ಶಹಾಪುರ: ‘ಸಕಲ ವ್ಯವಸ್ಥೆಯನ್ನು ಹೊಂದಿರುವ ಭೀಮರಾಯನಗುಡಿ ಕಾಲೇಜು ಗುರುಕುಲದಂತೆ ಉತ್ತಮ ಪರಿಸರವನ್ನು ಹೊಂದಿದೆ. ಇದು ಗ್ರಾಮೀಣ ಕೃಷಿ ಪದವೀಧರರಿಗೆ ಆಶಾಕಿರಣವಾಗಿದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ತಿಳಿಸಿದರು.

ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಕಾಲೇಜಿನ ‘ರಜತ ಮಹೋತ್ಸವ’ ಮತ್ತು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

‘ಕೃಷಿ ಪದವಿಯಲ್ಲಿ ನಾಲ್ಕು ವರ್ಷ ಕಷ್ಟಪಟ್ಟು ಅಭ್ಯಾಸ ಮಾಡಿದರೆ ಮುಂದೆ 40 ವರ್ಷ ನೆಮ್ಮದಿ ಜೀವನ ನಡೆಸಲು ಸಾಧ್ಯ. ಸಮಗ್ರ ಕೃಷಿ ಪದ್ಧತಿಯೇ ರೈತರ ಜೀವಾಳವಾಗಿದೆ’ ಎಂದು ಹೇಳಿದರು.

‘ಕೃಷಿ ಪದವಿ ಮುಗಿದ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಜೀವನ ನಡೆಸಲು ದಿಕ್ಸೂಚಿಯಾಗಬಲ್ಲದು. ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ನೀವು ಮತ್ತೊಬ್ಬ ರೈತರಿಗೆ ಪ್ರೇರಣೆಯಾಗಬೇಕು. 5 ಎಕರೆ ಜಮೀನು ಮತ್ತು ಎರಡೂವರೆ ಇಂಚು ನೀರು ಇದ್ದರೆ ಕೃಷಿಯಿಂದ ಬದುಕಿನ ಚಿತ್ರಣವನ್ನು ಬದಲಾಯಿಸಲು ಸಾಧ್ಯ’ ಎಂದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ‘ಕೃಷಿ ಪದವಿ ಪಡೆದ ವಿದ್ಯಾರ್ಥಿಗಳು ಖಾಸಗಿ ಕಂಪನಿಯ ಅಡಿಯಾಳು ಆಗಬೇಡಿ. ಮಣ್ಣು ನಮ್ಮ ಬಹುದೊಡ್ಡ ಆಸ್ತಿ, ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕು’ ಎಂದರು.

‘ಕೃಷಿ ಬಗ್ಗೆ ಎಲ್ಲರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ, ಕೃಷಿಕ ಇಲ್ಲದೆ ಬದುಕಲು ಅಸಾಧ್ಯ. ಮನುಕುಲಕ್ಕೆ ಅನ್ನ ನೀಡುವ ರೈತಾಪಿ ವರ್ಗದ ಬಗ್ಗೆ ಯಾವತ್ತೂ ತಾತ್ಸರ ಮಾಡಬೇಡಿ’ ಎಂದು ಸಲಹೆ ನೀಡಿದರು.

ಕೃಷಿ ವಿವಿಯ ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ವನದುರ್ಗ ಮಾತನಾಡಿ, ‘ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರಿಂದ ಹೆಚ್ಚಿನ ಒತ್ತಡ ಹಾಕಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದೇನೆ. ಅತ್ಯುತ್ತಮ ಕಾಲೇಜು ಎಂಬ ಹೆಗ್ಗಳಿಕೆಗೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು

ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡೀನ್ ಎಸ್.ಎಸ್.ಪಾಟೀಲ ಹಾಗೂ ಎಸ್.ಎನ್.ಉಪ್ಪೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹಳೆ ವಿದ್ಯಾರ್ಥಿ ಶಶಿಕಾಂತ ಕಟ್ಟಿಮನಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು, ಸಿಬ್ಬಂದಿ ಹಾಗೂ ಕೃಷಿ ಕೂಲಿಕಾರ್ಮಿಕರನ್ನು ಗೌರವಿಸಲಾಯಿತು. ಕಾಲೇಜಿನ ಡೀನ್ ಪ್ರಕಾಶ ಕುಚನೂರ, ಮಲ್ಲೇಶ ಕೊಲಿಮಿ, ಗುರುರಾಜ ಸುಂಕದ, ಪ್ರಭುರಾಜ, ಎಸ್.ಕೆ.ಜುಲಕ್ಷ್ಮಿ, ಎಂ.ಎಸ್.ಅಯ್ಯಣ್ಣಗೌಡ, ಎಸ್.ಟಿ.ಯಂಜೇರಪ್ಪ, ಜಿ.ರವಿಶಂಕರ, ರಾಜಣ್ಣ, ರವಿ ಮೇಸ್ತಾ, ಟಿ.ಸುಮಾ ಸೇರಿದಂತೆ ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-30-1043620180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.