ರಾಯಚೂರು: ಇತ್ತಿಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರಲ್ಲೂ ಹೃದಯಾಘಾತ ಹೆಚ್ಚುತ್ತಿದೆ. ಎಕ್ಮೊ ಬೆಂಬಲಿತ ಹೃದಯ ಶಸ್ತ್ರಚಿಕಿತ್ಸೆಯಿಂದ ಹೃದಯಾಘಾತ ತಡೆಯಬಹುದು ಎಂದು ವಿಜಯ ಪಾಲಿಕ್ಲಿನಿಕ್ನ ಹೃದ್ರೋಗ ತಜ್ಞ ಡಾ.ಅಜಿತ್ ಕುಲಕರ್ಣಿ ತಿಳಿಸಿದರು. ರಾಯಚೂರಿನ ಸುರೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗಳನ್ನು ನಡೆಸಿದಾಗ ಗಂಭೀರ ಸಮಸ್ಯೆಗಳಿರುವುದು ಪತ್ತೆಯಾಗಿತ್ತು. ಯಶೋಧಾ ಆಸ್ಪತ್ರೆಯ ತುರ್ತು ಚಿಕಿತ್ಸಾ ತಂಡ ಆಗಮಿಸಿ ಎಕ್ಮೊ ಚಿಕಿತ್ಸೆ ನೀಡಿದ್ದರಿಂದ ಅವರು ಗುಣಮುಖರಾಗಲು ಸಾಧ್ಯವಾಯಿತು ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಎಕ್ಮೊ ಎನ್ನುವುದು ಹೃದಯ ಅಥವಾ ಶ್ವಾಸಕೋಶಗಳು ತೀವ್ರವಾಗಿ ಅನಾರೋಗ್ಯಕ್ಕೀಡಾದಾಗ, ಅವುಗಳ ಕಾರ್ಯವನ್ನು ತಾತ್ಕಾಲಿಕವಾಗಿ ಹೊರಗಿನಿಂದ ನಿರ್ವಹಿಸುವ ಅತ್ಯಾಧುನಿಕ ಜೀವ ರಕ್ಷಕ ಯಂತ್ರವಾಗಿದೆ. ಇದು ದೇಹದ ರಕ್ತವನ್ನು ಹೊರತೆಗೆದು, ಅದರಲ್ಲಿನ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದು, ಆಮ್ಲಜನಕವನ್ನು ತುಂಬಿ, ಮರಳಿ ದೇಹಕ್ಕೆ ಪಂಪ್ ಮಾಡುತ್ತದೆ’ ಎಂದರು.

ಬೆಂಗಳೂರು, ಹೈದರಾಬಾದ್ ಅಂತ ದೊಡ್ಡನಗರಗಳಿಗೆ ಮಾತ್ರ ಸೀಮಿತವಾದ ಎಕ್ಮೊ ಚಿಕಿತ್ಸೆ ಈಗ ಜಿಲ್ಲಾ ಮಟ್ಟದಲ್ಲಿಯೂ ದೊರೆಯುವಂತಾಗಿದೆ. ಹೃದಯಾಘಾತ ಸಮಸ್ಯೆ ಎದುರಿಸುವ ರೋಗಿಗಳ ಪ್ರಾಣ ರಕ್ಷಿಸಲು ಸಾಧ್ಯವಾಗಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೈದರಾಬಾದ್ ಯಶೋಧಾ ಆಸ್ಪತ್ರೆಯ ನಿರ್ದೇಶಕ ಡಾ.ಭರತ್ ವಿಜಯ ಪುರೋಹಿತ, ಯಶೋಧ ಆಸ್ಪತ್ರೆಯ ವೈದ್ಯ ಡಾ.ವೆಂಕಟರಮಣ, ಸುರೇಂದ್ರ, ಗೌತಮ ಚಂದ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-32-1593163132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.