಿ.ಜಿ.ಚೈತ್ರಾ, ಆದ್ವಿಕಾ ಕಾವ್ಯಾ, ಲಲಿತಾ, ರೇಖಾ ಶೇಟ್, ಈ. ಸುಮಲತಾ, ಎಸ್.ಜಿ.ಬಸವರಾಜಪ್ಪ, ಫಾಲಾಕ್ಷಪ್ಪ, ಎನ್.ಎಸ್. ಅರುಣಕುಮಾರ, ಎಂ.ಬಿ.ಶಿವಯೋಗಿ, ರಾಷ್ಟ್ರೀಯ ಬಸವದಳದ ಸೌಭಾಗ್ಯ ಎಸ್. ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-43-1132639730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.