ರಾಮನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ನಿರ್ಮಿಸಿರುವ ಕೆಪಿಎಸ್ ಶಾಲೆಗಳೊಂದಿಗೆ ವಿಲೀನಕ್ಕೆ ಗುರುತಿಸಿದ್ದ ಶಾಲೆಗಳಲ್ಲೂ ಸೋಮವಾರ ಚಿಣ್ಣರ ಕಲರವ ಕೇಳಿ ಬಂತು. ತಮ್ಮ ಶಾಲೆ ಮುಚ್ಚಲಿದೆ ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳು, ಪೋಷಕರ ಜೊತೆ ಶಾಲೆಗೆ ಬಂದರು.

ಶಾಲಾರಂಭದ ಪ್ರಯುಕ್ತ ಈ ಶಾಲೆಗಳನ್ನು ಸಹ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ ಆತ್ಮೀಯವಾಗಿ ಸ್ವಾಗತಿಸಿದರು. ಮಕ್ಕಳು ಸಂಭ್ರಮದಿಂದ ಶಾಲೆ ಬಂದರು. ತಮ್ಮ ಸಹಪಾಠಿಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಕೆಪಿಎಸ್ ಮ್ಯಾಗ್ನೆಟ್ ಹೊಂಗನೂರು, ಪಾದರಹಳ್ಳಿ, ಅವ್ವೇರಹಳ್ಳಿ ಹಾಗೂ ಜಾಲಮಂಗಲದ ಶಾಲೆಗಳಿಗಾಗಿ ಸುತ್ತಲಿನ ಸುಮಾರು 50 ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು.

ಈ ಪಟ್ಟಿಯಲ್ಲಿದ್ದ ಸಂತೆಮೊಗೆನಹಳ್ಳಿ, ಕನ್ನಿದೊಡ್ಡಿ, ಅಮ್ಮಳ್ಳಿದೊಡ್ಡಿ, ಹೊಡಿಕೆ ಹೊಸಹಳ್ಳಿ, ಸುಣಘಟ್ಟ, ತಿಮ್ಮೇಗೌಡನದೊಡ್ಡಿ, ಹರಿಸಂದ್ರ, ಮದರ್ ಸಾಬರದೊಡ್ಡಿ, ಚಿಕ್ಕೇಗೌಡನದೊಡ್ಡಿ, ಪಾಲಬೋವಿದೊಡ್ಡಿ, ಹಳ್ಳಿಮಾಳ, ಕೆಂಪೇಗೌಡನದೊಡ್ಡಿ, ಮಟಕಯ್ಯನದೊಡ್ಡಿ, ಮೆಳ್ಳಹಳ್ಳಿ, ಕೋಟಹಳ್ಳಿ, ನೆಲಮಲೆ, ಅಮ್ಮನಪುರದೊಡ್ಡಿ, ದೇವರದೊಡ್ಡಿ, ಕೆ.ಜಿ. ಹೊಸಹಳ್ಳಿ, ಅಕ್ಕೂರು, ಚಿಕ್ಕಗಂಗನವಾಡಿ, ದೊಡ್ಡಗಂಗನವಾಡಿ ಸೇರಿದಂತೆ ಹಲವಾರು ಶಾಲೆಗಳ ಅಸ್ತಿತ್ವದ ಪ್ರಶ್ನೆ ಎದುರಾಗಿತ್ತು.

‘ಸರ್ಕಾರದ ಆದೇಶದ ವಿರುದ್ಧ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಸತತವಾಗಿ 6 ತಿಂಗಳಿಂದ ಹೋರಾಟ ನಡೆಸಿದ್ದರು. ಅದರ ಫಲವಾಗಿ ಶಾಲೆಗಳು ಯಥಾಸ್ಥಿತಿಯಲ್ಲಿ ಮುಂದುವರಿದಿವೆ’ ಎಂದು ಎಐಡಿಎಸ್ಒ ಮುಖಂಡರು ತಿಳಿಸಿದರು.

ಕೆಲ ಶಾಲೆಗಳಿಗೆ ಸಂಘಟನೆಯ ಮುಖಂಡರಾದ ಸುಭಾಷ್, ಅಪೂರ್ವ, ನವಾಜ್, ತುಳಸಿ, ಕಿರಣ್ ಸೇರಿದಂತೆ ಇತರರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಸಂವಾದ ನಡೆಸಿದರು. ನಂತರ, ಶಾಲೆ ಮತ್ತು ಸರ್ಕಾರ ಶಾಲೆ ಉಳಿವಿಗೆ ಸಂಬಂಧಿಸಿದ ಪೋಸ್ಟರ್ಗಳನ್ನು ಪ್ರದರ್ಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-14-1667320458

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.