ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತವೊಂದರಲ್ಲಿ ಒಬ್ಬ ಯುವಕನ ಮುಖದ ಭಾಗ ಗಂಭೀರವಾಗಿ ಹಾನಿಗೊಳಗಾಗಿತ್ತು. ಚೇತರಿಕೆಯ ನಂತರ ಅವನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೂ ಸಾಮಾನ್ಯ ಜೀವನಕ್ಕೆ ಮರಳುವುದಕ್ಕೂ ಮುಜುಗರ ಪಟ್ಟುಕೊಳ್ಳುತ್ತಿದ್ದ. ಆದರೆ, ಪ್ಲಾಸ್ಟಿಕ್ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ (ಪ್ಲಾಸ್ಟಿಕ್ ಆ್ಯಂಡ್ ರೀಕನ್ಸ್ಟ್ರಕ್ಟಿವ್ ಸರ್ಜರಿ) ಮೂಲಕ ವೈದ್ಯರು ಅವನ ಮುಖದ ಭಾಗಗಳನ್ನು ಯಶಸ್ವಿಯಾಗಿ ಮರುನಿರ್ಮಿಸಿದರು. ಬಳಿಕ ಅವನು ತನ್ನ ಉದ್ಯೋಗಕ್ಕೆ ಹಾಗೂ ಸಾಮಾನ್ಯ ಜೀವನಕ್ಕೆ ಮರಳಿದ. ಆ ಸಂದರ್ಭದಲ್ಲಿ ಅವನು ವೈದ್ಯರಿಗೆ ಹೇಳಿದ ಮಾತು: ‘ನನ್ನ ಮುಖವನ್ನಷ್ಟೇ ಅಲ್ಲ, ನನ್ನ ಆತ್ಮವಿಶ್ವಾಸವನ್ನೂ ನೀವು ಮರಳಿ ಕೊಟ್ಟಿದ್ದೀರಿ’.

ಇದು ಒಂದು ಉದಾಹರಣೆ ಮಾತ್ರ. ಜನ್ಮತಃ ತುಟಿಯ ದೋಷ (ಕ್ಲೆಫ್ಟ್ ಲಿಪ್) ಹೊಂದಿದ್ದ ಬಾಲಕನಿಗೆ ಶಸ್ತ್ರಚಿಕಿತ್ಸೆಯ ನಂತರ ಸ್ಪಷ್ಟವಾಗಿ ಮಾತನಾಡಲು ಮತ್ತು ಸಹಜವಾಗಿ ನಗಲು ಸಾಧ್ಯವಾಯಿತು. ಮತ್ತೊಂದು ಉದಾಹರಣೆಯಲ್ಲಿ, ಕ್ಯಾನ್ಸರ್ ಚಿಕಿತ್ಸೆಯ ನಂತರ ಮುಖದ ಭಾಗಕ್ಕೆ ಹಾನಿಯಾಗಿದ್ದ ರೋಗಿಗೆ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯಿಂದ ಮತ್ತೆ ಸಾಮಾನ್ಯ ಜೀವನ ನಡೆಸುವ ಅವಕಾಶ ದೊರಕಿತು.

ಈ ರೀತಿ, ಹಾನಿಗೊಳಗಾದ ದೇಹದ ಅಂಗಾಂಶಗಳು ಮತ್ತು ಅಂಗಗಳ ಕಾರ್ಯಕ್ಷಮತೆ ಹಾಗೂ ರೂಪವನ್ನು ಮರುಸ್ಥಾಪಿಸುವುದರ ಜೊತೆಗೆ, ಅಚ್ಚರಿ ಹುಟ್ಟಿಸುವ ಪರಿವರ್ತನೆಗಳನ್ನು ಸಾಧ್ಯವಾಗಿಸುವ ವೈದ್ಯಕೀಯ ವಿಭಾಗವೇ ಪ್ಲಾಸ್ಟಿಕ್ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ.

ಬಹುತೇಕರು ಪ್ಲಾಸ್ಟಿಕ್ ಸರ್ಜರಿ ಎಂದರೆ ಬರೀ ಸೌಂದರ್ಯ ಹೆಚ್ಚಿಸುವ ಚಿಕಿತ್ಸೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಈ ವಿಭಾಗವು ಅಪಘಾತಗಳು, ಸುಟ್ಟ ಗಾಯಗಳು, ಜನ್ಮಜಾತ ದೋಷಗಳು ಹಾಗೂ ಕ್ಯಾನ್ಸರ್ ಚಿಕಿತ್ಸೆಯ ನಂತರದ ಸಂದರ್ಭಗಳಲ್ಲಿ ದೇಹದ ಭಾಗಗಳ ಪುನರ್ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಕ್ಷೇತ್ರದ ವೈದ್ಯರು ದೇಹದ ಪುನರ್ನಿರ್ಮಾಣದ ಮೂಲಕ ರೋಗಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರ ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತಾರೆ. ಆದ್ದರಿಂದ, ಪ್ಲಾಸ್ಟಿಕ್ ಸರ್ಜನ್ಗಳನ್ನು ‘ಜೀವನವನ್ನು ಮರುರೂಪಿಸುವ ಶಿಲ್ಪಿಗಳು’ ಎಂದು ಕರೆಯಬಹುದು.

ಸೌಂದರ್ಯ ಮತ್ತು ಆತ್ಮವಿಶ್ವಾಸ

ಪ್ಲಾಸ್ಟಿಕ್ ಸರ್ಜರಿಯ ವಿಭಾಗಗಳಲ್ಲಿ ಕಾಸ್ಮೆಟಿಕ್ ಸರ್ಜರಿ ಪ್ರಮುಖವಾಗಿದೆ. ದೇಹದ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ, ರೂಪವನ್ನು ಸುಂದರಗೊಳಿಸುವುದರ ಜೊತೆಗೆ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಇದರ ಉದ್ದೇಶ. ಚರ್ಮದ ಕಸಿ, ಮೂಗಿನ ಆಕಾರವನ್ನು ಸರಿಪಡಿಸುವ ರೈನೋಪ್ಲಾಸ್ಟಿ, ಮುಖದ ಮಡಚುಗಳನ್ನು ಕಡಿಮೆ ಮಾಡುವ ಫೇಸ್ ಲಿಫ್ಟ್, ಕಣ್ಣು ಮತ್ತು ತುಟಿಗಳ ಸೌಂದರ್ಯ ಹೆಚ್ಚಿಸುವ ಚಿಕಿತ್ಸೆಗಳು ಹಾಗೂ ಚರ್ಮದ ಮರುಯೌವನಕ್ಕಾಗಿ ಲೇಸರ್ ವಿಧಾನಗಳು.. ಈ ವಿಭಾಗದಲ್ಲಿ ಸೇರಿವೆ. ಇದರ ಜೊತೆಗೆ, ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿ– ಫ್ಲ್ಯಾಪ್ ಸರ್ಜರಿ, ಮೈಕ್ರೋಸರ್ಜರಿ, ಲೇಸರ್ ತಂತ್ರಜ್ಞಾನ, 3D ಇಮೇಜಿಂಗ್ನಂತಹ ವಿಧಾನಗಳು– ಈ ಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿಸಿವೆ. ಹೀಗಾಗಿ, ಈ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ವೈದ್ಯಕೀಯ ವಿಭಾಗವಾಗಿದೆ.

ಚಿಕಿತ್ಸೆಗಳಲ್ಲಿ ತಜ್ಞ ವೈದ್ಯರ ಜೊತೆಗೆ ಅರೆವೈದ್ಯಕೀಯ (ಪ್ಯಾರಾಮೆಡಿಕಲ್) ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಉದಾಹರಣೆಗೆ: ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್, ಅನಸ್ತೇಷಿಯಾ ಟೆಕ್ನೀಷಿಯನ್, ಸರ್ಜಿಕಲ್ ನರ್ಸ್, ಫಿಸಿಯೋಥೆರಪಿಸ್ಟ್, ಮೆಡಿಕಲ್ ಇಮೇಜಿಂಗ್ ತಜ್ಞರು ಇತ್ಯಾದಿ. ಈ ವೃತ್ತಿಗಳನ್ನು ಅನುಸರಿಸಲು ‘ನೀಟ್’ ಪ್ರವೇಶ ಪರೀಕ್ಷೆಯ ಮೂಲಕ ಬಿ.ಎಸ್ಸಿ (ಅರೆವೈದ್ಯಕೀಯ) ಮಾಡಬಹುದು.

ತಜ್ಞ ವೈದ್ಯರು ಮತ್ತು ಅರೆವೈದ್ಯಕೀಯ ಪದವೀಧರರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು, ವಿಶೇಷ ಕಾಸ್ಮೆಟಿಕ್ ಕ್ಲಿನಿಕ್ಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಬಹುದು.

ಶಿಕ್ಷಣ, ಉದ್ಯೋಗ..

ಪರಿಣತ ಪ್ಲಾಸ್ಟಿಕ್ ಸರ್ಜನ್ ಆಗಲು ದೀರ್ಘಾವಧಿಯ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಅಗತ್ಯ

1. ಎಂಬಿಬಿಎಸ್ (5½ ವರ್ಷ)

2. ಎಂಎಸ್ (3 ವರ್ಷ)

3. ಎಂಸಿಎಚ್ (ಸೂಪರ್ ಸ್ಪೆಷಲೈಸೇಶನ್– 3 ವರ್ಷ)

ಶಿಕ್ಷಣದ ನಂತರ ಪ್ಲಾಸ್ಟಿಕ್ ಸರ್ಜನ್, ಕಾಸ್ಮೆಟಿಕ್ ಸರ್ಜನ್, ಪುನರ್ನಿರ್ಮಾಣ ಸರ್ಜನ್, ಬರ್ನ್ ಸ್ಪೆಷಲಿಸ್ಟ್, ಅಧ್ಯಾಪನದಂತಹ ಉದ್ಯೋಗಾವಕಾಶಗಳಿವೆ.

ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳು

ದೆಹಲಿಯ ಏಮ್ಸ್, ಬೆಂಗಳೂರಿನ ಬಿಎಂಸಿ ಮತ್ತು ಸೇಂಟ್ ಜಾನ್ಸ್, ಕೆಎಂಸಿ ಮಂಗಳೂರು, ಸಿಎಂಸಿ ವೆಲ್ಲೂರು, ಜಿಪ್ಮರ್ ಪುದುಚೇರಿ..

ಲೇಖಕ: ಶಿಕ್ಷಣ ತಜ್ಞ, ವೃತ್ತಿ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.