ರಾಂಪುರ: ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳಲ್ಲಿ ಪಡೆಯುವ ಅನುಭವವನ್ನು ವಿದ್ಯಾರ್ಥಿಗಳು ಸಮುದಾಯದ ಒಳಿತಿಗಾಗಿ ಬಳಸಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯ ಎಸ್.ಎಂ. ಹೊಟ್ಟಿಗೌಡರ ಹೇಳಿದರು.

ಸಮೀಪದ ಬಿಲ್ ಕೆರೂರ ಗ್ರಾಮದಲ್ಲಿ ಮಂಗಳವಾರ ಜರುಗಿದ ಬೇವೂರಿನ ಪಿ.ಎಸ್.ಸಜ್ಜನ ಕಲಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಸಮನ್ವಯದ ಬದುಕು, ಗ್ರಾಮೀಣ ಸಮಸ್ಯೆಗಳ ಅರಿವು, ಸಮಾಜ ಸೇವೆಯ ಗುಣಗಳನ್ನು ಕಲಿಯುವ ವಿದ್ಯಾರ್ಥಿಗಳು ಇವುಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಹೋಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಎಸ್.ಎಸ್.ಆದಾಪುರ, ಶಿಬಿರಾರ್ಥಿಗಳು ಸೇವಾ ಮನೋಭಾವ ಬೆಳಸಿಕೊಂಡು ಮುನ್ನಡೆಯಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಪರಸ್ಪರ ಹೊಂದಾಣಿಕೆ, ನಾಯಕತ್ವದ ಗುಣ, ಭಾವೈಕ್ಯದ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತಿದ್ದು, ಗ್ರಾಮ ಸಂಸ್ಕೃತಿಯನ್ನು ಪರಿಚಯಿಸಿ ನಿಸ್ವಾರ್ಥ ಸೇವೆಯ ಗುಣ ಬೆಳೆಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಜಗದೀಶ ಭೈರಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅನುಸರಿಸಿ ಸಮಾಜದ ಸೇವೆಗೆ ಎಲ್ಲರೂ ಸಿದ್ಧರಾಗಬೇಕು ಎಂದರು.

ಗ್ರಾಮದ ಹಿರಿಯರಾದ ದಾವಲಸಾಬ ಹಳ್ಳೂರ, ಬಸನಗೌಡ ಪಾಟೀಲ, ಶಿಬಿರದ ನಾಯಕರಾದ ಅಭಿಷೇಕ ಪೂಜಾರಿ, ಭಾಗಿರಥಿ ಭಾರಕೇರ ಇದ್ದರು. ವಿಶ್ರಾಂತ ಪ್ರಾಚಾರ್ಯ ಬಿ.ಬಿ.ಬೇವೂರ ಪ್ರಾರ್ಥಿಸಿದರು. ಶ್ವೇತಾ ಕಾಗಿ ಸ್ವಾಗತಿಸಿದರು. ಪ್ರೊ.ಎ.ಎಂ.ಗೊರಚಿಕ್ಕನವರ ಪರಿಚಯಿಸಿದರು. ಪ್ರೊ.ಎಸ್.ಬಿ.ಹಂಚಿನಾಳ ನಿರೂಪಿಸಿದರು. ಶಿಬಿರದ ಯೋಜನಾಧಿಕಾರಿ ಪ್ರೊ. ಜಿ.ಎಸ್.ಗೌಡರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-19-1344479472

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.