ಚನ್ನಪಟ್ಟಣ: ಜಾನಪದ ಕಲೆಯು ಶ್ರಮಿಕರ ಬದುಕಿನ ನೋವು-ನಲಿವು ಮರೆಸುವ ಒಂದು ಜೀವಂತ ಅಭಿವ್ಯಕ್ತಿ ಮಾತ್ರವಲ್ಲ; ಅದು ಜನಮನ ಒಂದಾಗಿಸುವ ಸಾಂಸ್ಕೃತಿಕ ಸೇತುವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಅಭಿಪ್ರಾಯಪಟ್ಟರು.

ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಜಾನಪದ ಕಲೋತ್ಸವದಲ್ಲಿ ಮಾತನಾಡಿದರು.

ಉಪನ್ಯಾಸಕ ಬಿ.ಪಿ.ಸುರೇಶ್ ಮಾತನಾಡಿ, ‘ಜಾನಪದ ಮನರಂಜನೆ ಜೊತೆಗೆ ವ್ಯಕ್ತಿತ್ವ ವಿಕಾಸಕ್ಕೂ ಸಹಕಾರಿಯಾಗಿದೆ. ಅನೇಕ ಪ್ರತಿಭೆಗಳಿಗೆ ಜಾನಪದ ವೇದಿಕೆ ಹೊಸ ದಾರಿ ತೋರಿಸುತ್ತಿವೆ’ ಎಂದರು.

ಸಮಾಜ ಸೇವಕ ಅಭಿಗೆರೆ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕೊಳ್ಳೇಗಾಲದ ಘಟವಾಡಿ ಚಂದ್ರು, ಮಹೇಶ್, ಲಿಂಗರಾಜು, ಚಕ್ಕೆರೆ ಲೋಕೇಶ್, ಸವಿ ಗಂಗಾಧರ್ ಗೀತಗಾಯನ ನಡೆಸಿಕೊಟ್ಟರು. ಕೂಡ್ಲೂರು ಮಧು ಸಂಯೋಜನೆಯಲ್ಲಿ ವಿವಿಧ ಪ್ರದರ್ಶನ ಕಲಾ ತಂಡಗಳು ಕಂಸಾಳೆ, ಪೂಜೆ, ಕೊರವ, ತಮಟೆ, ಕರಿಯಣ್ಣ ಕೆಂಚಣ್ಣ ಮುಂತಾದ ಜಾನಪದ ರೂಪಕ ಪ್ರದರ್ಶಿಸಿದರು. ಗಾಯಕ ಪ್ರಕಾಶ್ ಬಾಣಂತಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-14-1608336996

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.