ಪೆರೇಸಂದ್ರ: ಬಿ.ಆರ್ ಅಂಬೇಡ್ಕರ್ ಕಾಲಗರ್ಭದಲ್ಲಿ ಸೇರಿ ಕಣ್ಮರೆ ಆಗುವ ವ್ಯಕ್ತಿತ್ವವಲ್ಲ. ವರ್ತಮಾನ ಹಾಗೂ ಭವಿಷ್ಯದ ಸುಭದ್ರ, ಸ್ವಾವಲಂಬಿ ಸಮಾಜ ನಿರ್ಮಾಣದ ಯುಗಪುರುಷರಾಗಿದ್ದಾರೆ ಎಂದು ಶಾಂತ ಸಮೂಹ ಸಂಸ್ಥೆಯ ನಿರ್ದೇಶಕ ಪ್ರೊ. ಕೋಡಿರಂಗಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ, ಧರ್ಮ ಮತ್ತು ಲಿಂಗ ಆಧಾರಿತ ತಾರತಮ್ಯಗಳು, ಅಸಮಾನತೆ ,ಅಸ್ಪೃಶ್ಯತೆ ಶೋಷಣೆಗಳನ್ನು ಸ್ವತಃ ಅನುಭವಿಸಿದರು. ಇದರಿಂದ ವಿಚಲಿತರಾಗದೆ ಆಳವಾದ ಅಧ್ಯಯನ ಹಾಗೂ ಹೋರಾಟಗಳಿಂದ ಸಮಾಜ ಜಾಗೃತಗೊಳಿಸಿದರು ಎಂದು ಹೇಳಿದರು.

ಅಂಬೇಡ್ಕರ್ ಭಾರತದಲ್ಲಿನ ಅಸಮಾನತೆ, ಜಾತೀಯತೆ ಮತ್ತು ಶೋಷಣೆಯ ಇತಿಹಾಸ ಬದಲಾಯಿಸಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೇಲೆ ದೇಶ ಮರುರೂಪಿಸುವ ಚಿಂತನೆಗಳನ್ನು ನೀಡಿದರು. ಸಂವಿಧಾನದ ಮೂಲಕ ಸಮಾನತೆ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿದರು ಎಂದು ಹೇಳಿದರು.

ಸೈಮನ್, ಶಾಂತ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಸುರೇಂದ್ರ ಮಾತನಾಡಿದರು. ಅಧ್ಯಾಪಕಿ ರಾಧಾ, ಸಂವಿಧಾನದ ಪ್ರಸ್ತಾವ ಹಾಗೂ ಮುಖ್ಯ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.

ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಪ್ರಸಾದ್ ಅಪ್ಪಲ್ಲ, ಪ್ರೊ. ಡಯಾನ, ಆಯಿಷಾ, ಪ್ರೊ. ನರೇಶ್, ಪ್ರೊ. ವಿಜಯಲಕ್ಷ್ಮಿ, ರಾಜೇಶ್, ಸಂದೇಶ್, ರಂಗರಾಜನ್, ಅಂಬಿಕಾ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-16-398683722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.