ರಾಯಚೂರು : ‘ಇಡೀ ಭಾರತದಲ್ಲಿ ಬೇರೆ ಬೇರೆ ರೀತಿಯಲ್ಲಿ ತತ್ವಪದಗಳು ಬೇರೆ ಬೇರೆ ವಿನ್ಯಾಸದಲ್ಲಿ ಕರೆಯಲಾಗುತ್ತದೆ. ದರ್ಶನ, ಅನುಭಾವ, ಅಧ್ಯಾತ್ಮ ಎಂಬ ಮೂರು ಮುಖ್ಯ ಭಾಗಗಳಿವೆ. ಈ ಮೂರು ಹಂತಗಳನ್ನು ಹೊರಗಡೆ ನೋಡುವ ದರ್ಶನಕ್ಕಿಂತ ನಿನ್ನೊಳಗಿನ ದರ್ಶನ ಮೊದಲು ನೋಡಬೇಕು’ ಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಸಹಯೋಗ ಹಾಗೂ ಕನ್ನಡ ಅಧ್ಯಯನ ವಿಭಾಗ ವತಿಯಿಂದ ವಿವಿ ಸಭಾಂಗಣದಲ್ಲಿ ‘ತತ್ವಪದ ಸಾಹಿತ್ಯ: ನಡೆ-ನುಡಿ ಮೌಲ್ಯ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧ್ಯಾತ್ಮ ಎಂದರೆ ತನ್ನ ಒಳಗೆ ತಾನು ನೋಡಿಕೊಳ್ಳುವುದು. ಅಂದರೆ ಅರಿವಿನೊಳಗೆ ಅರಿವು ನೋಡುವುದು. ಅರಿವನ್ನು ನೋಡಲು ಗುರುವಿನ ಮಾರ್ಗ ಅಗತ್ಯವಾಗಿದೆ. ಗುರುಶಿಷ್ಯರ ಪರಂಪರೆ ಅಧ್ಯಾತ್ಮದಲ್ಲಿ ಕಾಣಬಹುದು. ನಿನ್ನೊಳಗಿನ ಅರಿವು ತಿಳಿದು ಅರಿತು ಪ್ರತಿಯೊಬ್ಬರು ಬೆಳಗುವ ದೀಪವಾಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ವಿವಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ‘ಶೈವ, ಕೀರ್ತನೆ, ವಚನ, ತತ್ವಪದಗಳಲ್ಲಿ ನಮ್ಮೊಳಗಿನ ಅರಿವು ಜ್ಞಾನದ ಬೆಳಕಾಗಿ ಹೊರಹೊಮ್ಮುವುದು ತಿಳಿಸುತ್ತವೆ. ತತ್ವಪದಕಾರರು ತತ್ವಪದಗಳಲ್ಲಿ ಅರಿವು ಗುರು ಪರಂಪರೆಯ ನೆಲೆಗಳನ್ನು ಕಾಣುವ ಮೂಲಕ ಗುರು ತೋರಿದ ಮಾರ್ಗದಲ್ಲಿ ನಡೆಯಬೇಕು’ ಎಂದು ತತ್ವಪದಕಾರರ ಗುರು ಪರಂಪರೆಯನ್ನು ತಿಳಿಸಿದರು.

‘ಮಧ್ಯಕಾಲೀನ ಭಕ್ತಿ ಸಾಹಿತ್ಯದಲ್ಲಿ ತತ್ವಪದಕಾರರು ಕುರಿತು ಚಿತ್ರದುರ್ಗದ ಕರಿಯಪ್ಪ ಮಾಳಗಿ, ತತ್ವಪದಕಾರರು ನಿರೂಪಿಸಿದ ನುಡಿ ಸಮಾಜ ಕುರಿತು ಬೆಂಗಳೂರಿನ ಎಲ್.ಜಿ.ಮೀರಾ, ತತ್ವಪದಕಾರ್ತಿಯರು ಸಂವಾದಿಸಿದ ದೇಸೀ ಲೋಕ ವಿಷಯದ ಕುರಿತು ವಿನಯಾ ಒಕ್ಕುಂದ ಅವರು ಗೋಷ್ಠಿಗಳನ್ನು ಮಂಡಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕುಲಸಚಿವ ಎ.ಚನ್ನಪ್ಪ, ಕುಲಸಚಿವ(ಮೌಲ್ಯಮಾಪನ) ಪ್ರೊ.ಜ್ಯೋತಿ ದಮ್ಮ ಪ್ರಕಾಶ್, ದಸ್ತಗೀರಸಾಬ್ ದಿನ್ನಿ ಉಪಸ್ಥಿತರಿದ್ದರು. ವಿಜ್ಞಾನ ನಿಕಾಯದ ಡೀನ್ ಪ್ರೊ.ಪಾರ್ವತಿ.ಸಿ.ಎಸ್., ವಾಣಿಜ್ಯ ನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ಕಲಾ ನಿಕಾಯದ ಡೀನ್ ಡಾ.ಲತಾ ಎಂ.ಎಸ್. ಎನ್ಎಸ್ಎಸ್ ಸಂಯೋಜಕ ಜಿ.ಎಸ್.ಬಿರಾದಾರ, ಕನ್ನಡ ವಿಭಾಗದ ಶರಣಪ್ಪ ಚಲವಾದಿ ಉಪಸ್ಥಿತರಿದ್ದರು.

ಡಾ.ಶರಣಪ್ಪ ಗೋನಾಳ ಮತ್ತು ಪ್ರತಿಭಾ ಗೋನಾಳ ತಂಡದವರು ತತ್ವಪದ ಹಾಡಿದರು. ಉಪ ಕುಲಸಚಿವ ಕೆ.ವೆಂಕಟೇಶ ಸ್ವಾಗತಿಸಿದರು. ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲೀಲಾ ಬಸನಗೌಡ ಹಾಗೂ ರಾಜೇಶ್ವರಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-32-974653960

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.