ರಬಕವಿ–ಬನಹಟ್ಟಿ: ‘ಅಭಿನಂದನಾ ಗ್ರಂಥಗಳು ಉತ್ರ್ಪೇಕ್ಷೆ ಮತ್ತು ಹೊಗಳಿಕೆಯಾಗಬಾರದು. ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ಮೊದಲು ನಮ್ಮಲ್ಲಿ ಸೌಜನ್ಯ ಅಗತ್ಯವಾಗಿದೆ’ ಎಂದು ಜಮಖಂಡಿ ನಿವೃತ್ತ ಪ್ರಾಚಾರ್ಯ ಸಂಗಮೇಶ ಮಟೋಳಿ ತಿಳಿಸಿದರು.

ಅವರು ಭಾನುವಾರ ಸಮೀಪದ ಯಲ್ಲಟ್ಟಿಯ ಕೊಣ್ಣೂರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಕಸಾಪ ಘಟಕದ ಆಶ್ರಯದಲ್ಲಿ53ನೇ ತಿಂಗಳ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ಪ್ರಾ.ಬಸವರಾಜ ಕೊಣ್ಣೂರ ಕುರಿತು ಸಿದ್ಧರಾಮ ಖಾನಾಪುರ ಸಂಪಾದಿಸಿದ ಬೋಧನಾ ತಪಸ್ವಿ ಅಭಿನಂದನಾ ಕೃತಿ ಕುರಿತು ಮಾತನಾಡಿದರು.

ಉದಾತ್ತ ವ್ಯಕ್ತಿಯ ಸಾಧನೆಗಳನ್ನು ಹೇಳುವುದೇ ಒಂದು ಭಾಗ್ಯವಾಗಿದೆ. ಸಜ್ಜನೆಕೆಯಿಂದ ವ್ಯಕ್ತಿಯ ವ್ಯಕ್ತಿತ್ವ ಹೆಚ್ಚಾಗುತ್ತದೆ. ವ್ಯಕ್ತಿ ಮನಸ್ಸಿನಿಂದ ಶ್ರೀಮಂತನಾಗಬೇಕು. ಅಂಥ ಸೌಜನ್ಯವನ್ನು ಮತ್ತು ಶ್ರೀಮಂತಿಕೆಯನ್ನು ಕೊಣ್ಣೂರು ಹೊಂದಿದ್ದಾರೆ ಎಂದು ಸಂಗಮೇಶ ಮಟೋಳಿ ತಿಳಿಸಿದರು.

ಪ್ರಾದೇಶಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಮಾತನಾಡಿ, ಜೀವನದಲ್ಲಿ ಯಾವುದು ಕನಿಷ್ಟ ಅಲ್ಲ. ಸಾಮಾಜಿಕ ಪರಿವರ್ತನೆಗಾಗಿ ಎಲ್ಲರೂ ಮೆಚ್ಚುವ ಕಾರ್ಯವನ್ನು ಕೊಣ್ಣೂರ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿರುವುದು ಸ್ತುತ್ಯವಾದ ಕಾರ್ಯವಾಗಿದೆ ಎಂದು ಅವರು ಹೇಳಿದರು.

ಹಿರಿಯ ವಕೀಲ ಎನ್.ಎಸ್.ದೇವರವರ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಚಾರ್ಯ ಬಸವರಾಜ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ, ಚಂದ್ರಕಾಂತ ಹೊಸೂರ, ಶಿವಾನಂದ ದಾಶಾಳ ಮಾತನಾಡಿದರು.

ಶಂಕರ ಜುಂಜಪ್ಪನವರ, ಟಿ.ವಿ.ಅರಳಿಕಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಕೇರಿ, ಬಸವರಾಜ ಮೇಟಿ, ಶಾರದಾ ಮುಳ್ಳೂರ, ವೆಂಕಟೇಶ ನಿಂಗಸಾನಿ, ಭುಜಬಲಿ ಕೆಂಗಾಲಿ, ಸುರೇಶ ಕೋಲಾರ, ಮಲ್ಲಪ್ಪ ಗಣಿ, ಡಾ. ಮಲ್ಲಿಕಾರ್ಜುನ ಜವಳಗಿ, ಎಸ್.ಎಸ್.ಹೂಲಿ, ಗೋಪಾಲ ಭಟ್ಟಡ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-19-1943094660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.