ಪಡುಬಿದ್ರಿ: ‘ನಮಗೆ ಬೇಕಾಗಿರುವುದು ಸುಸಂಸ್ಕೃತತೆಯೊಂದಿಗೆ ಕೂಡಿದ ಪವಿತ್ರವಾದ ಜ್ಞಾನ. ಅಂತಹ ಜ್ಞಾನವು ವ್ಯಕ್ತಿಯನ್ನು ಮಾತ್ರವಲ್ಲ, ಸಮಾಜವನ್ನೂ ಸನ್ಮಾರ್ಗದಲ್ಲಿ ನಡೆಸುತ್ತದೆ. ಆತ್ಮನಿರ್ಭರತೆ ಹಾಗೂ ಸಂಸ್ಕಾರ ಬೆಳೆಸುವ ಶಿಕ್ಷಣವೇ ನಮ್ಮ ದೇಶಕ್ಕೆ ಅವಶ್ಯಕ’ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ 75ರ ಅಮೃತ ಮಹೋತ್ಸವದ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಕಾರವಿಲ್ಲದ ಜ್ಞಾನವು ಕೇವಲ ಪುಸ್ತಕಗಳಲ್ಲಿ ಸೀಮಿತವಾಗಿರುವ ಮಾಹಿತಿಯಷ್ಟೇ ಆಗುತ್ತದೆ. ಅಂಥ ಜ್ಞಾನವನ್ನು ಮಸ್ತಕಕ್ಕೆ ತುಂಬಿಸಿಕೊಂಡವರು ನಿಜವಾದ ದಾರಿಯನ್ನು ಕಳೆದುಕೊಂಡು, ಪೆನ್ನೂ ಹಿಡಿಯಬೇಕಾದ ಕೈಗಳಲ್ಲಿ ಗನ್ನು ಹಿಡಿಯುವ ಮಟ್ಟಕ್ಕೂ ಇಳಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ ಶ್ರೀಗಳು, ಶ್ರೀಕೃಷ್ಣ ಅವರ ಪ್ರೇರಣೆಯಿಂದ ವಿಭುದೇಶ ತೀರ್ಥರು ಸ್ಥಾಪಿಸಿದ ಈ ಶಿಕ್ಷಣ ಸಂಸ್ಥೆ, ಸುಶಿಕ್ಷಿತ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದರು.

ಇಂಡಿಯಾ ಅಲ್ಲ ಭಾರತ: ಇನ್ನು ಮುಂದೆ ಇಂಡಿಯಾ ಬದಲು ಭಾರತ ಎಂದು ಕರೆಯೋಣ. ಸಿಂಹದ ಬಾಯಿ ತೆರೆದು ಹಲ್ಲು ಎಣಿಸಿದ ಭರತ ರಾಜ ಶೌರ್ಯ, ಧೈರ್ಯಶಾಲಿಯಾಗಿದ್ದರು. ಅಂತಹ ಭರತ ಚಕ್ರವರ್ತಿಗಳಂತೆ ಮಕ್ಕಳನ್ನು ರೂಪಿಸಬೇಕು ಎಂಬ ಮಹತ್ತರ ಕನಸನ್ನು ವಿಭುದೇಶ ತೀರ್ಥರು ಕಂಡಿದ್ದರು. ಅವರ ಆಶಯವೇ, ಜ್ಞಾನ ಮಾತ್ರವಲ್ಲ, ಸಂಸ್ಕಾರ ಮತ್ತು ಮೌಲ್ಯಗಳನ್ನೂ ಒಳಗೊಂಡ ಶಿಕ್ಷಣದ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.

ಬಳಿಕ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀಈಶಪ್ರಿಯ ತೀರ್ಥರು, ‘ವಿಬುಧೇಶ ತೀರ್ಥರ ದೂರದೃಷ್ಟಿಯೇ ಸಂಸ್ಥೆಯ ಬೆಳವಣಿಗೆಗೆ ಕಾರಣವಾಯಿತು. ಅದಮಾರು ಶಿಕ್ಷಣ ಸಂಸ್ಥೆಯಿಂದಲೇ ಭಾರತದ ಬೆಳವಣಿಗೆಯ ಕನಸನ್ನವರು ಕಂಡಿದ್ದರು. ಶಾಲೆಗಳ ಮೂಲಕ ಚಿರಪರಿಚಿತರಾಗಿ ಆಂಗ್ಲಮಾಧ್ಯಮ ಶಿಕ್ಷಣವನ್ನು ಆರಂಭಿಸಿದರು. ವಿಜ್ಞಾನದ ಬಗೆಗೂ ಅವರಿಗಿದ್ದ ಅಸದೃಶ ಒಲವನ್ನು ನೆನಪಿಸಿಕೊಂಡು, ಮತ್ತೊಮ್ಮೆ ನಮ್ಮ ವಿದ್ಯಾರ್ಥಿಗಳೂ ಅದರಿಂದ ಪ್ರೇರಿತರಾಗಲಿ ಎಂದು ಆಶಿಸಿ, ಈ ಅಮೃತ ಮಹೋತ್ಸವವನ್ನು ವಿಜ್ಞಾನಿಗಳ ಸಮ್ಮಿಲನದೊಂದಿಗೆ ನಡೆಸಲಾಗಿದೆ’ ಎಂದು ಹೇಳಿದರು.

ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ‘ಪಾಶ್ಚಾತ್ಯ ಸಂಸ್ಕೃತಿಗೆ ಇಂದು ನಾವು ವಾಲುತ್ತಿದ್ದೇವೆ. ಇಂದಿನ ನಮ್ಮ ಜೀವನವು ಎಲ್ಲವುಗಳ ಸರಕಾಗಿದೆ. ಅವುಗಳ ನಡುವೆ ಮಾನವೀಯತೆ ಮರೆತಿದ್ದೇವೆ. ಬದುಕಿನ ಬಗೆಗೆ ಸತ್ ಚಿಂತನೆಯೇ ನಮ್ಮಲ್ಲಿ ಇಲ್ಲವಾಗಿದೆ. ಧರ್ಮ, ಸಂತ ಪರಂಪರೆಯ ಈ ನಾಡಿನಲ್ಲಿ ನಾವು ಬದುಕಿನ ಸಾರ್ಥಕ್ಯವನ್ನು ಹೊಂದಬೇಕು’ ಎಂದರು.

ಶತಾವಧಾನಿ ರಾಮನಾಥ ಆಚಾರ್ಯ, ಕೆ.ಜಿ. ಸುರೇಶ್ ರಾವ್, ನಿವೃತ್ತ ಪ್ರಾಂಶುಪಾಲರಾದ ಬಿ.ಆರ್. ನಾಗರತ್ನ ರಾವ್, ಎಂ.ಎಲ್. ಲಕ್ಷ್ಮಿನಾರಾಯಣ ರಾವ್, ನಾರಾಯಣ ಹೆಬ್ಬಾರ್, ಸದಾಶಿವ ಪಡುಬಿದ್ರಿ ಮಾತನಾಡಿದರು.

ಸೋಮಶೇಖರ ಭಟ್, ಗುರುಮೂರ್ತಿ, ವೈ.ಎನ್. ಶೆಟ್ಟಿ ಇದ್ದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರನ್ನು ಗೌರವಿಸಲಾಯಿತು.

ಶಿಕ್ಷಕಿ ರಾಧಿಕಾ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಪ್ರತಿಮಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಮಾಧವಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-28-690608133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.