ರಬಕವಿ ಬನಹಟ್ಟಿ: ‘ವಿದ್ಯಾರ್ಥಿಗಳು ದಿನನಿತ್ಯ ಗುರುವಿನ ಸ್ಮರಣೆ ಮಾಡಬೇಕು. ಶಿಷ್ಯರು ಮಾಡುವ ಸಾಧನೆಯಿಂದ ಗುರುವಿನ ಗೌರವ ಹೆಚ್ಚಾಗುತ್ತದೆ’ ಎಂದು ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು ತಿಳಿಸಿದರು.

ಇಲ್ಲಿನ ಲಕ್ಷ್ಮಿ ನಗರದ ಲಕ್ಷ್ಮಿ ದೇವಿ ಸಮುದಾಯ ಭವನದಲ್ಲಿ ಸ್ಥಳೀಯ ಎಸ್.ಆರ್.ಎ ಹೈಸ್ಕೂಲಿನಲ್ಲಿ 1988-89 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರನ್ನು ಗೌರವಿಸುತ್ತಿರುವುದು ಸ್ತುತ್ಯಾರ್ಹ’ ಎಂದರು.

ನಿವೃತ್ತ ಉಪ ಪ್ರಾಚಾರ್ಯಅಶೋಕ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.

ವರ್ಧಮಾನ ಯಲಗುದ್ರಿ, ಆರ್ಥಿಕವಾಗಿ ಹಿಂದುಳಿದ ಸ್ನೇಹಿತನ ಮಗನ ಶಿಕ್ಷಣಕ್ಕಾಗಿ ಪ್ರತಿ ವರ್ಷ ₹5 ಸಾವಿರ ನೀಡುವುದಾಗಿ ಮತ್ತು ಕೆಲವರ ಮಕ್ಕಳಿಗೆ ಉದ್ಯೋಗ ನೀಡುವುದಾಗಿ ತಿಳಿಸಿದರು. ಅಶೋಕ ಹಳ್ಳಿ, ಎಸ್.ಆರ್.ಕಲಾದಗಿ, ಪವನ ಲಡ್ಡಾ, ಕಾಡು ಹಳಿಂಗಳಿ, ಮಲ್ಲಿಕಾರ್ಜುನ ಕುಂಚನೂರ, ಬಸವರಾಜ ಅಮಟಿ, ಉಜ್ವಲಾ ಬಾಣಕಾರ, ಭಾರತಿ ಜಾಡಗೌಡ, ಅನಿತಾ ಕೋಲಾರ, ದಾಕ್ಷಾಯಣಿ ಹುನ್ನೂರು ಮತ್ತು ಮುಳೆಗಾವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-19-995657505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.