ರಾಮನಗರ: ನಗರದ ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ಕರ್ನಾಟಕ ಸಾಹಸ ಕಲಾ ಅಕಾಡೆಮಿಯ ಖೇಲೊ ಇಂಡಿಯಾ ಮಲ್ಲಕಂಬ ಕೇಂದ್ರದಲ್ಲಿ ಏಪ್ರಿಲ್ 10ರಿಂದ 15 ದಿನ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ 7ರಿಂದ 16 ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಳ್ಳಲಾಗಿರುವ ಬೇಸಿಗೆ ಶಿಬಿರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.

ಯೋಗ, ರಂಗ, ಅಭಿನಯ, ಮಕ್ಕಳ ನಾಟಕ, ಚಿತ್ರಕಲೆ, ಸಾಹಸ ಕ್ರೀಡೆ, ಜಾನಪದ ಪ್ರದರ್ಶನ ಕಲೆ, ಗಾಯನ, ನೃತ್ಯ, ಆತ್ಮರಕ್ಷಣೆ, ಸಮರ ಕಲೆಗಳು, ಮಲ್ಲಕಂಬ, ಜಿಮ್ನಾಸ್ಟಿಕ್ ಹಾಗೂ ಪರಿಸರ ಅಧ್ಯಯನ ಕುರಿತು ಶಿಬಿರದಲ್ಲಿ ತಜ್ಞರಿಂದ ತರಗತಿ ನಡೆಯಲಿವೆ.

ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊಬೈಲ್ ಸಂಖ್ಯೆ 63648 06266 ಸಂಪರ್ಕಿಸುವಂತೆ ಕರ್ನಾಟಕ ಸಾಹಸ ಕಲಾ ಅಕಾಡೆಮಿ ಅಧ್ಯಕ್ಷ ಡಾ. ಹಾಸನ ರಘು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-14-130190052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.