ಶನಿವಾರ, ಜೂನ್ 19, 2021
21 °C

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

(ಮುಂದುವರಿದ ಭಾಗ)

23) ಕೆಳಗಿನ ಯಾರ ಕಾಲದಲ್ಲಿ ಕವಿ ಪೊನ್ನನಿಗೆ ಆಶ್ರಯ ನೀಡಲಾಗಿತ್ತು?

ಎ) 1ನೇ ಕೃಷ್ಣ ಬಿ) 3ನೇ ಕೃಷ್ಣ
ಸಿ) 3ನೇ ಗೋವಿಂದ ಡಿ) ಧ್ರುವ

ಉತ್ತರ : (ಬಿ)

ವಿವರಣೆ: 3ನೇ ಕೃಷ್ಣನ ಕಾಲದಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವು ಮತ್ತೊಮ್ಮೆ ಭಾರತದ ರಾಜಕೀಯದಲ್ಲಿ ಅಗ್ರಸ್ಥಾನ ಪಡೆಯಿತು. ಕವಿ ಪೊನ್ನನು 3ನೇ ಕೃಷ್ಣನ ಆಶ್ರಯ ಪಡೆದಿದ್ದನು.

24) ‘ವಿಷ್ಣುಗೋಪ’ ಎಂದು ಈ ಕೆಳಗಿನ ಯಾರನ್ನು ಕರೆಯಲಾಗುತ್ತಿತ್ತು?

ಎ) ಕೌಟಿಲ್ಯ ಬಿ) ವಿಶಾಖದತ್ತ
ಸಿ) ಬ್ರಹ್ಮಗುಪ್ತ ಡಿ) ವಾಗ್ಭಟ

ಉತ್ತರ : (ಎ)

ವಿವರಣೆ: ಕೌಟಿಲ್ಯನು ಮೌರ್ಯ ದೊರೆ ಚಂದ್ರಗುಪ್ತನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದನು. ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಪಾಂಡಿತ್ಯ ಪಡೆದ ಈತನ ಕೃತಿಯಾದ ‘ಅರ್ಥಶಾಸ್ತ್ರ’ವು ಸಂಸ್ಕೃತ ಸಾಹಿತ್ಯದಲ್ಲೇ ಅದ್ವಿತೀಯವಾದುದು. ಕೌಟಿಲ್ಯನಿಗೆ ವಿಷ್ಣುಗೋಪ ಹಾಗೂ ಚಾಣಕ್ಯ ಎಂಬ ಇತರ ಹೆಸರುಗಳೂ ಇದ್ದವು.

25) ಭಾರತದ ‘ಶಾಸನಗಳ ಪಿತಾಮಹ’ನೆಂದು ಕೆಳಗಿನ ಯಾರನ್ನು ಕರೆಯುತ್ತಾರೆ?

ಎ) ಅಶೋಕ ಬಿ) ಚಂದ್ರಗುಪ್ತ ಮೌರ್ಯ
ಸಿ) ಬಿಂದುಸಾರ ಡಿ) ಧನನಂದ

ಉತ್ತರ : (ಎ)

ವಿವರಣೆ: ಅಶೋಕನ ಶಾಸನಗಳು ಮೌರ್ಯರ ಬಗ್ಗೆ ಪ್ರಮುಖ ಮಾಹಿತಿ ನೀಡುತ್ತವೆ. ಭಾರತದಲ್ಲಿ ಶಾಸನಗಳನ್ನು ಹೊರಡಿಸಿದ ಮೊದಲ ದೊರೆ ಅಶೋಕ. ಅಶೋಕನನ್ನು ಭಾರತದ ‘ಶಾಸನಗಳ ಪಿತಾಮಹ’ನೆಂದು ಕರೆಯುತ್ತಾರೆ.

26) ಈ ಕೆಳಗಿನ ಯಾವ ಕವಿಯನ್ನು ‘ಭಾರತದ ಕಾರ್ನೆಲ್’ ಎಂದು ಕರೆಯಲಾಗಿದೆ?

ಎ) ಶೂದ್ರಕ ಬಿ) ವಿಶಾಖದತ್ತ
ಸಿ) ಹರಿಸೇನ ಡಿ) ಅಮರಸಿಂಹ

ಉತ್ತರ : (ಬಿ)

ವಿವರಣೆ: ವಿಶಾಖದತ್ತನು ಗುಪ್ತಯುಗದ ಶ್ರೇಷ್ಠ ಕವಿ ಮತ್ತು ನಾಟಕಕಾರ. ಇವನ ರಾಜಕೀಯ ನಾಟಕವಾದ ‘ಮುದ್ರಾರಾಕ್ಷಸ’ ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರಿಂದ ನಂದ ವಂಶ ಪತನವಾದ ಬಗ್ಗೆ ಮತ್ತು ಮೌರ್ಯ ಸಾಮ್ರಾಜ್ಯದ ಸ್ಥಾಪನೆಯ ಬಗ್ಗೆ ವಿವರಿಸುತ್ತದೆ. ವಿಶಾಖದತ್ತನನ್ನು ‘ಭಾರತದ ಕಾರ್ನೆಲ್’ ಎಂದು ಕರೆಯಲಾಗಿದೆ.

27) ಶಿವಪ್ಪನಾಯಕನು ಅಳವಡಿಸಿದ ಕಂದಾಯ ವ್ಯವಸ್ಥೆಯನ್ನು ________ ಎಂದು ಕರೆಯಲಾಗಿದೆ.

ಎ) ಮಾಂಡಳಿಕ ಬಿ) ಕರಣಿಕ
ಸಿ) ಸಿಸ್ತು ಡಿ) ಮನ್ಸ್ಬ್

ಉತ್ತರ : (ಸಿ)

ವಿವರಣೆ: ಇದು ಒಂದು ಕ್ರಮಬದ್ಧ ಕಂದಾಯ ಪದ್ಧತಿಯಾಗಿದ್ದು, ‘ಶಿವಪ್ಪ ನಾಯಕನ ಸಿಸ್ತು’ ಎನ್ನುವರು. ಸಿಸ್ತು ಕಂದಾಯ ಪದ್ಧತಿ ಮಲೆನಾಡಿನ ಸಮೃದ್ಧಿಗೆ ಕಾರಣವಾಯಿತು.

28) 3ನೇ ಸಂಗಂ ಸಾಹಿತ್ಯ ಕೂಟ ಕೆಳಗಿನ ಯಾವ ಪ್ರದೇಶದಲ್ಲಿ ನಡೆದಿತ್ತು?

ಎ) ಪಾಟಲಿಪುತ್ರ ಬಿ) ಮಧುರೈ
ಸಿ) ಚೆನ್ನೈ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : (ಬಿ)

ವಿವರಣೆ: 3ನೇ ಸಂಗಂ ಸಾಹಿತ್ಯ ಕೂಟವು ಮಧುರೈನಲ್ಲಿ ನಡೆದಿತ್ತು. ಈ ಕೂಟದ ಅಧ್ಯಕ್ಷ ನಕ್ಕಿರಾರ್ ಆಗಿರುತ್ತಾನೆ.

29) ಚೋಳರ ‘ರಾಜ ಚಿಹ್ನೆ’ ಯಾವುದು?

ಎ) ಹುಲಿ ಬಿ) ಸಿಂಹ
ಸಿ) ಆನೆ ಡಿ) ಬಾಣ

ಉತ್ತರ : (ಎ)

ವಿವರಣೆ: ಚೋಳರ ರಾಜ ಚಿಹ್ನೆ: ಹುಲಿ; ಇದರ ರಾಜಧಾನಿಗಳು: ಉರೈಯರ್ ಮತ್ತು ಕಾವೇರಿ ಪಟ್ನಂ, ಚೋಳರ ಮೊದನೇ ರಾಜ: ವಿಜಯಾಲಯ ಚೋಳ

30) “ನವಕೋಟಿ ನಾರಾಯಣ” ಎಂಬ ಬಿರುದನ್ನು ಪಡೆದ ಒಡೆಯರ್‌ ಯಾರು?

ಎ) ನಾಲ್ವಡಿ ಕೃಷ್ಣರಾಜ ಒಡೆಯರ್ ಬಿ) ಮುಮ್ಮಡಿ ಕೃಷ್ಣರಾಜ ಒಡೆಯರ್
ಸಿ) ಕೃಷ್ಣರಾಜ ಒಡೆಯರ್ ಡಿ) ಚಿಕ್ಕ ದೇವರಾಜ ಒಡೆಯರ್

ಉತ್ತರ : (ಡಿ)

ವಿವರಣೆ: ಚಿಕ್ಕ ದೇವರಾಜ ಒಡೆಯರ್‌ರವರು ಶ್ರೀರಂಗಪಟ್ಟಣದ ಬಳಿ ಪಶ್ಚಿಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಕೃಷಿಗೆ ನೀರು ಒದಗಿಸಿದರು. ಆಡಳಿತದಲ್ಲೂ ಮಿತವ್ಯಯ ಸಾಧಿಸಿ, ಭಾರಿ ನಿಧಿಯನ್ನು ಕೂಡಿಟ್ಟು ‘ನವಕೋಟಿ ನಾರಾಯಣ’ ಎಂಬ ಬಿರುದನ್ನು ಪಡೆದನು.

(ಪ್ರಶ್ನೋತ್ತರ ಸಂಯೋಜನೆ: www.iasjnana.com ಸಂಪರ್ಕಕ್ಕೆ: 9916399276)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು