ನಮಸ್ತೆ,

ನಿಮ್ಮ ಮಗು ಬೇಸಿಗೆ ರಜೆ ಮುಗಿಸಿ ಬಂದು ಅಥವಾ ಪುಟ್ಟ ಮಗುವಾಗಿದ್ದರೆ ಇದೇ ಮೊದಲ ಬಾರಿ ಶಾಲೆಯ ತರಗತಿಯಲ್ಲಿ ಕೂತಿದೆ. ಸಣ್ಣ ಮಟ್ಟದ ಗಾಬರಿ, ಭಯದಿಂದ ಮುದುಡಿದೆ. ಕಣ್ಣುಗಳಲ್ಲಿ ಹೊಸ ಜಗತ್ತೊಂದು ಅಂಬೆಗಾಲಿಡುತ್ತಿದೆ. ಅದರ ಪಾಲಿಗೆ ಇನ್ನುಮುಂದೆ ಎರಡು ಜಗತ್ತು. ಒಂದು ಮನೆ, ಇನ್ನೊಂದು ಶಾಲೆ. ಒಂದರಲ್ಲಿ ನೀವು ಇರುತ್ತೀರಿ, ಇನ್ನೊಂದರಲ್ಲಿ ನಾವು. ಇಬ್ಬರೂ ಸೇರಿ ಎಳೆಯಬೇಕು ಮಗುವಿನ ಬದುಕಿನ ತೇರು.

ಮಗು ಶಾಲೆಗೆ ಹೊರಟಾಯಿತು, ಅಲ್ಲಿಗೆ ನನ್ನ ಜವಾವ್ದಾರಿ ಮುಗಿಯಿತು ಎಂದು ನೀವು ಭಾವಿಸಬಾರದು. ಅಸಲಿಗೆ ನಿಮ್ಮ ಜವಾವ್ದಾರಿ ಇಂದಿನಿಂದ ಹೆಚ್ಚಾಗಿದೆ. ನಿಮ್ಮ ಮಗು ಈಗ ಸಮಾಜಕ್ಕೆ ತೆರೆದುಕೊಂಡಿದೆ. ಸಮಾಜವು ಒಡ್ಡುವ ಎಲ್ಲಾ ಸವಾಲುಗಳನ್ನು ಅದು ಎದುರಿಸಬೇಕಾಗಿದೆ. ಅದಕ್ಕಾಗಿ ನೀವು, ನಾವು ಇಬ್ಬರೂ ಅದರ ಜೊತೆಯಿರಬೇಕು.

ನಿಮ್ಮ ಮಗುವಿನಲ್ಲಿ ಕನಸು ಬಿತ್ತಿ. ಆದರೆ ಅದನ್ನೇ ನೆಪವಾಗಿಟ್ಟು ಮಗುವಿನ ಮೇಲೆ ಒತ್ತಡ ಹೇರಬೇಡಿ, ಅಂಕಗಳ ಹುಚ್ಚು ಹಿಡಿಸಬೇಡಿ. ನಮ್ಮ ಪುಸ್ತಕದೊಳಗಿನ ಪಾಠಗಳು ಬದುಕು ಮುಖ್ಯ ಎಂದು ಹೇಳುತ್ತವೆ, ನೀವು ಅಂಕ ಮುಖ್ಯ ಅನ್ನುತ್ತೀರಿ. ಕೊನೆಯವರೆಗೂ ಮಗು ಈ ದ್ವಂದ್ವದಲ್ಲೇ ಒದ್ದಾಡುತ್ತದೆ. ನಿಮ್ಮ ಮಕ್ಕಳ ಗುರಿಯನ್ನು ನೀವೇ ನಿರ್ಧರಿಸಬೇಡಿ. ಹರಿಯುವ ನೀರು ತನ್ನ ದಾರಿ ಹುಡುಕಿಕೊಳ್ಳುವಂತೆ ಅವರು ಬೆಳೆಯುತ್ತಾ ತಮ್ಮ ಗುರಿಯನ್ನು ತಾವೇ ಕಂಡುಕೊಳ್ಳುತ್ತಾರೆ. ನೀವು ಪ್ರೋತ್ಸಾಹಿಸಿ. ಶಿಕ್ಷಕರೂ ಆ ದಿಸೆಯಲ್ಲೇ ದಾರಿ ತೋರಿಸುತ್ತಾರೆ, ಅವರನ್ನು ಗೌರವಿಸಿ. ನಿಮ್ಮ ಕಪಟತನ ಮಕ್ಕಳನ್ನು ಖಂಡಿತ ದಾರಿ ತಪ್ಪಿಸುತ್ತದೆ. ಮಕ್ಕಳು ಹೇಗಿರಬೇಕು ಎಂದು ಬಯಸುವಿರೋ ನೀವೂ ಹಾಗೆಯೇ ಇರಿ.

ನೆನಪಿರಲಿ, ಮಕ್ಕಳಷ್ಟೇ ಬೆಳೆಯುವುದಿಲ್ಲ, ಅದರೊಂದಿಗೆ ತಂದೆ-ತಾಯಿ ಕೂಡ. ನಿಮ್ಮ ಬೆಳವಣಿಗೆ ನಿಂತ ದಿನ ಅವರಾದರೂ ಹೇಗೆ ಬೆಳೆದಾರು? ನೀವು ಮಗುವಿಗೆ ಕೊಡುವ ಮತ್ತು ಕೊಡಿಸುವ ಶಿಕ್ಷಣ ಎಂತಹದ್ದು ಅನ್ನುವುದರ ಮೇಲೆ ಅದರ ಬಾಳು ನಿರ್ಧಾರವಾಗುತ್ತದೆ.

ನಿಮ್ಮ ಮಗುವಿನ ಗೆಳೆಯರ ಕೂಟದ ಬಗ್ಗೆ ಒಂದು ಕಣ್ಣಿರಲಿ. ಅಂದಿನ ಓದನ್ನು ಅಂದೇ ಮುಗಿಸುವಂತೆ ನೋಡಿಕೊಳ್ಳಿ. ಸಮಗ್ರ ವ್ಯಕ್ತಿತ್ವ ರೂಪಿಸುವಿಕೆಗೆ ಬೇಕಾದ ಶಾಲಾ ಚಟುವಟಿಕೆಗಳಲ್ಲಿ ಮಗು ಭಾಗವಹಿಸುವಂತಾಗಲು ನಿಮ್ಮ ಸಹಕಾರ ಅಗತ್ಯ.

ನಾವೀಗ ಗುರುಗಳಲ್ಲ ಬರೀ ಮೇಷ್ಟ್ರುಗಳು. ನಾವು ಒಂದು ಮಿತಿಯಲ್ಲಿ ಬೋಧಿಸಬೇಕಿದೆ. ದಿನೇದಿನೇ ಸಮಾಜದಲ್ಲಿ ಆಗುತ್ತಿರುವ ನೈತಿಕ ಅಧಃಪತನದಿಂದ ಮಗುವನ್ನು ರಕ್ಷಿಸುವುದು ನಮಗೂ ಕಷ್ಟವಾಗಿದೆ. ಒಂದೇ ಕಂಬದ ಮೇಲೆ ಮಹಲು ಎಂದೂ ನಿಲ್ಲುವುದಿಲ್ಲ. ಈಗಿನ ಸಂದರ್ಭದಲ್ಲಿ ಶಿಕ್ಷಕನೊಬ್ಬನೇ ಎಲ್ಲವನ್ನೂ ಸರಿ ಮಾಡಬಲ್ಲ ಎಂಬ ನಿರೀಕ್ಷೆ ಸಾಧುವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ನಾಳೆ ನಿಮ್ಮ ಮಗು ಏನಾದರೂ ಸಾಧಿಸಿದರೆ ‘ಯಾರ ಮಗ/ಮಗಳು?’ ಎಂದು ಕೇಳುತ್ತಾರೆ. ಸೋತರೆ ‘ಯಾರು ಕಲಿಸಿದ್ದು?’ ಅನ್ನುತ್ತಾರೆ. ಇರಲಿ, ಮಗುವಿನ ಸೋಲುಗಳೆಲ್ಲಾ ಶಿಕ್ಷಕರ ಖಾತೆಗೆ ಜಮೆಯಾಗಲಿ. ಜಗತ್ತಿನ ಎಲ್ಲಾ ಮಕ್ಕಳು ‘ಇವರು ಯಾರ ಮಗ/ಮಗಳು?’ ಅನ್ನುವಂತೆ ಬೆಳೆಯಲಿ ಎಂಬ
ಆಶಯದೊಂದಿಗೆ.

ಇಂತಿ,

ನಿಮ್ಮ ಮಗುವಿನ ಮೇಷ್ಟ್ರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.