ಪೀಣ್ಯ ದಾಸರಹಳ್ಳಿ: ‘ಇತರರ ಸಾಧನೆ ಕಂಡು ಅಸೂಯೆ ಪಡದೆ ಅವರಂತೆ ನಾವೂ ಹೆಚ್ಚು ಅಂಕ ಪಡೆದು ಸಮಾಜಕ್ಕೆ ಕೀರ್ತಿ ತರಬೇಕು’ ಎಂದು ಸೋಮನಹಳ್ಳಿ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಆನಂದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭುವನೇಶ್ವರಿ ನಗರದ ಮಾಸ್ಟರ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೈತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳನ್ನು ಸ್ನೇಹಿತರಂತೆ ಭಾವಿಸಿ ಅವರಿಗೆ ಕಾಲೇಜಿನಲ್ಲಿ ನಡೆದ ಪಾಠ–ಪ್ರವಚನದ ಬಗ್ಗೆ ವಿಚಾರಿಸಬೇಕು. ಅವರ ವಿದ್ಯಾ ಭ್ಯಾಸದ ಮೇಲೆ ಗಮನ ಹರಿಸಬೇಕು’ ಎಂದರು.

ಪ್ರಾಂಶುಪಾಲ ಕೆ.ಎಸ್. ಮಲ್ಲಿಕಾರ್ಜುನ ಎಸ್. ಮಾತನಾಡಿ, ‘ರೈತರ ಶ್ರಮ ವಿದ್ಯಾರ್ಥಿಗಳಿಗೆ ಅರಿವಾಗಲಿ, ಹಾಗೆಯೇ ಅವರಿಗೆ ಗೌರವ ಕೊಡುವುದನ್ನು ಕಲಿಯಲಿ’ ಎಂದು ತಿಳಿಸಿದರು.

ರೈತ ಪಾಪಣ್ಣ ಮಾತನಾಡಿ, ‘ನಮಗೆ ಅಭಿನಂದಿಸಿರುವುದು ಹೆಮ್ಮೆಯ ಸಂಗತಿ. ಯಾರೊಬ್ಬರೂ ರೈತರ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಇದು ಎಲ್ಲರಿಗೂ ಮಾದರಿಯಾಗಲಿ’ ಎಂದರು. ಶೇ 95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ₹10 ಸಾವಿರ ನಗದು, ಪದಕ ನೀಡಿ ಸನ್ಮಾನಿಸ ಲಾಯಿತು. ಎನ್.ಜಿ. ಗಂಗಣ್ಣ, ಪಾಪಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-4-1265982539

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.