ಬಿಡದಿ: ಇಲ್ಲಿನ ಅಮೃತ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಸೈನ್ಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ‘ನೆಕ್ಸೋರಾ-2026’ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ದೇಶದ ವಿವಿಧ ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮ ತಾರ್ಕಿಕ ಕೃತಕ ಬುದ್ಧಿಮತ್ತೆ ಮತ್ತು ನೈಜ ಜಗತ್ತಿಗೆ ಅನುಷ್ಠಾನಗೊಳಿಸಬಹುದಾದ ಎ.ಐ ವಿಷಯದ ಮೇಲೆ ಕೇಂದ್ರೀಕರಿಸಿತ್ತು. ವಿ.ಎಲ್.ಎಸ್.ಐ ಮತ್ತು ಎಂಬೆಡೆಡ್ ಸಿಸ್ಟಮ್, ಸೈಬರ್ ಸುರಕ್ಷತೆ ಮತ್ತು ಬ್ಲಾಕ್ಚೈನ್, ರೋಬೋಟಿಕ್ಸ್ ಮತ್ತು ಕೈಗಾರಿಕಾ ಅನ್ವಯ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ ಪ್ರದರ್ಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಟಿಯು ಡಿಜಿಟೈಸೇಶನ್ ಕೇಂದ್ರದ ಮುಖ್ಯ ಸಂಯೋಜಕ ಡಾ.ಸುದರ್ಶನ ರೆಡ್ಡಿ, ವಿದ್ಯಾರ್ಥಿಗಳು ಶಾರ್ಟ್ಕಟ್ಗಳ ಮೊರೆ ಹೋಗದೆ ಸ್ವಂತ ಆಲೋಚನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಗೌರವ ಅತಿಥಿಗಳಾಗಿದ್ದ ರಂಗನಾಥ್ ಜಿ.ಎಚ್ ಮತ್ತು ಡಾ.ಸಂಗಪ್ಪ ಎಸ್.ಬಿ ಮಾತನಾಡಿದರು.

ಸಂಸ್ಥೆ ಪ್ರಾಂಶುಪಾಲ ಡಾ.ಸಂತೋಷ್ ಎಂ.ಮುರನಾಳ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿಕ್ ಡೀನ್ ಡಾ.ರಾಜೇಶ್ವರ್ ಕಾಡದೇವಮಠ, ಡಾ.ವಿರೇಶ್ ಪಾಟೀಲ, ಡಾ.ಬಿ.ಐ.ಡಿ ಕುಮಾರ್ ಮತ್ತು ಶ್ರೀ ವಿಕಾಸ್ ಶೆಟ್ಟರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-14-1733403987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.