ನ್ಯಾಮತಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಯುವಕರಲ್ಲಿ ಅಡಗಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದು ರಾಷ್ಟ್ರೀಯ ಬಸವದಳದ ಸಂಚಾಲಕಿ ಹುಬ್ಬಳ್ಳಿಯ ನೀಲಾಂಬಿಕಾ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 26ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಕಾಯಕದೊಂದಿಗೆ ಜ್ಞಾನ ಸಂಪಾದನೆಗೆ ರೈತರು ಗಮನಹರಿಸಬೇಕು ಎಂದು ವಿಶ್ವಮಾನವ ಟ್ರಸ್ಟ್ ಸಂಸ್ಥಾಪಕ ಆವರಗೆರೆ ರುದ್ರಮುನಿ ಹೇಳಿದರು.

ಪೊಲೀಸರಿಗೆ ಸರಿಸಮನಾಗಿ ಕೆಲಸ ನಿರ್ವಹಿಸುವಲ್ಲಿ ಗೃಹರಕ್ಷಕದಳ ಸಿಬ್ಬಂದಿ ಸಿದ್ಧರಿರುತ್ತಾರೆ ಎಂದು ಹೇಳಿದ ಗೃಹರಕ್ಷಕ ದಳದ ತಾಲ್ಲೂಕು ಪ್ಲಟೂನ್ ಎಂ. ರಾಘವೇಂದ್ರ, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ನಿರ್ವಹಿಸುವ ಜವಾಬ್ದಾರಿಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು.

ನಿವೃತ್ತ ಶಿಕ್ಷಕ ಯರಗನಾಳ್ ಮಂಜಪ್ಪ ಅವರು ಪರಿಸರದಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸ್ವ-ಉದ್ಯೋಗ ಕೈಗೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ತ್ಯಾಜವಳ್ಳಿ ರಾಜಪ್ಪ ಅವರು ಬಸವ ಪುರಾಣ ಗ್ರಂಥ ಮತ್ತು ಹಿಂದಿನವರ ಕೈಬರಹದ ಪುಸ್ತಕಗಳನ್ನು ಪ್ರದರ್ಶಿಸಿ, ನ್ಯಾಮತಿ ಪಟ್ಟಣದ ಇತಿಹಾಸವನ್ನು ವಿವರಿಸಿದರು.

ಬಸವದಳದ ಎಸ್.ಸೌಭಾಗ್ಯ ಮತ್ತು ಸಾಹಿತಿ ಗುಡ್ಡೆಹಳ್ಳಿ ಎ.ಕೆ. ಮಲ್ಲಪ್ಪ ಅವರು ನೃತ್ಯ–ಗಾಯನ ನಡೆಸಿಕೊಟ್ಟರು. ಆರುಂಡಿ ಮಂಜಪ್ಪ, ರೇಖಾ ಶೇಟ್, ರೇವಣಸಿದ್ದಪ್ಪ, ಸತೀಶ ಬಿದರಕಟ್ಟೆ, ಕುಮಾರಿ ವೈಷ್ಣವಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿ ದ್ದರು. ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ಶಿವ ಯೋಗಿ, ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ಕವಿರಾಜ. ನಾಗರಾಜ ಗೋರೋಳ್, ಜಿ.ನಿಜಲಿಂಗಪ್ಪ, ಎಂ.ಎಸ್. ಜಗದೀಶ, ಎಸ್.ಜಿ.ಬಸವರಾಜಪ್ಪ, ಜಿ.ಡಾಕಪ್ಪ, ಚಂದನ್ ಜಂಗ್ಲಿ, ಸೈಯದ್ ಅಪ್ಸರ್ ಪಾಷ, ಉಮಾದೇವಿ, ಈ. ಸುಮಲತಾ, ವನಿತಾ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-43-411469424

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.