ಸೋಮವಾರ, ಅಕ್ಟೋಬರ್ 18, 2021
23 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 67

911. ಗ್ಲೂಕೋಸ್‌ನ ರಾಸಾಯನಿಕ ಸೂತ್ರ ಏನು?

ಎ) C6H6O6

ಬಿ) C12H12O11

ಸಿ) C6H12O11

ಡಿ) C6H12O6

912. ಸಸ್ಯಗಳಲ್ಲಿ ಆಹಾರ ಸಾಗಣೆ ಮಾಡುವ ಅಂಗಾಂಶ ಯಾವುದು?

ಎ) ಕ್ಸೈಲಂ

ಬಿ) ಫ್ಲೋಯೆಂ

ಸಿ) ಕ್ಲೋರೋಫಿಲ್

ಡಿ) ಕ್ಸಾನೋಫಿಲ್

913. ಅತ್ಯಂತ ಗಟ್ಟಿಯಾದ ಅಲೋಹ ಯಾವುದು?

ಎ) ಯುರೇನಿಯಂ

ಬಿ) ಬೆಳ್ಳಿ

ಸಿ) ವಜ್ರ

ಡಿ) ಪ್ಲಾಟಿನಂ

914. ಓಝೋನ್ ನಾಶಕ್ಕೆ ಪ್ರಮುಖ ಕಾರಣ ಯಾವುದು?

ಎ) ಮರ್ಕ್ಯುರಿ

ಬಿ) ಕಾರ್ಬನ್

ಸಿ) ಸೀಸ

ಡಿ) ಸಿ.ಎಫ್‌.ಸಿ

915. ಇತ್ತೀಚೆಗೆ ಚರ್ಚೆಯಲ್ಲಿರುವ ‘ಪ್ರಯೋಗಾಲಯ ಮೂಲದ ಸಿದ್ಧಾಂತ’ ಯಾವುದಕ್ಕೆ ಸಂಬಂಧಿಸಿದೆ?

ಎ) ಕೋವಿಡ್‌ ವ್ಯಾಕ್ಸಿನ್ ಸಂಶೋಧನೆ

ಬಿ) ಕೋವಿಡ್‌ ಹುಟ್ಟಿನ ಮೂಲ

ಸಿ) ಕೋವಿಡ್‌ ಪ್ರಸರಣದ ತೀವ್ರತೆ

ಡಿ) ಕೋವಿಡ್ ವೈರಸ್ ರೂಪಾಂತರ

916. Entomology (ಎಂಟೊಮಾಲಜಿ) ಎಂದರೇನು?

ಎ) ಭೂಕಂಪನದ ಬಗ್ಗೆ ಅಧ್ಯಯನ

ಬಿ) ಶಿಲೆಗಳ ಬಗ್ಗೆ ಅಧ್ಯಯನ

ಸಿ) ಮಣ್ಣಿನ ಬಗ್ಗೆ ಅಧ್ಯಯನ

ಡಿ) ಕೀಟಗಳ ಬಗ್ಗೆ ಅಧ್ಯಯನ

917. ಅಡುಗೆ ಉಪ್ಪಿನ ರಾಸಾಯನಿಕ ಹೆಸರು ಏನು?

ಎ) ಸೋಡಿಯಂ ಕಾರ್ಬೋನೇಟ್

ಬಿ) ಸೋಡಿಯಂ ಬೈ ಕಾರ್ಬೋನೇಟ್

ಸಿ) ಸೋಡಿಯಂ ಕ್ಲೋರೈಡ್

ಡಿ) ಕ್ಯಾಲ್ಸಿಯಂಕ್ಲೋರೈಡ್

918. ಮಾನವನ ರಕ್ತದಲ್ಲಿ ಯಾವ ಲೋಹದ ಅಂಶ ಇದೆ?

ಎ) ಕ್ಯಾಲ್ಸಿಯಂ

ಬಿ) ಹೈಡ್ರೋಜನ್

ಸಿ) ಇಂಗಾಲ

ಡಿ) ಕಬ್ಬಿಣ

919. ವಿಟಮಿನ್ ‘ಸಿ’ ಕೊರತೆಯಿಂದ ಬರುವ ರೋಗ ಯಾವುದು?

ಎ) ಇರುಳುಕುರುಡು

ಬಿ) ಸ್ಕರ್ವಿ

ಸಿ) ರಿಕೆಟ್ಸ್

ಡಿ) ಬೆರಿಬೆರಿ

920. ರಾಮು ಸೋಮುವಿನ ವಯಸ್ಸಿಗಿಂತ 2 ಪಟ್ಟು ದೊಡ್ಡವನು ಮತ್ತು ಕಿಟ್ಟಿಗಿಂತ 4 ವರ್ಷ ದೊಡ್ಡವನು. ಈಗ ಕಿಟ್ಟಿಗೆ 8 ವರ್ಷ, ಹಾಗಾದರೆ ಸೋಮು ಕಿಟ್ಟಿಗಿಂತ ಎಷ್ಟು ವರ್ಷ ಚಿಕ್ಕವನು?

ಎ) 2 ವರ್ಷಗಳು

ಬಿ) 4 ವರ್ಷಗಳು

ಸಿ) 6 ವರ್ಷಗಳು

ಡಿ) 3 ವರ್ಷಗಳು

921. 11, 24, 39, 416, 525, …, 749 ಈ ಸರಣಿಯಲ್ಲಿ ಬಿಟ್ಟು ಹೋಗಿರುವ ಸಂಖ್ಯೆ ಯಾವುದು?

ಎ) 425

ಬಿ) 518

ಸಿ) 636

ಡಿ) 618

922. ಅಧಿಕ ವರ್ಷದಲ್ಲಿ ಎಷ್ಟು ದಿನ ಇರುತ್ತವೆ?

ಎ) 365

ಬಿ) 366

ಸಿ) 367

ಡಿ) 360

923. 1 ರಿಂದ 100ರ ವರೆಗಿನ ಸಂಖ್ಯೆಗಳ ಸಂಕಲನ ಮಾಡಿದಾಗ ಬರುವ ಮೊತ್ತ ಎಷ್ಟು?

ಎ) 5050

ಬಿ) 5060

ಸಿ) 5030

ಡಿ) 5020

924. ₹5,000ಕ್ಕೆ ವಾರ್ಷಿಕ ಶೇ 5 ರ ಬಡ್ಡಿ ದರದಂತೆ, 4 ವರ್ಷಗಳಿಗೆ ಆಗುವ ಸರಳ ಬಡ್ಡಿ ಎಷ್ಟು?

ಎ) 5,000

ಬಿ) 500

ಸಿ) 1,000

ಡಿ) 250

925. ಒಬ್ಬ ವ್ಯಕ್ತಿ ಒಂದು ವಸ್ತುವನ್ನು 800 ರೂಪಾಯಿಗೆ ಕೊಂಡು ಅದೇ ವಸ್ತುವನ್ನು ಶೇಕಡ 20 ರಷ್ಟು ಲಾಭಕ್ಕೆ ಮಾರುತ್ತಾನೆ. ಹಾಗಾದರೆ ಅವನು ಮಾರಿದ ಬೆಲೆ ಎಷ್ಟು?

ಎ)₹860

ಬಿ) ₹ 980

ಸಿ) ₹1,000

ಡಿ) ₹960

ಭಾಗ 66ರ ಉತ್ತರಗಳು: 896. ಬಿ, 897. ಸಿ, 898. ಎ, 899. ಬಿ, 900. ಬಿ, 901. ಎ, 902. ಸಿ, 903. ಬಿ, 904. ಡಿ, 905. ಎ, 906. ಎ, 907. ಬಿ, 908. ಬಿ, 909. ಬಿ, 910. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು