ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

Last Updated 21 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

(ಮುಂದುವರಿದ ಭಾಗ)

8). 21(ಎ) ವಿಧಿಯಡಿಯಲ್ಲಿ 6 ರಿಂದ 14 ವರ್ಷಗಳವರೆಗಿನ ಮಕ್ಕಳಿಗೆ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಇದನ್ನು ಜಾರಿಗೆ ತಂದ ವರ್ಷ ಯಾವುದು?

ಎ) 2000 ಬಿ) 2002 ಸಿ) 2003 ಡಿ) 2004

ಉತ್ತರ: (ಬಿ)

ವಿವರಣೆ: 2002ರ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ 21 (ಎ) ವಿಧಿಯಡಿಯಲ್ಲಿ 6 ರಿಂದ 14 ವರ್ಷಗಳವರೆಗಿನ ಮಕ್ಕಳಿಗೆ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಎಂದು ಘೋಷಿಸಲಾಯಿತು.

9) ‘ಜನರ ಮತದ ಆಧಾರದ ಮೇಲೆ ನಿಂತಿರುವ ಸರ್ಕಾರವು ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಲಕ್ಷಿಸಬಾರದು’ – ಈ ಹೇಳಿಕೆಯನ್ನು ಕೆಳಗಿನ ಯಾರು ನೀಡಿದರು?

ಎ) ಡಾ. ಬಿ.ಆರ್. ಅಂಬೇಡ್ಕರ್
ಬಿ) ಜವಾಹರ್ ಲಾಲ್ ನೆಹರು
ಸಿ) ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಡಿ) ಕೆ.ಟಿ.ಶಾ

ಉತ್ತರ: (ಎ)

ವಿವರಣೆ: ಡಾ.ಅಂಬೇಡ್ಕರ್‌ರವರು ‘ಜನರ ಮತದ ಆಧಾರದ ಮೇಲೆ ನಿಂತಿರುವ ಸರ್ಕಾರವು ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಲಕ್ಷಿಸಲಾರದು’ ಎಂದಿದ್ದಾರೆ. ‘ಈ ತತ್ವಗಳನ್ನು ಉದಾಸೀನ ಮಾಡುವ ಸರ್ಕಾರವು ಚುನಾವಣೆ ಸಂದರ್ಭದಲ್ಲಿ ಮತದಾರರ ಮುಂದೆ ಉತ್ತರ ನೀಡಬೇಕಾಗುತ್ತದೆ’ ಎಂದು ಸಂವಿಧಾನ ರಚನಾ ಸಭೆಯಲ್ಲಿಯೇ ಅಂಬೇಡ್ಕರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ರಾಜ್ಯ ನಿರ್ದೇಶಕ ತತ್ವಗಳು ಭಾರತವನ್ನು ಒಂದು ‘ಕಲ್ಯಾಣ ರಾಜ್ಯ’ವನ್ನಾಗಿ ಪರಿವರ್ತಿಸಲು ಸಹಕಾರಿಯಾಗಿವೆ.

10) ‘ಫೆಡರಲ್ ಪಾರ್ಲಿಮೆಂಟ್’ ಎಂಬುದು ಯಾವ ದೇಶದ ಸಂಸತ್ತಾಗಿದೆ?

ಎ) ಆಸ್ಟ್ರೇಲಿಯಾ ಬಿ) ಜಪಾನ್
ಸಿ) ಬ್ರೆಜಿಲ್ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಎ)

ವಿವರಣೆ: ವಿವಿಧ ದೇಶಗಳಲ್ಲಿ ಸಂಸತ್ತು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತದೆ. ಜಪಾನ್‌ನಲ್ಲಿ ಡಯಟ್ ಹಾಗೂ ಬ್ರೆಜಿಲ್‌ನಲ್ಲಿ ನ್ಯಾಷನಲ್ ಕಾಂಗ್ರೆಸ್ ಎಂದು ಕರೆಯುವರು.

11) ಆಬ್ಸಲ್ಯೂಟ್ ವಿಟೊ ಎಂದರೇನು?

ಎ) ರಾಷ್ಟ್ರಾಧ್ಯಕ್ಷ ಸಂಸತ್ತಿನಿಂದ ಅನುಮೋದಿಸಲ್ಪಟ್ಟ ಒಂದು ಮಸೂದೆಯನ್ನು ತಿರಸ್ಕರಿಸುವುದು

ಬಿ) ರಾಷ್ಟ್ರಾಧ್ಯಕ್ಷ ಸಂಸತ್ತಿನಿಂದ ಅನುಮೋದಿಸಲ್ಪಟ್ಟ ಮಸೂದೆಗೆ ಒಪ್ಪಿಗೆ ನೀಡದೆ, ಸಂಸತ್ತಿನ ಮರುಪರಿಶೀಲನೆಗೆ ಹಿಂತಿರುಗಿಸಬಹುದು

ಸಿ) ರಾಷ್ಟ್ರಾಧ್ಯಕ್ಷ ಮಸೂದೆಯನ್ನು ಅನಿರ್ದಿಷ್ಟ ಕಾಲದವರೆಗೆ ತಮ್ಮ ಬಳಿಯೇ ಇಟ್ಟುಕೊಳ್ಳುವುದು

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಎ)

ವಿವರಣೆ: ಸಂಸತ್ತನಿಂದ ಅನುಮೋದಿಸಲ್ಪಟ್ಟ ಯಾವುದೇ ಒಂದು ಮಸೂದೆ ರಾಷ್ಟ್ರಾಧ್ಯಕ್ಷರ ಅಂಗೀಕಾರ ಇಲ್ಲದ ಕಾಯ್ದೆಯಾಗುವುದಿಲ್ಲ. ರಾಷ್ಟ್ರಾಧ್ಯಕ್ಷರು 4 ರೀತಿಯ ವಿಟೊ ಅಧಿಕಾರ ಚಲಾಯಿಸುತ್ತಾರೆ.

i. ಅಬ್ಸಲ್ಯೂಟ್ ವಿಟೊ: ಸಂಸತ್‌ನಿಂದ ಅನುಮೋದಿಸಲ್ಪಟ್ಟ ಒಂದು ಮಸೂದೆಯನ್ನು ತಿರಸ್ಕರಿಸುವ ಅಧಿಕಾರ ರಾಷ್ಟ್ರಾಧ್ಯಕ್ಷರಿಗೆ ಇದೆ. ಇದನ್ನು ‘ಅಬ್ಸಲ್ಯೂಟ್ ವಿಟೊ’ ಎಂದು ಕರೆಯಲಾಗುತ್ತದೆ

ii. ಸಸ್ಪೆನ್ಸಿವ್ ವಿಟೊ: ಸಂಸತ್‌ನಿಂದ ಅನುಮೋದಿಸಲ್ಪಟ್ಟ ಮಸೂದೆಯನ್ನು ರಾಷ್ಟ್ರಾಧ್ಯಕ್ಷ ಒಪ್ಪಿಗೆ ನೀಡದೆ ಸಂಸತ್ತಿನ ಮರುಪರಿಶೀಲನೆಗೆ ಹಿಂತಿರುಗಿಸಬಹುದು. ಇದನ್ನು ‘ಸಸ್ಪೆನ್ಸಿವ್ ವಿಟೊ’ ಎನ್ನುವರು

iii. ಪಾಕೆಟ್ ವಿಟೊ: ಈ ಪ್ರಕರಣದಲ್ಲಿ ರಾಷ್ಟ್ರಾಧ್ಯಕ್ಷ ಒಂದು ಮಸೂದೆಗೆ ಅಂಗೀಕಾರ ನೀಡುವುದಿಲ್ಲ ಅಥವಾ ಅಂಗೀಕಾರವನ್ನು ತಡೆಹಿಡಿಯುವುದಿಲ್ಲ ಅಥವಾ ಸಂಸತ್ತಿನ ಮರುಪರಿಶೀಲನೆಗೆ ಹಿಂತಿರುಗಿಸುವುದಿಲ್ಲ; ಬದಲಾಗಿ ಹಿಡಿದಿಟ್ಟುಕೊಳ್ಳುತ್ತಾರೆ. ಇದನ್ನು ‘ಪಾಕೆಟ್ ವಿಟೊ’ ಎನ್ನುವರು.

iv. ಕ್ವಾಲಿಫೈಡ್ ವಿಟೊ: ಶಾಸನ ಸಭೆಯು ರಾಷ್ಟ್ರಾಧ್ಯಕ್ಷರನ್ನು ವಿಶೇಷ ಬಹುಮತದಲ್ಲಿ ಮೀರಿ ನಡೆಯಬಹುದು. (ಈ ಅಧಿಕಾರ ಅಮೆರಿಕದ ಅಧ್ಯಕ್ಷರಿಗೆ ಮಾತ್ರ ಇದೆ, ಭಾರತದ ರಾಷ್ಟ್ರಪತಿಗೆ ಇಲ್ಲ).

12) ಬಸವಣ್ಣನವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

1. ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದರು.

2. ಇವರು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೀವಿಸಿದ್ದರು.

3. ಲಿಂಗಾಯಿತ ಧರ್ಮದ ಸ್ಥಾಪಕರು.

4. ಅನುಭವ ಮಂಟಪದ ಸ್ಥಾಪಕರು.

ಉತ್ತರ ಸಂಕೇತಗಳು:

ಎ) 1, 2 ಮತ್ತು 3 ಬಿ) 1, 2 ಮತ್ತು 4

ಸಿ) 1, 3 ಮತ್ತು 4 ಡಿ) ಮೇಲಿನ ಎಲ್ಲವೂ

ಉತ್ತರ: (ಸಿ)

ವಿವರಣೆ:

1. ಬಸವಣ್ಣನವರ ಪ್ರತಿಭೆಯನ್ನು ಮೆಚ್ಚಿಕೊಂಡ 2ನೇ ಬಿಜ್ಜಳ ಇವರನ್ನು ಮಂತ್ರಿಯನ್ನಾಗಿ ಮಾಡಿಕೊಂಡರು.

2. ಇವರು ಕಲ್ಯಾಣ ಕಲಚೂರಿಗಳ ಕಾಲದಲ್ಲಿ ಜೀವಿಸಿದ್ದರು.

3. ಅಂದಿನ ವೀರಶೈವ ಚಳವಳಿಗಾರರು, ಇಂದಿನ ಲಿಂಗಾಯಿತ ಧರ್ಮದ ಸ್ಥಾಪಕರು.

4. ಅನುಭವ ಮಂಟಪವನ್ನು ಸ್ಥಾಪಿಸಿದರು. ಇದೊಂದು ವಚನ ಮಂಟಪ. ಇಲ್ಲಿ ಧಾರ್ಮಿಕ ಗೋಷ್ಠಿ ನಡೆಯುತ್ತಿದ್ದು, ಅಲ್ಲಮಪ್ರಭು ಇದರ ಅಧ್ಯಕ್ಷರಾಗಿದ್ದರು.

13) ಚೌತ ಹಾಗೂ ಸರ್ದೇಶ್‌ಮುಖಿ ಈ ಎರಡು ತೆರಿಗೆಗಳು, ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ?

ಎ) ಸೇನಾ ತೆರಿಗೆ ಬಿ) ನ್ಯಾಯದಾನ ತೆರಿಗೆ

ಸಿ) ಭೂ ಸುಧಾರಣೆ ತೆರಿಗೆ ಡಿ) ಕ್ಷೇತ್ರಾಭಿವೃದ್ಧಿ ತೆರಿಗೆ

ಉತ್ತರ: ಎ

ವಿವರಣೆ: ಚೌತ್ ಹಾಗೂ ಸರ್ದೇಶ್‌ಮುಖಿ ಮಿಲಿಟರಿ ತೆರಿಗೆಗಳು. ಶಿವಾಜಿಯು ಈ ತೆರಿಗೆಗಳನ್ನು ತನ್ನ ನೆರೆಹೊರೆಯ ರಾಜ್ಯಗಳ ಮೇಲೆ ವಿಧಿಸುತ್ತಿದ್ದ. ಚೌತ್ 1/4 ರಷ್ಟು, ಸರ್ದೇಶ್‌ಮುಖಿ 1/10 ಪಾಲನ್ನು ಹೊಂದಿತ್ತು.

14) ‘ಭಕ್ತಿ ಮಾರ್ಗದಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ’ ಎಂದವರು ಯಾರು?

ಎ) ರಮಾನಂದ ಬಿ) ಕಬೀರರು
ಸಿ) ಮೀರಬಾಯಿ ಡಿ) ಆತ್ಮಾನಂದ

ಉತ್ತರ: (ಬಿ)

ವಿವರಣೆ: ಕಬೀರರು ವಾರಾಣಸಿಯಲ್ಲಿನ ನೇಕಾರ, ಮುಸ್ಲಿಂ ದಂಪತಿ ನಿರು ಮತ್ತು ನಿಮ ಬಳಿ ಬೆಳೆದರು. ಇವರ ಭಕ್ತಿ ಪೂರಕ ಗೀತ ರಚನೆಗಳು ‘ದೋಹ’ ಪ್ರಕಾರದಲ್ಲಿವೆ.

15) ಉತ್ತರ ಭಾರತದಲ್ಲಿ ಭಕ್ತಿ ಚಳವಳಿಯನ್ನು ಜನಪ್ರಿಯಗೊಳಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?

ಎ) ಕಬೀರರು ಬಿ) ಗುರುನಾನಕ್
ಸಿ) ಚೈತನ್ಯ ಡಿ) ರಮಾನಂದ

ಉತ್ತರ: (ಡಿ)

ವಿವರಣೆ : ಭಕ್ತಿ ಚಳವಳಿ ದಕ್ಷಿಣ ಭಾರತದ ಸಂತರಿಂದ ಪ್ರತಿಪಾದಿಸಲ್ಪಟ್ಟರೂ ಉತ್ತರ ಭಾರತದಲ್ಲಿ ಈ ಚಳವಳಿಯನ್ನು ಜನಪ್ರಿಯಗೊಳಿಸಿದ ಕೀರ್ತಿ ರಮಾನಂದರಿಗೆ ಸಲ್ಲುತ್ತದೆ.

(ಪ್ರಶ್ನೋತ್ತರ ಸಂಯೋಜನೆ: ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ವಿಜಯನಗರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT