ರಬಕವಿ ಬನಹಟ್ಟಿ: ‘ಜೀವನದಲ್ಲಿ ಜನ್ಮ ನೀಡಿದ ತಂದೆ, ತಾಯಿ, ವಿದ್ಯೆ ನೀಡಿದ ಗುರುಗಳು ಮತ್ತು ಧಾರ್ಮಿಕ ಗುರುಗಳಲ್ಲಿ ನಮಗೆಲ್ಲರಿಗೂ ವಿದ್ಯೆ ನೀಡಿ ಮಾರ್ಗದರ್ಶನ ಮಾಡಿದ ಗುರು ಅತ್ಯಂತ ಶ್ರೇಷ್ಠವಾಗಿದ್ದಾರೆ’ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು.

ಇಲ್ಲಿನ ಭದ್ರನವರ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಎಸ್ಆರ್ಎ ಹೈಸ್ಕೂಲ್ನ 2000-01ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜೀವನದಲ್ಲಿ ಗುರುವಿನ ಸ್ಮರಣೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿ ಕಲಿಸಬೇಕು’ ಎಂದರು.

ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಿ, ‘ಎಸ್ಆರ್ಎ ಹೈಸ್ಕೂಲ್ನಲ್ಲಿ ಕಲಿತ ಬಹಳಷ್ಟು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರಾಗಿದ್ದು, ಅವರಲ್ಲಿ ಡಾ.ಸ.ಜ.ನಾಗಲೋಟಿಮಠ, ದಕ್ಷ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಅಂತರರಾಷ್ಟ್ರೀಯ ಗಣಿತಜ್ಞ ವೀರಭದ್ರ ಕುಳ್ಳಿ, ಅಂತರರಾಷ್ಟ್ರೀಯ ವನ್ಯ ಜೀವ ಚಿತ್ರ ಕಲಾಕಾರ ಜಯವಂತ ಮುನ್ನೊಳ್ಳಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ’ ಎಂದರು.

ನಿವೃತ್ತ ಪ್ರಾಚಾರ್ಯ ಎಚ್.ಆರ್. ಮೆಟಗುಡ್ಡ, ಶಿಕ್ಷಕರಾದ ಅಶೋಕ ಪತ್ತಾರ, ಎನ್.ಎಸ್. ಕಂಕಣಮೇಲಿ, ಎಂ.ಪಿ.ದೂಪದಾಳ, ಎಂ.ಎಚ್. ನದಾಫ್ ಗಿರಿಜಾ ಬಂಡಿವಡ್ಡರ ಮಾತನಾಡಿದರು.

ನಿವೃತ್ತ ಉಪ ಪ್ರಾಚಾರ್ಯ ಡಿ.ಎ. ಬಾಗಲಕೋಟ ಅಧ್ಯಕ್ಷತೆ ವಹಿಸಿದ್ದರು. 25ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಾದ ಬಸವರಾಜ ಪಟ್ಟಣ, ಡಾ.ಯುವರಾಜ ಹನಗಂಡಿ, ಸುಜಾತಾ ಶೀಲವಂತ, ಪ್ರವೀಣ ಪಾಟೀಲ, ಚೇತನ ಪಟ್ಟಣ, ವಿಶ್ವನಾಥ ಹುನ್ಣೂರ, ಶಂಭು ಭದ್ರನವರ ಮಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-19-2005516912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.