ರಬಕವಿ ಬನಹಟ್ಟಿ: ‘ಇಲ್ಲಿನ ಎಸ್ಟಿಸಿ ಕಾಲೇಜು ಆಶ್ರಯದಲ್ಲಿ ‘ಒಂದು ದೇಶ, ಒಂದು ತೆರಿಗೆ: ದಕ್ಷಿಣ ಭಾರತದ ರಾಜ್ಯಗಳ ಗ್ರಾಮೀಣ ವಸ್ತ್ರೋದ್ಯಮದ ಕ್ಷೇತ್ರದಲ್ಲಿ ಜಿಎಸ್ಟಿ ಸುಧಾರಣೆಗಳ ಮೌಲ್ಯ ಮಾಪನ’ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಏಪ್ರಿಲ್ 17, 18ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಜೆಎಸ್ಎಸ್ ಸಂಘದ ಕಾರ್ಯಾಧ್ಯಕ್ಷ ಬಸವಂತ ಜಾಡಗೌಡ ತಿಳಿಸಿದರು.

ಕಾಲೇಜು ಸಭಾಭವನದಲ್ಲಿ ವಿಚಾರ ಸಂಕಿರಣದ ಪ್ರಚಾರ ಸಾಮಗ್ರಿಗಳನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಾಚಾರ್ಯ ಜಿ.ಆರ್. ಜುನ್ನಾಯ್ಕರ್ ಮಾತನಾಡಿ, ‘17ರಂದು ಬೆಳಿಗ್ಗೆ 10 ಗಂಟೆಗೆ ಸಭಾಭವನದಲ್ಲಿ ವಿಜಯಪುರದ ಹಿರಿಯ ಲೆಕ್ಕಪರಿಶೋಧಕ ಎಸ್.ಆರ್. ಮಠಪತಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಜಿಎಸ್ಟಿ ಗುಪ್ತ ದಳ ವಿಭಾಗದ ಉಪನಿರ್ದೇಶಕ ಕಿಶೋರ ಭಟ್ಟಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಕಯದ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಡೀನ್ ಎಂ.ಆರ್. ಸೊಲ್ಲಾಪುರ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಘದ ಆಡಳಿತ ಮಂಡಳಿಯ ನಿರ್ದೇಶಕ ವಿ.ಆರ್. ಕುಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

ಕಾರ್ಯಕ್ರಮದ ಸಂಯೋಜಕ ಪ್ರಕಾಶ ಕೆಂಗನಾಳ ಮಾತನಾಡಿ, ‘ವಿಚಾರ ಸಂಕಿರಣದಲ್ಲಿ ನಾಲ್ಕು ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬಾಗಲಕೋಟೆ ವಿಶ್ವವಿದ್ಯಾಲಯದ ಉಪನ್ಯಾಸಕರು, ಪ್ರತಿನಿಧಿಗಳು ಮತ್ತು ರಬಕವಿ ಬನಹಟ್ಟಿ ಸುತ್ತ ಮುತ್ತಲಿನ ತೆರಿಗೆ ಸಲಹೆಗಾರರು ಮತ್ತು ಲೆಕ್ಕ ಪರಿಶೋಧಕರು ಭಾಗವಹಿಸಲಿದ್ದಾರೆ’ ಎಂದರು.

ರಾಜಶೇಖರ ಸೋರಗಾವಿ, ಭೀಮಶಿ ಮಗದುಮ್, ಪಂಡಿತ ಹನಗಂಡಿ, ಗೀತಾ ಸಜ್ಜನ, ಮಂಜುನಾಥ ಬೆನ್ನೂರ, ಆರ್.ಬಿ. ಮಾಗುರಿ, ಎಸ್.ಬಿ. ಉಕ್ಕಲಿ, ಸುರೇಶ ನಡೋಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-19-1938972209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.