ರಾಮನಗರ: ‘ನಮ್ಮ ತಾತ, ನಮ್ಮ ಅಪ್ಪ ಓದಿದ ಹಾಗೂ ಇದೀಗ ನಮ್ಮ ಮಕ್ಕಳು ಓದುತ್ತಿರುವ ನಮ್ಮೂರ ಸರ್ಕಾರಿ ಶಾಲೆಯನ್ನು ಮುಚ್ಚಲು ಇವರ್ಯಾರು? ಶಾಲೆ ಮುಚ್ಚುವುದು ಸುಲಭ. ಆದರೆ, ಆರಂಭಿಸುವುದು ಕಷ್ಟ. ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ...’

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ನೇತೃತ್ವದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೋಷಕರು ವ್ಯಕ್ತಪಡಿಸಿದ ಆಕ್ರೋಶವಿದು.

ಪಾದರಹಳ್ಳಿ, ಅವ್ವೇರಹಳ್ಳಿ ಹಾಗೂ ಜಾಲಮಂಗಲ ಕೆಪಿಎಸ್ ಶಾಲೆಗೆ ವಿಲೀನಕ್ಕೆ ಗುರುತಿಸಿರುವ ಸುಮಾರು 20 ಗ್ರಾಮಗಳ ಸರ್ಕಾರಿ ಶಾಲೆಗಳ ವ್ಯಾಪ್ತಿಯ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಬೆಳಿಗ್ಗೆ 11ರ ಸುಮಾರಿಗೆ ಡಿಡಿಪಿಐ ಕಚೇರಿ ಎದುರು ಜಮಾಯಿಸಿದ್ದ 200ಕ್ಕೂ ಹೆಚ್ಚು ಮಂದಿ, ಯೋಜನೆ ವಿರುದ್ಧ ಫಲಕಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಕೂಗಿದರು. ಹಳ್ಳಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು.

ಬಾಗಿಲು ಬಂದ್: ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಡಿಡಿಪಿಐ ಎಸ್. ಸ್ವಾಮಿ ಅವರ ಬದಲು ಬೇರೆ ಅಧಿಕಾರಿ ಬಂದರು. ಮನವಿ ನೀಡಲು ಬರುವುದಾಗಿ ಮುಂಚಿತವಾಗಿಯೇ ತಿಳಿಸಿದ್ದರೂ ಕಚೇರಿಯಲ್ಲಿ ಡಿಡಿಪಿಐ ಇಲ್ಲದಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

‘ಸಭೆ ನಿಮಿತ್ತ ಡಿಡಿಪಿಐ ಚನ್ನಪಟ್ಟಣಕ್ಕೆ ಹೋಗಿದ್ದಾರೆ’ ಎಂದು ಅಧಿಕಾರಿ ತಿಳಿಸಿದಾಗ, ಅವರು ಬರುವವರೆಗೆ ಸ್ಥಳದಿಂದ ನಾವ್ಯಾರು ಕದಲುವುದಿಲ್ಲ. ಅವರೇ ಬಂದು ಮನವಿ ಸ್ವೀಕರಿಸಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕಚೇರಿ ಆವರಣದೊಳಗೆ ನೆಲದಲ್ಲೇ ಕುಳಿತು ಪ್ರತಿಭಟಿಸಿದರು.

ವಿಷಯ ತಿಳಿದು ಒಂದೂವರೆ ತಾಸಿನ ಬಳಿಕ ಡಿಡಿಪಿಐ ಕಚೇರಿಗೆ ಬಂದು ಮನವಿ ಸ್ವೀಕರಿಸಿದರು. ಈ ವೇಳೆ, ಗ್ರಾಮಸ್ಥರು ಡಿಡಿಪಿಐ ನಿರ್ಲಕ್ಷ್ಯ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಮಾತನಾಡಿ, ‘ಸರ್ಕಾರ ತನ್ನ ಮೂಲ ಕರ್ತವ್ಯ ಮರೆತು ಜನಸಾಮಾನ್ಯರನ್ನು ಕತ್ತಲೆಗೆ ತಳ್ಳುವ ಹೀನ ಕೆಲಸಕ್ಕೆ ಕೈಹಾಕಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಇಷ್ಟೊಂದು ದಾಖಲಾತಿ ಮಾಡಿಸಿದ್ದೇವೆ ಎಂದು ಅಂಕಿ-ಅಂಶಗಳನ್ನು ಪ್ರದರ್ಶಿಸಿ ಜಾರಿಕೊಳ್ಳಲು ಶಿಕ್ಷಕರು ಮತ್ತು ಪೋಷಕರ ಮೇಲೆ ಒತ್ತಡ ಹೇರುತ್ತಿದೆ’ ಎಂದು ದೂರಿದರು.

ಮತ್ತೋರ್ವ ಉಪಾಧ್ಯಕ್ಷೆ ಅಪೂರ್ವ ಮಾತನಾಡಿ, ‘ಕೆಪಿಎಸ್ ಶಾಲೆಗಳಿಗೆ ಬರುವ ಮಕ್ಕಳ ಮನೆ ಬಾಗಿಲಿಗೆ ವಾಹನ ವ್ಯವಸ್ಥೆ ಮಾಡುತ್ತೇವೆ ಎಂಬುದು ಸೇರಿದಂತೆ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಸೌಕರ್ಯಗಳನ್ನು ಕಲ್ಪಿಸುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ. ಸುಳ್ಳು ಭರವಸೆಗಳಿಗೆ ಪೋಷಕರು ಮರುಳಾಗದೆ ತಮ್ಮೂರಿನ ಶಾಲೆಗಳನ್ನು ಉಳಿಸಿಕೊಳ್ಳಲು ದನಿ ಎತ್ತಬೇಕು’ ಎಂದು ಹೇಳಿದರು.

ಸಂಘಟನೆಯ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್, ಕಾರ್ಯದರ್ಶಿ ಅಜಯ್ ಕಾಮತ್, ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಕಲ್ಯಾಣ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಮಂಜುನಾಥ್, ಎಸ್ಡಿಎಂಸಿ ಸಂಘಟನೆಯ ಶಂಭುಗೌಡ, ಉಮೇಶ್ ಗಂಗವಾಡಿ ಹಾಗೂ ಇತರರು ಇದ್ದರು.

ಯಾವ ಶಾಲೆಗೆ ಎಷ್ಟು ವಿಲೀನ?

ಪಾದರಹಳ್ಳಿ ಕೆಪಿಎಸ್: ಮದರ್ಸಾಬರದೊಡ್ಡಿ, ಚಿಕ್ಕೇಗೌಡನದೊಡ್ಡಿ, ಹರೀಸಂದ್ರ, ತಿಮ್ಮೇಗೌಡನದೊಡ್ಡಿ, ಪಾಲಬೋವಿದೊಡ್ಡಿ, ಹನುಮಂತೇಗೌಡನದೊಡ್ಡಿ, ಕೆಂಪೇಗೌಡನದೊಡ್ಡಿ, ಇರುಳಿಗರದೊಡ್ಡಿ, ಮೆಳ್ಳಹಳ್ಳಿ ಸರ್ಕಾರಿ ಶಾಲೆಗಳು.

ಅವ್ವೇರಹಳ್ಳಿ ಕೆಪಿಎಸ್: ಅಮ್ಮನಪುರದೊಡ್ಡಿ, ದೇವರದೊಡ್ಡಿ, ಕೋಟಹಳ್ಳಿ, ನೆಲಮಲೆ, ಕೆ.ಜಿ. ಹೊಸಹಳ್ಳಿ, ತೆಂಗಿನಕಲ್ಲು ಸರ್ಕಾರಿ ಶಾಲೆಗಳು

ಜಾಲಮಂಗಲ ಕೆಪಿಎಸ್: ಅಕ್ಕೂರು, ಚಿಕ್ಕಗಂಗವಾಡಿ, ದೊಡ್ಡಗಂಗವಾಡಿ ಸರ್ಕಾರಿ ಶಾಲೆಗಳು

ಶಾಲೆ ಮುಚ್ಚಲ್ಲ, ಒತ್ತಡ ಹೇರಲ್ಲ

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಎಸ್. ಸ್ವಾಮಿ, ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕಾರಣಕ್ಕೆ ಗ್ರಾಮಗಳ ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ. ಶಾಲೆಗಳ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಗೆ ಸೇರಿಸುವಂತೆ ಒತ್ತಡ ಹೇರುವುದಿಲ್ಲ ಹಾಗೂ ಶಿಕ್ಷಕರನ್ನು ಸಹ ವರ್ಗಾವಣೆ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು. ಅದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಪೋಷಕರು, ಸ್ಥಳೀಯರು ಹೇಳುವುದೇನು?

ಕೆಂಪೇಗೌಡನದೊಡ್ಡಿ ಶಾಲೆ ನೂರು ವರ್ಷ ಹಳೆಯದು. 80 ಮಕ್ಕಳಿರುವ ಎರಡು ಅಂತಸ್ತಿನ ಶಾಲೆಯನ್ನು ಮುಚ್ಚಿ 6 ಕಿ.ಮೀ. ದೂರದ ಪಾದರಹಳ್ಳಿ ಕೆಪಿಎಸ್ ಶಾಲೆಗೆ ಕಳಿಸಿ ಎನ್ನುವ ಶಿಕ್ಷಣ ಇಲಾಖೆಗೆ ಮಾನ ಮರ್ಯಾದೆ ಇದೆಯಾ? ಮಕ್ಕಳ ಸುರಕ್ಷತೆಯ ಹೊಣೆ ಯಾರದ್ದು? ಗುಣಮಟ್ಟದ ಶಿಕ್ಷಣವನ್ನು ನಮ್ಮೂರ ಶಾಲೆಯಲ್ಲೂ ಕೊಡಿ.

-ರಾಜು, ಕೆಂಪೇಗೌಡನದೊಡ್ಡಿ

ಹಾಸ್ಯಾಸ್ಪದ

ಕಡಿಮೆ ಸೌಲಭ್ಯದ ನೆಪವೊಡ್ಡಿ ಹಳ್ಳಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರ ಹಾಸ್ಯಾಸ್ಪದ. ಕೆಪಿಎಸ್ನಲ್ಲಿ ಅತ್ಯುತ್ತಮ ಸೌಲಭ್ಯಗಳಿದ್ದರೆ ಪೋಷಕರೇ ಮಕ್ಕಳನ್ನು ಸ್ವಯಂಪ್ರೇರಿತರಾಗಿ ಸೇರಿಸುತ್ತಾರೆ. ಅದು ಬಿಟ್ಟು ವಿಲೀನದ ಹೆಸರಲ್ಲಿ ಶಾಲೆ ಮುಚ್ಚುವುದರ ಹಿಂದೆ ಹಳ್ಳಿಯವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರವಿದೆ.

-ಅಂಬಿಕಾ, ಪಾಲಾಬೋವಿದೊಡ್ಡಿ

ಅವಕಾಶ ಕೊಡಲ್ಲ

ನಮ್ಮೂರ ಶಾಲೆ ಮುಚ್ಚಲು ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಒಪ್ಪಿಗೆ ಕೊಟ್ಟಿಲ್ಲ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಊರಲ್ಲೇ ಪ್ರಾಥಮಿಕ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಊರಲ್ಲಿ ಶಾಲೆ ತೆರೆಯಲಾಗಿದೆ. ಈಗ ಅದನ್ನು ಮುಚ್ಚಿದರೆ ಸಣ್ಣ ಮಕ್ಕಳನ್ನು ಹೇಗೆ ದೂರಕ್ಕೆ ಕಳಿಸೋದು.

-ಮಂಜು, ಕೋಟಹಳ್ಳಿ

ಬಸ್ ಸೌಕರ್ಯವಿಲ್ಲ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಹಲವು ಹಳ್ಳಿಗಳಿಗೆ ಬಸ್ ಸೌಕರ್ಯವಿಲ್ಲ. ಹೀಗಿರುವಾಗ ಪ್ರತಿ ಹಳ್ಳಿಗೆ ಬೆಳಿಗ್ಗೆ ಬಸ್ ತಂದು ಮಕ್ಕಳನ್ನು ಕರೆದು
ಕೊಂಡು ಹೋಗಿ, ಸಂಜೆ ವಾಪಸ್ ಬಿಡುತ್ತಾರೆ ಎಂಬ ಮಾತು ಸುಳ್ಳು. ಈಗಾಗಲೇ ಶುರುವಾಗಿರುವ ಕೆಪಿಎಸ್ ಶಾಲೆಗಳ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.

-ನೀಲಾ, ತಿಮ್ಮೇಗೌಡನದೊಡ್ಡಿ

ಶಾಲೆ ಮುಚ್ಚಲು ಬಿಡಲ್ಲ

ದೇಶದ ಬಹುತೇಕ ಸಾಧಕರು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಅಂತಹ ಶಾಲೆಗಳನ್ನು ಮುಚ್ಚಲು ಸರ್ಕಾರಕ್ಕೆ ಮನಸ್ಸಾದರೂ ಹೇಗೆ ಬಂತು. ಸಂವಿಧಾನ ಬರೆದ ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಸರ್ಕಾರಿ ಶಾಲೆಯಲ್ಲಿ ಓದಿದವರು. ಅಂತಹ ಶಾಲೆಗಳನ್ನು ಮುಚ್ಚಿದವರು
ಉದ್ದಾರವಾಗಲ್ಲ.

-ಚಂದ್ರಯ್ಯ, ಕೆ.ಜಿ. ದೊಡ್ಡಿ

ದೂರದ ಶಾಲೆಗೆ ಕಳಿಸಲಾಗದು

ಶಾಲೆ ಮುಚ್ಚಲು ಬಿಟ್ಟು ದೂರದ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸಲು ನಾವ್ಯಾರು ತಯಾರಿಲ್ಲ. ಊರಿಗೊಂದು ದೇವಾಲಯದಂತೆ ಶಾಲೆಯೂ ಇರಬೇಕು. ಸುಳ್ಳು ಹೇಳಿ ಶಾಲೆಗಳನ್ನು ಮುಚ್ಚಿಸುವ ಪ್ರಯತ್ನ ಬಿಡಿ. ಕೆಪಿಎಸ್ನಲ್ಲಿ ಅಷ್ಟೊಂದು ಒಳ್ಳೆಯ ಸೌಲಭ್ಯಗಳಿದ್ದರೆ ಖಾಸಗಿ ಶಾಲೆಗಳಿಗೆ ಬೀಗ ಹಾಕಿ, ಅಲ್ಲಿನ ಮಕ್ಕಳನ್ನು ಸೇರಿಸಿಕೊಳ್ಳಿ.

-ಕೆಂಪಮ್ಮ, ಮದರಸಾಬರದೊಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.