ರಬಕವಿ ಬನಹಟ್ಟಿ: ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಅವರಲ್ಲಿ ಛಲ ಮತ್ತು ಗುರಿ ಅವಶ್ಯಕವಾಗಿದೆ ಎಂದು ಅಥಣಿಯ ಉಪನ್ಯಾಸಕಿ ಪ್ರಿಯಾ ಹುಲಗಬಾಳಿ ತಿಳಿಸಿದರು.

ಅವರು ಭಾನುವಾರ ರಬಕವಿಯ ಬಣಜಿಗ ಸಮಾಜದ ಶ್ರೀದೇವಿ ಮಹಿಳಾ ಮಂಡಳದ ರಜತ ಮಹೋತ್ಸವ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಬಣಜಿಗ ಸಮಾಜದ ಮಹಿಳೆಯರು 25 ವರ್ಷಗಳಿಂದ ಸಂಘಟಿತರಾಗಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಲಿಂಗ ತಾರತಮ್ಯ ನೀತಿಯನ್ನು ತೊಡೆದು ಹಾಕಿ ಶರಣ ಪರಂಪರೆಯಿಂದ ಪ್ರೇರಿತ ಸಮಾಜದಲ್ಲಿ ಮಹಿಳೆಯರ ಕಾರ್ಯಕ್ರಮಕ್ಕೆ ಸಮಾಜದ ಪುರುಷರು ಕೂಡ ಸಹಕಾರ ನೀಡುತ್ತಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಮುಖಂಡರಾದ ಕವಿತಾ ಕೊಣ್ಣೂರ ಮಾತನಾಡಿದರು. ಮಹಿಳಾ ಮಂಡಳದ ಹಿರಿಯರಾದ ಪಾರ್ವತಮ್ಮ ಮುತ್ತೂರ ಅಧ್ಯಕ್ಷತೆ ವಹಿಸಿದ್ದರು. ಶೋಭಾ ನಾಶಿ, ಶಿಲ್ಪಾ ಮುತ್ತೂರ, ಮಧು ಢಪಳಾಪುರ, ರೇಖಾ ತೆಗ್ಗಿ, ಎಂ.ಎಸ್. ಗಡೆನ್ನವರ, ಸುಹಾನಿ ಮುತ್ತೂರ, ಶ್ರೀದೇವಿ ಪರಮಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-19-1166776647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.