ರಾಯಚೂರು: ‘ರಜಾ ದಿನಗಳಲ್ಲಿ ಹೊಸ ಕೌಶಲ ಕಲಿತುಕೊಳ್ಳಬೇಕು. ಗಾಯನ, ನೃತ್ಯ, ಚಿತ್ರಕಲೆ, ವಿವಿಧ ಕ್ರೀಡೆಗಳು ಹೀಗೆ ಇನ್ನೂ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಾಯಕವಾಗುತ್ತವೆ’ ಎಂದು ಲೇಖಕ ಈರಣ್ಣ ಬೆಂಗಾಲಿ ಹೇಳಿದರು.

ತಾಲ್ಲೂಕಿನ ಮಮದಾಪುರದ ಗಧಾರ ಮಾರಿಕಾಂಬಾ ದೇವಸ್ಥಾನ ಸೇವಾ ಸಮಿತಿಯ ಗುರುಕುಲ ಶಿಕ್ಷಣ, ಗ್ರಾಮ ಪಂಚಾಯಿತಿ ಮತ್ತು ಅರಿವು ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಮಕ್ಕಳು ಶಾಲಾ ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ತಂದೆ–ತಾಯಿ, ಶಾಲೆ, ಊರಿಗೆ ಹೆಸರು ತರಬೇಕು’ ಎಂದರು.

ತಾ.ಪಂ ಇಒ ಚಂದ್ರಶೇಖರ ಪವಾರ, ಸಹಾಯಕ ನಿರ್ದೇಶಕ ಶಿವಪ್ಪ ನೆಲಹಾಳ ಮಾತನಾಡಿದರು. ಸಹಾಯಕ ನಿರ್ದೇಶಕ ಹನುಮಂತಪ್ಪ, ಪಿಡಿಒ ನಾಗರತ್ನ ಇದ್ದರು. ಶಿಕ್ಷಕ ವೃಂದ, ಶಿಬಿರ ಆಯೋಜನೆ ಮಾಡಿದ ಸೌರಪ್ಪ, ಪೂಜಾ, ಬಸವರೆಡ್ಡಿ ಯಾದವ, ಹುಸೇನ್ ಸಾಬ್, ಸುಗ್ರೀವ್, ಜಂಬಣ್ಣ, ರಮೇಶ್, ಪ್ರಜ್ವಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-32-1974182128

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.