ರಬಕವಿ ಬನಹಟ್ಟಿ: ‘ಇಂದಿನ ದಿನಗಳಲ್ಲಿ ನಾವು ಹಣ ಸಂಪಾದನೆಗಾಗಿ ಶಿಕ್ಷಣ ಪಡೆದುಕೊಳ್ಳದೆ ಜ್ಞಾನವನ್ನು ಪಡೆದುಕೊಳ್ಳುವುದಕ್ಕಾಗಿ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಜಗತ್ತಿನಲ್ಲಿ ಜ್ಞಾನದಿಂದ ಎಲ್ಲವನ್ನು ಸಾಧಿಸಬಹುದಾಗಿದೆ’ ಎಂದು ಜಮಖಂಡಿ ಬಿ ಎಲ್ ಡಿ ಇ ಕಾಲೇಜಿನ ಪ್ರಾಚಾರ್ಯ ಪಿ.ಡಿ.ಪೋಳ ತಿಳಿಸಿದರು.

ಅವರು ಸೋಮವಾರ ಇಲ್ಲಿನ ಎಸ್ ಟಿ ಸಿ ಕಾಲೇಜಿನ ಪ್ರಸ್ತುತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಚಾರ್ಯ ಜಿ.ಆರ್.ಜುನ್ನಾಯ್ಕರ್, ಮಹಾವಿದ್ಯಾಲಯವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.

ನಿವೃತ್ತ ಪ್ರಾಚಾರ್ಯೆ ದಾಕ್ಷಾಯಣಿ ಕುಳ್ಳಿ ಅವರು ಬರೆದ ಅಂತರರಾಷ್ಟ್ರೀಯ ಗಣಿತ ತಜ್ಞ ಡಾ.ವಿ.ಆರ್. ಕುಳ್ಳಿ ಗ್ರಂಥವನ್ನು ಪಿ.ಡಿ.ಪೋಳ ಲೋಕಾರ್ಪಣೆ ಮಾಡಿದರು. ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಮಂಜುನಾಥ ಬೆನ್ನೂರ, ಮನೋಹರ ಶಿರಹಟ್ಟಿ, ಸುರೇಶ ನಡೋಣಿ, ರೇಶ್ಮಾ ಗಜಾಕೋಶ, ಜಿ.ಎಸ್.ಪಾಟೀಲ, ವಿ.ವೈ.ಪಾಟೀಲ, ವಿಜಯಲಕ್ಷ್ಮಿ ಮಾಚಕನೂರ ಮಾತನಾಡಿದರು.

ಜೆಎಸ್ಎಸ್ ಸಂಘದ ಆಡಳಿತ ಮಂಡಳಿಯ ಸದಸ್ಯ ಶ್ರೀಶೈಲ ಯಾದವಾಡ ಅಧ್ಯಕ್ಷತೆ ವಹಿಸಿದ್ದರು.

ವಿ.ಆರ್.ಕುಳ್ಳಿ, ಪಂಡಿತ ಹನಗಂಡಿ, ಮಹಾದೇವಿ ಕೊಳಕಿ, ಉಪನ್ಯಾಸಕರಾದ ಜಿ.ಎಸ್.ಸಜ್ಜನ, ಎಸ್.ಬಿ.ಉಕ್ಕಲಿ, ರಮೇಶ ಮಾಗುರಿ, ರಶ್ಮಿ ಕೊಕಟನೂರ, ಓಂಕಾರ ಯರಗಟ್ಟಿಕರ, ಶ್ವೇತಾ ಮಠದ, ಕಾವೇರಿ ಜಗದಾಳ, ಲತಾ ಹುನಗುಂದ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-19-1666928422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.