ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದಿದೆ. ರಾಜ್ಯದ ಇತಿಹಾಸದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಹೆಮ್ಮೆಯ ವಿಷಯ. ರಾಜ್ಯದ ಶೇಕಡಾ 94.1ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರಿಗೆಲ್ಲ ಅಭಿನಂದನೆಗಳು.

ಕೇವಲ ಶೇಕಡಾ 6 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಅಷ್ಟೇನು ಕಳವಳಕಾರಿಯಲ್ಲ. ಪರೀಕ್ಷೆ-2ರಲ್ಲಿ ಈ ಎಲ್ಲಾ ವಿದ್ಯಾರ್ಥಿಗಳು ಪಾಸಾಗುವ ಸಾಧ್ಯತೆ ಹೆಚ್ಚಿದೆ. ಪರೀಕ್ಷೆಯಲ್ಲಿ ಎಲ್ಲರೂ ಪಾಸಾಗಲು ಸಾಧ್ಯವಿಲ್ಲ. ಅವರವರ ಸಾಮರ್ಥ್ಯ ಮತ್ತು ಮಾಹಿತಿಯ ಕೊರತೆಯಿಂದ ಕೆಲವರು ಫೇಲಾಗಿರಬಹುದು.

ಫೇಲಾಗುವುದು ಸಹ ಯಶಸ್ಸಿನ ಮೊದಲ ಮೆಟ್ಟಿಲು. ಫೇಲಾದಾಗಲೇ ಬದುಕಿನ ಸತ್ಯ ಅರಿವಾಗುತ್ತದೆ. ಹೊಸ ಹೊಸ ದಾರಿಗಳ ಹುಡುಕಾಟ ಶುರುವಾಗುತ್ತದೆ. ಸೋತು ಗೆದ್ದಾಗ ಇನ್ನೆಂದೂ ಸೋಲಬಾರದೆಂಬ ಹಠ ಮೂಡುತ್ತದೆ. ಇದು ಯಶಸ್ಸಿನ ಮೊದಲ ಕೀಲಿಕೈ.
.SSLC Results: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ, ಶೇ 94.1 ಮಂದಿ ಪಾಸ್ .SSLC Results: ಗ್ರಾಮೀಣ ಸರ್ಕಾರಿ ಶಾಲೆಯ ಪ್ರಾರ್ಥನಾ ಪಾಟೀಲ ರಾಜ್ಯಕ್ಕೆ ಪ್ರಥಮ.
ಪರೀಕ್ಷಾ ಫಲಿತಾಂಶ ಜೀವನದ ಒಂದು ಅಧ್ಯಾಯ ಅಷ್ಟೇ. ಪಾಸಾದವರಿಗೆ ಒಂದೇ ಅವಕಾಶವಾದರೆ ಫೇಲಾದವರಿಗೆ ನೂರಾರು ಅವಕಾಶಗಳು ಸಿಗುತ್ತವೆ. ಫೇಲಾದರೆ ಮಾತ್ರ ಬದುಕಿನಲ್ಲಿ ಅಂತಹ ಅನೇಕ ಪರೀಕ್ಷೆಗಳನ್ನು ಎದುರಿಸುವ ಹಾಗೂ ಎಲ್ಲಾ ಪರೀಕ್ಷೆಗಳಿಂದ ಹೊಸ ಹೊಸ ಅಂಶಗಳನ್ನು ಕಲಿಯುವಂತಹ ಅವಕಾಶ ಸಿಗುತ್ತದೆ. ಅಂಕಗಳನ್ನು ಲೆಕ್ಕಿಸದೆ ಯಶಸ್ಸಿನತ್ತ ಹೆಜ್ಜೆ ಹಾಕಿದರೆ ನೂರಾರು ಭವಿಷ್ಯದ ಅವಕಾಶಗಳು ದೊರೆಯುತ್ತವೆ.

ಪ್ರಪಂಚದ ಯಶಸ್ಸು ಪರೀಕ್ಷಾ ಅಂಕಗಳಿಗಿಂತ ವಿಮರ್ಶಾತ್ಮಕ ಚಿಂತನೆ, ಸ್ಥಿತಿಸ್ಥಾಪಕತ್ವ, ಭಾವನಾತ್ಮಕ ಪರಿಪಕ್ವತೆ ಮತ್ತು ಇತರರೊಂದಿಗೆ ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅನುತ್ತೀರ್ಣತೆ ಅದನ್ನೆಲ್ಲಾ ಕಲಿಯಲು ಅವಕಾಶ ನೀಡುತ್ತದೆ.

ಎಸ್ಎಸ್ಎಲ್ಸಿ ಪಾಸಾದವರಿಗೆ ಕಾಲೇಜು ಸೇರುವುದು ಒಂದೆ ದಾರಿಯಾದರೆ, ಫೇಲಾದವರಿಗೆ ಬದುಕಲು ನೂರಾರು ದಾರಿಗಳಿವೆ. ಕೆಲವು ಶಿಕ್ಷಣ ಸಂಸ್ಥೆಗಳು ಫೇಲಾದವರಿಗೆ ಕೆಲವು ಕೋರ್ಸ್ಗಳನ್ನು ನೀಡುತ್ತದೆ. ಉದಾಹರಣೆಗೆ ಮೈಸೂರಿನ ಸಿಪೆಟ್, ಜಿಟಿಟಿಸಿಯಂತಹ ಕೆಲವು ಸಂಸ್ಥೆಗಳು ಎಸ್ಎಸ್ಎಲ್ಸಿ ಫೇಲಾದವರಿಗೂ ಸೀಮಿತ ಅವಧಿಯ ಕೋರ್ಸ್ಗಳನ್ನು ತೆರೆದಿದೆ. ಇಂತಹ ಕೋರ್ಸ್ಗಳು ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿವೆ.

ಅನುತೀರ್ಣರಾಗಲು ನೀವೊಬ್ಬರೇ ಕಾರಣರಲ್ಲ

ಪರೀಕ್ಷೆಯಲ್ಲಿ ಅನುತೀರ್ಣರಾಗಲು ನೀವೊಬ್ಬರೇ ಕಾರಣರಲ್ಲ. ನಿಮ್ಮ ಸುತ್ತಮುತ್ತಲಿನ ಪರಿಸರ, ನಿಮ್ಮ ಕಲಿಕಾ ಸಾಮರ್ಥ್ಯ, ಕಲಿಕಾ ಅಂಶಗಳು, ಮೌಲ್ಯಮಾಪನ ವ್ಯವಸ್ಥೆ ಇವೆಲ್ಲವೂ ಕಾರಣವಾಗಿರುತ್ತವೆ. ಪರೀಕ್ಷೆಯಲ್ಲಿ ಕೇವಲ ನಿಮ್ಮ ಕಲಿಕಾ ಸಾಮರ್ಥ್ಯವನ್ನು ಮಾತ್ರ ಅಳೆಯಲಾಗುತ್ತದೆಯೇ ಹೊರತು ನಿಮ್ಮಲ್ಲಿನ ಕೌಶಲ್ಯವನ್ನಲ್ಲ ಎಂಬುದು ನೆನಪಿರಲಿ. ನೀವೊಬ್ಬ ಉತ್ತಮ ಕೌಶಲ್ಯಾಧಾರಿತ ಮೆಕ್ಯಾನಿಕ್ ಆಗಿದ್ದರೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದ ವ್ಯಕ್ತಿ ನಿಮ್ಮ ಬಳಿ ವಾಹನ ರಿಪೇರಿಗೆಂದು ಬರುತ್ತಾನೆ.

ಈಗಿನ ಪರೀಕ್ಷೆಗಳು ಕಂಠಪಾಠಕ್ಕೆ ಹೆಚ್ಚಿನ ಪ್ರಧಾನ್ಯತೆ ಕೊಡುತ್ತವೆ ಎಂಬುದು ನಿಮಗೂ ತಿಳಿದಿದೆ. ಆದರೆ ಕಂಠಪಾಠವೇ ಜೀವನವಲ್ಲ ಎಂಬುದನ್ನು ತಿಳಿಯಿರಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಜೀವನದ ವೈಫಲ್ಯವಲ್ಲ. ಬದಲಿಗೆ ಹೊಸ ಹೊಸ ಮಾರ್ಗಗಳನ್ನು ಕಲಿಯಲು, ಬದುಕನ್ನು ಸುಂದರಗೊಳಿಸಿಕೊಳ್ಳಲು ಸಿಗುವ ಮಹತ್ತರ ಅವಕಾಶ.

ಪರೀಕ್ಷೆಯ ಪ್ರಮಾಣಪತ್ರಗಳಿಗಿಂತ ಬದುಕಿನಲ್ಲಿ ನಿಮ್ಮ ಪಾತ್ರ, ಸಹಾನುಭೂತಿ ಮತ್ತು ದಯೆ ಅರ್ಥಪೂರ್ಣ ಜೀವನ ಬಹಳ ಮುಖ್ಯವಾಗಿರುತ್ತದೆ. ಇನ್ನೊಬ್ಬರ ಮೇಲೇ ಅವಲಂಬಿತರಾಗದೇ ನಿಮ್ಮ ಸ್ವಂತ ಶಕ್ತಿಯ ಮೇಲೆ ಬೆಳೆಯಲು ಇರುವ ಏಕೈಕ ಅವಕಾಶ ಇದು ಎಂದು ಭಾವಿಸಿ ಮುಂದೆ ಹೆಜ್ಜೆ ಇಡಿ. ಅದಕ್ಕಾಗಿ ನಿಮ್ಮ ಕುಟುಂಬದವರ, ಹಿರಿಯರ, ಗುರುಗಳ, ಸ್ನೇಹಿತರ ಮಾರ್ಗದರ್ಶನ ಪಡೆಯಿರಿ.

ಫಲಿತಾಂಶದಿಂದ ನಿಮ್ಮ ಪ್ರಯಾಣ ಮುಗಿದಿಲ್ಲ. ಅದು ಈಗ ಶುರುವಾಗಿದೆ. ಅದರಲ್ಲಿ ನಿಮ್ಮ ಸಾಮರ್ಥ್ಯಕ್ಕನುಗುಣವಾದ ವೃತ್ತಿಯನ್ನು, ಮಾರ್ಗವನ್ನು ಆರಿಸಿಕೊಳ್ಳಲು ನೀವೀಗ ಸ್ವತಂತ್ರರು.
.SSLC ಫಲಿತಾಂಶ: ಶಿಕ್ಷಣ ಇಲಾಖೆ ಎಡವಟ್ಟಿನಿಂದ ಅಂಧ ವಿದ್ಯಾರ್ಥಿನಿಗೆ ಅನ್ಯಾಯ.SSLC Results 2026: ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸಾಧನೆ ಏನು?.
ಫೇಲಾದೆ ಎಂಬ ನಿರಾಶೆ ಬೇಡ

ಫೇಲಾದೆ ಎಂದು ನಿರಾಶೆರಾಗಬೇಡಿ. ಏಕೆಂದರೆ ಇಡೀ ಪ್ರಪಂಚದ ಸಾಧಕರರಲ್ಲಿ ಫೇಲಾದವರ ಸಂಖ್ಯೆ ಹೆಚ್ಚಿದೆ. ಪಾಸಾದವರಿಗಿಂತ ಫೇಲಾದವರಲ್ಲಿ ಮೃದು ಕೌಶಲ್ಯಗಳು ಹೆಚ್ಚಾಗಿ ಬೆಳೆಯುತ್ತವೆ. ಅವುಗಳೆಂದರೆ ಪರಿಣಾಮಕಾರಿ ಸಂವಹನ, ನಾಯಕತ್ವ, ತಂಡದ ಕೆಲಸ, ವಿಮರ್ಶಾತ್ಮಕ ಚಿಂತನೆ, ಸಮಯ ನಿರ್ವಹಣೆ, ಸಾರ್ವಜನಿಕ ಭಾಷಣ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಮುಂತಾದವು ಸೇರಿವೆ. ಶೈಕ್ಷಣಿಕ ಕೌಶಲ್ಯತೆಗಿಂತ ಭಿನ್ನವಾಗಿ ಮೃದು ಕೌಶಲ್ಯಗಳು ಇಂದು ಹೆಚ್ಚು ಬೇಡಿಕೆಯಲ್ಲಿವೆ. ಕ್ರೀಡೆ, ರಂಗಭೂಮಿ, ಸಂಗೀತ ಮತ್ತು ಸ್ವಯಂಸೇವೆಯಂತಹ ಪಠ್ಯೇತರ ಚಟುವಟಿಕೆಗಳು ಮೃದು ಕೌಶಲ್ಯಗಳ ಅಭಿವೃದ್ಧಿಗೆ ಸಹಕಾರಿಯಾಗಿವೆ.

ಇಂದಿನ ತಂತ್ರಜ್ಞಾನವು ಮೃದು ಕೌಶಲ್ಯಗಳ ಅಭಿವೃದ್ಧಿಗೆ ಸೃಜನಾತ್ಮಕ ಪರಿಹಾರಗಳನ್ನು ನೀಡುತ್ತಿದೆ. ಅದನ್ನು ಬಳಸಿಕೊಂಡು ನಿಮ್ಮಲ್ಲಿನ ಜ್ಞಾನವನ್ನು ಕೌಶಲ್ಯವನ್ನಾಗಿ ಪರಿವರ್ತಿಸಿಕೊಳ್ಳಿ. ಖಂಡಿತ ನಿಮ್ಮ ಜೀವನ ಮಾದರಿಯಾಗುತ್ತದೆ.

ಲೇಖಕರು: ಶಿಕ್ಷಕರು ಹಾಗೂ ಬರಹಗಾರರು, ಹೊಳಗುಂದಿ(ಪೊ) ಹೂವಿನಹಡಗಲಿ(ತಾ) ವಿಜಯನಗರ(ಜಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.