ನಂಜನಗೂಡು: ‘ಗುರಿ ಸಾಧನೆಗೆ ಶಿಸ್ತು ಮತ್ತು ಸಮಯಪ್ರಜ್ಞೆ ಅಗತ್ಯ’ ಎಂದು ರಾಮನಗರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಸ್ವಾಮಿ ಹೇಳಿದರು.

ತಾಲ್ಲೂಕಿನ ಸುತ್ತೂರಿನ ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ನಡೆದ ಶಿಕ್ಷಕರ ಶಿಬಿರದಲ್ಲಿ ಅವರು ಮಾತನಾಡಿದರು.

‘ಶಿಸ್ತು ಆಸೆಗಳನ್ನು ನಿಯಂತ್ರಿಸಿ, ದೈಹಿಕ ಮತ್ತು ಮಾನಸಿಕ ನಡವಳಿಕೆಯನ್ನು ಉತ್ತಮಪಡಿಸಿ, ವ್ಯಕ್ತಿಯನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ. ಸಮಯ ಪಾಲನೆಯು ಮನಸ್ಥಿತಿಯಾಗಿದ್ದು, ವ್ಯಕ್ತಿಯ ಕಲಿಕಾ ಮನೋಭಾವ ಮತ್ತು ಜವಾಬ್ದಾರಿ ಹೆಚ್ಚಿಸುತ್ತದೆ. ಇತರರ ಸಮಯಕ್ಕೆ ಗೌರವ ಕೊಡುವುದನ್ನು ನಾವು ಕಲಿಯಬೇಕು’ ಎಂದರು.

‘ದೇಶದ ಅಭಿವೃದ್ಧಿಯು ಪ್ರತಿ ಪ್ರಜೆಯ ಶಿಸ್ತು ಮತ್ತು ಸಮಯಪ್ರಜ್ಞೆಯ ಮೂಲಕ ಸಾಧ್ಯ. ಶಿಕ್ಷಕರು ಸಮಯಪ್ರಜ್ಞೆ, ಶಿಸ್ತು, ತ್ಯಾಗ, ಶ್ರದ್ಧೆ, ಸಹನೆ, ಸಮನ್ವಯ ಮತ್ತು ಪರಿಶ್ರಮವನ್ನು ರೂಢಿಸಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದ ಶಿಕ್ಷಣ ಸಂಯೋಜಕ ಎಂ. ಸತೀಶ್ಕುಮಾರ್, ‘ಮನುಷ್ಯ–ಮನುಷ್ಯನನ್ನು ಪ್ರೀತಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು’ ಎಂದರು.

‘ವಿದ್ಯಾರ್ಥಿಯ ಕಲಿಕಾ ಪ್ರಕ್ರಿಯೆ, ವರ್ತನೆ, ಬುದ್ಧಿಶಕ್ತಿ ಮತ್ತು ವಿಕಾಸವನ್ನು ಅರ್ಥ ಮಾಡಿಕೊಳ್ಳಲು ಮನೋವಿಜ್ಞಾನವು ಸಹಕಾರಿಯಾಗಿವೆ. ಈ ವಿಷಯದ ಬೋಧನೆಯನ್ನು ಒಂದು ಕೆಲಸವನ್ನಾಗಿ ಮಾಡದೆ, ಅದನ್ನೊಂದು ಕಲೆಯನ್ನಾಗಿ ಪರಿವರ್ತಿಸುತ್ತದೆ. ಪ್ರೀತಿ ಮತ್ತು ಸಹಾನುಭೂತಿಯಿಂದ ಮಕ್ಕಳನ್ನು ತಿದ್ದಲು ಮನೋವಿಜ್ಞಾನವು ಪ್ರೇರೇಪಿಸುತ್ತದೆ’ ಎಂದು ಹೇಳಿದರು.

ಶಿಬಿರಾರ್ಥಿಗಳು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು. ‘ಸುತ್ತೂರು ದರ್ಶನ’ದಲ್ಲಿ ಶ್ರೀಮಠದ ಗುರುಪರಂಪರೆಯ ಅನಿಮೇಷನ್ ಸಾಕ್ಷ್ಯಚಿತ್ರ ವೀಕ್ಷಿಸಿದರು.

ನಂತರ ಮೂಲಮಠ, ಸೋಮೇಶ್ವರ ದೇವಸ್ಥಾನ, ಮಹದೇಶ್ವರರು ರಾಗಿ ಬೀಸಿದ ಕಲ್ಲು ಹಾಗೂ ವೀರಭದ್ರೇಶ್ವರ ದೇವಸ್ಥಾನಗಳ ದರ್ಶನ ಪಡೆದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಳೆಗಳ ಮಾಹಿತಿ ಪಡೆದು, ಗೋಶಾಲೆ ವೀಕ್ಷಿಸಿದರು. ಸಂಜೆ ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-38-1926129244

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.