ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏಪ್ರಿಲ್ 30ರಂದು ‘ತತ್ವಪದ ಸಾಹಿತ್ಯ : ನಡೆ-ನುಡಿ ಮೌಲ್ಯ’ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಂ ಜಿ.ವೆಂಕಟೇಶ್ ಉದ್ಘಾಟಿಸುವರು. ಆದಿಕವಿ ಶ್ರೀ ಮಹರ್ಷಿ ವಾಲ್ಮಿಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಕುಲಸಚಿವ (ಆಡಳಿತ) ಎ. ಚನ್ನಪ್ಪ, ಕುಲಸಚಿವ (ಮೌಲ್ಯಮಾಪನ) ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಕೆ.ವೆಂಕಟೇಶ್, ಹಣಕಾಸು ಅಧಿಕಾರಿಗಾಯತ್ರಿ, ಸಂಗೀತ ನಿರ್ದೇಶಕ ಮದನ್ ಪಾಟೀಲ, ದಸ್ತಗೀರಸಾಬ್ ದಿನ್ನಿ ಉಪಸ್ಥಿತರಿರುವರು.

ವಿಚಾರ ಸಂಕಿರಣದಲ್ಲಿ ‘ಮಧ್ಯಕಾಲೀನ ಭಕ್ತಿ ಸಾಹಿತ್ಯದಲ್ಲಿ ತತ್ವಪದಕಾರರು’ ಕುರಿತು ಕರಿಯಪ್ಪ ಮಾಳಗಿ, ‘ತತ್ವಪದಕಾರರು ನಿರೂಪಿಸಿದ ನುಡಿ ಸಮಾಜ’ ಕುರಿತು ಎಲ್.ಜಿ.ಮೀರಾ, ‘ತತ್ವಪದಕಾರ್ತಿಯರು ಸಂವಾದಿಸಿದ ದೇಸಿ ಲೋಕ’ ವಿಷಯ ಕುರಿತು ವಿನಯಾ ಒಕ್ಕುಂದ ಅವರು ವಿಚಾರ ಮಂಡಿಸಲಿದ್ದಾರೆ. ಪ್ರತಿಭಾ ಗೋನಾಳ ಮತ್ತು ತಂಡ ತತ್ವಪದಗಳನ್ನು ಹಾಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-32-1511434009

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.