ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಸುದೀಕ್ಷಾ ಪ್ರಕಾಶನದ ವತಿಯಿಂದ ‘ಮೊಹಬ್ಬತಿನ ಮಹಲಿಗೂ ಬೆಂಕಿ’ ಚೊಚ್ಚಲ ಕೃತಿ ಬಿಡುಗಡೆ, ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿ ಶಿಕ್ಷಕಿಯರಿಗೆ ವಿದ್ಯಾದಾತೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏ.5ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶನದ ಸಂಸ್ಥಾಪಕ ಮಹಾಂತೇಶ ಬಿರಾದಾರ ಹೇಳಿದರು.

ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪ ಕುಲಪತಿ ಕೆ.ವೆಂಕಟೇಶ ಉದ್ಘಾಟಿಸುವರು. ಇಲಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರೀಫ್ ರಾಜಾ ಕೃತಿ ಬಿಡುಗಡೆ ಮಾಡುವರು ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಕಥೆಗಾರ ಶರಣಬಸವ ಗುಡದಿನ್ನಿ ಕೃತಿ ಪರಿಚಯ ಮಾಡುವರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯರಾಜೇಂದ್ರ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಸುಖದೇವ, ಶಿಕ್ಷಕಿ ಸಬಿಹಾ ನಿಖತ್ ಹಾಗೂ ಮಹಾಲಕ್ಷ್ಮೀ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪ್ರತಿಭಾ ಗೋನಾಳ, ನಂದೀಶ, ಸಂತೋಷ ನಂದಿನಿ, ಧನಲಕ್ಷ್ಮೀ, ರಾಘವೇಂದ್ರ, ರಾಜಶೇಖರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-32-896581569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.