ರಾಮದುರ್ಗ: ಕಲಿಯುವುದರ ಮೂಲಕ ಕನ್ನಡ ಭಾಷೆ ಉಳಿಸಲು ಸಾಧ್ಯ ಎಂದು ಆಶುಕವಿ ಸಿದ್ದಪ್ಪ ಸಾಬಣ್ಣ ಬಿದರಿ ಹೇಳಿದರು.

ಇಲ್ಲಿನ ಸಿ.ಎಸ್. ಬೆಂಬಳಗಿ ಕಾಲೇಜಿನ 60ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಾಯಿ ತಂದೆ, ಗುರು ಹಿರಿಯರ ಮೇಲಿನ ಪ್ರೀತಿ ಶಾಶ್ವತವಾಗಿರಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಎಸ್.ಎಸ್. ಸುಲ್ತಾನಪೂರ, ಪ್ರಾಚಾರ್ಯ ಪಿ.ಬಿ. ತೆಗ್ಗಿಹಳ್ಳಿ ಮಾತನಾಡಿದರು. ಜಿಮ್ಖಾನಾ ಉಪಾಧ್ಯಕ್ಷ ಎ.ಡಿ. ಕಾಮತ್ ವರದಿ ಓದಿದರು. ಕಾಲೇಜು ವಿದ್ಯಾರ್ಥಿನಿ ದ್ರಾಕ್ಷಾಯಿಣಿ ಬಡಿಗೇರ ರಚಿಸಿದ ಕಥಾ ಸಂಕಲನ ‘ನೈಜ ಬದುಕಿನ ಅನಾವರಣ’ ಹಾಗೂ ವೆಂಕಟೇಶ ಒಂಟನಾಳ ರಚಿಸಿದ ‘ಅಂತರಾಳದ ಮಾತು’ ಪುಸ್ತಕ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ಹನಮಂತ ಚನ್ನದಾಸರ, ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ರೇಷ್ಮಾ ಎಲ್.ಇಮ್ಮಾಬಾಯಿ ಹಾಗೂ ಬಿ.ಕಾಂ. ಅಂತಿಮ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ಲಕ್ಷ್ಮೀ ಜಿ.ಪಾಟೀಲ ಹಾಗೂ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ ಆಗಿದ್ದ 10 ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಪುರುಷರ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಸಿದ್ದಲಿಂಗಪ್ಪ ಕ್ವಾರಿ ಹಾಗೂ ಸಿದ್ದಪ್ಪ ಕಲ್ಲೂರ ಮತ್ತು ಮಹಿಳೆಯರ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಪ್ರಿಯಾ ಬಂಡಿವಡ್ಡರ ಹಾಗೂ ಸಾನಿಯಾ ಹಾಜಿ ಅವರನ್ನು ಗೌರವಿಸಲಾಯಿತು.

ವಿದ್ಯಾ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಪಿ.ಎಂ. ಪಟ್ಟಣ, ಗೌರವ ಕಾರ್ಯದರ್ಶಿ ಆರ್.ಪಿ. ಜಗತಾಪ ಮತ್ತು ಹಿರಿಯ ಸದಸ್ಯ ಡಾ. ವೈ.ಬಿ. ಕುಲಗೋಡ, ವಿ.ಎ. ಅದೃಶಪ್ಪನವರ, ಎಸ್.ಜಿ. ಚಿಕ್ಕೊಡಿ, ಎ.ವಿ. ಅದೃಶಪ್ಪನವರ, ಆರ್.ಜಿ. ವಜ್ರಮಟ್ಟಿ, ಪ್ರಭಾಕರ ಬೆಂಬಳಗಿ, ಪ್ರೇಮನಾಥ ಬೆಂಬಳಗಿ, ಬಿ.ಬಿ. ಕಬಾಡಗಿ, ಜಿ.ಡಿ. ರಾಠೋಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-428098961

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.