ರಾಯಚೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಗರದ ನವರಂಗ ದರ್ವಾಜಾ ಬಳಿಯ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೋಮವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಆಚರಿಸಲಾಯಿತು.

ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕಿ ರೇಖಾ ಪಾಟೀಲ ಮಾತನಾಡಿ, ‘ವಸ್ತು ಸಂಗ್ರಹಾಲಯ ದಿನಾಚರಣೆ ಬಹುಮುಖ್ಯ. ಇದರಿಂದ ನಮ್ಮ ಪೂರ್ವದ ಇತಿಹಾಸವನ್ನು ಅವಲೋಕಿಸಿದಂತಾಗುತ್ತದೆ. ಇತಿಹಾಸವು ಎಲ್ಲ ಸಮಾಜ ವಿಜ್ಞಾನಗಳ ಮಾತೃ ವಿಷಯ. ಇತಿಹಾಸದ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ’ ಎಂದು ಅವರು ಹೇಳಿದರು.

ಸೇಂಟ್ ಮೇರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಲಕ್ಷ್ಮಣ ಜಾಲಿಬೆಂಚಿ ಮಾತನಾಡಿ,‘ಪುರಾತತ್ವ ಇಲಾಖೆ ಬೆಳೆದು ಬಂದ ದಾರಿ, ಹರಪ್ಪ-ಮೊಹೆಂಜೋದಾರೋ ಉತ್ಖನನ, ವಸ್ತು ಸಂಗ್ರಹಾಲಯಗಳ ಮಹತ್ವ ಹಾಗೂ ಜಿಲ್ಲೆಯ ಪ್ರಮುಖ ಸ್ಮಾರಕಗಳ ಕುರಿತು ವಿವರಿಸಿದರು. ಜೊತೆಗೆ ಬೇಲೂರು, ಹಳೆಬೀಡು, ಹಂಪಿ, ತಂಜಾವೂರು, ಮಹಾರಾಷ್ಟ್ರದ ಸ್ಮಾರಕಗಳ ಬಗ್ಗೆಯೂ ಮಾಹಿತಿ ನೀಡಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ ಕುಮಾರ ಮಾತನಾಡಿ ಮಲಿಯಾಬಾದ ಕೋಟೆ, ಅಲ್ಲಿನ ಕಲ್ಲಿನ ಆನೆಗಳು ಹಾಗೂ ರಾಯಚೂರು ಕೋಟೆ ನಿರ್ಮಾಣ, ಕಾಕತೀಯರ ಸ್ಮಾರಕಗಳ ಕುರಿತು ಮಾಹಿತಿ ನೀಡಿದರು.

ಸರ್ಕಾರಿ ವಸ್ತು ಸಂಗ್ರಹಾಲಯದ ಪ್ರಭಾರ ಕ್ಯುರೇಟರ್ ಶಿವಪ್ರಕಾಶ ಮಾತನಾಡಿ, ‘ವಸ್ತು ಸಂಗ್ರಹಾಲಯಗಳು ಸಾಂಸ್ಕೃತಿಕ ವಿದ್ಯಾ ಕೇಂದ್ರಗಳು. ಇವುಗಳ ಸದುಪಯೋಗ ಪಡೆಯಬೇಕು. ವಿಭಜಿತ ಜಗತ್ತನ್ನು ಒಂದುಗೂಡಿಸುವ ವಸ್ತು ಸಂಗ್ರಹಾಲಯಗಳು ಈ ವರ್ಷದ ಘೋಷ ವಾಕ್ಯವಾಗಿದೆ’ ಎಂದು ಅವರು ಹೇಳಿದರು.

ಬಜರಂಗ ಬಲಿ ಹನುಮಾನ ದೇವಸ್ಥಾನದ ಪುರೋಹಿತ ಸಂದೀಪ ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು.

ವಿದ್ಯಾರ್ಥಿನಿಯರಾದ ಜಮುನಾ ಹಾಗೂ ಸಾದಿಯಾ ಪ್ರಾರ್ಥನಾ ಗೀತೆ ಹಾಡಿದರು.

ಆಯುರ್ವೇದ ತಜ್ಞ ವೈದ್ಯ ಪ್ರಮೋದ ನಿಜಾಂಕಾರಿ, ಹರೀಶ ನಿಜಾಂಕಾರಿ, ಸೈಯದ್ ಅಬ್ದುಲ್ ರಹೀಂ, ಕಿರಣ ಕುಮಾರ, ಅಬ್ದುಲ್ ಖದೀರ್, ಪ್ರವಾಸಿ ಮಿತ್ರರಾದ ತಿಮ್ಮಪ್ಪ, ರಾಧಾ ಸೇರಿದಂತೆ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-32-426836448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.