ರಾಣೆಬೆನ್ನೂರು: ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದೊಂದೇ ಮುಖ್ಯವಲ್ಲ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ದುಡ್ಡು ಸಂಪಾದಿಸುವವರನ್ನು ಶ್ರೀಮಂತರೆನ್ನಲು ಸಾಧ್ಯವಿಲ್ಲ. ವಿದ್ಯಾ ಸಂಪಾದನೆಯೇ ಬಹುದೊಡ್ಡ ಶ್ರೀಮಂತಿಕೆಯಾಗಿದೆ. ದುಡ್ಡೆ ದೊಡ್ಡಪ್ಪ, ವಿದ್ಯೆ ಅವರಪ್ಪ, ಜ್ಞಾನವುಳ್ಳವರಿಗೆ ಯಾವತ್ತೂ ಬಡತನ ಬರುವುದೇ ಇಲ್ಲ ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.

ಇಲ್ಲಿನ ಹುಣಸಿಕಟ್ಟಿ ರಸ್ತೆಯ ಜೇಸಿವಾಣಿ ಅರಮನೆ ಸಭಾಂಗಣದಲ್ಲಿ ಭಾನುವಾರ ಕಾಕಿ ಜನಸೇವಾ ಸಂಸ್ಥೆ ಹಾಗೂ ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದಿಂದ ನೇಕಾರ ಕುರುಹಿನಶೆಟ್ಟಿ ಸಮಾಜದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ದೇಹದಾನ ಅರಿವು ಕಾರ್ಯಕ್ರಮ ಹಾಗೂ ಕಾಕಿ ಶ್ರೀನಿವಾಸ ಲೇಔಟ್ ಸದಸ್ಯರಿಗೆ ನಿವೇಶನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಪ್ರಮಾಣಿಕತೆ, ಸಮಯ ಪಾಲನೆ, ವಿಶ್ವಾರ್ಹತೆ, ಸತತ ಪರಿಶ್ರಮವನ್ನು ಅಳವಡಿಸಿಕೊಂಡರೆ ಯಶಸ್ಸು, ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.

ಕಾಕಿ ಜನಸೇವಾ ಸಂಸ್ಥೆ ಹಾಗೂ ಕುರುಹಿನಶೆಟ್ಟಿ ಸಮಾಜದಿಂದ 2ನೇ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪುರಸ್ಕಾರ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಸಹ ಶಿಸ್ತು, ಸಂಯಮ ಹಾಗೂ ಶ್ರದ್ಧೆ ಇಟ್ಟುಕೊಂಡು ಮುನ್ನಡೆಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಶಿವಾನಂದ ಬಗಾದಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು. ಅಂತಹ ಕಾರ್ಯವನ್ನು ಕಾಕಿ ಜನಸೇವಾ ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ ಅದೇ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಬೇಕು ಎಂದರು.

ಕಾಕಿ ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ಹನುಮಂತಪ್ಪ ಅಮಾಸಿ, ಶಿವಾನಂದ ಸಾಲಗೇರಿ, ಮಂಜುನಾಥ ಹೊಸಪೇಟೆ, ಹನುಮಂತಪ್ಪ ಕಾಕಿ, ಲಕ್ಷಣ ಕನಕಿ, ಶ್ರೀಧರ ಅಮಾಸಿ, ವೆಂಕಟೇಶ ಕಾಕಿ, ಸಿದ್ದಪ್ಪ ಬೂದನೂರ, ಬೋಜಪ್ಪ ಕನಕೇರಿ, ನಿತ್ಯಾನಂದ ಕುಂದಪುರ, ನಾಗರಾಜ ಅಡ್ಮನಿ, ಪ್ರಕಾಶ ಗಚ್ಚಿನಮಠ, ಶಿವಕುಮಾರ ಜಾಧವ, ಮಲ್ಲಿಕಾರ್ಜುನ ಸಾವಕ್ಕಳವರ, ಗಣೇಶ ಕನಕಿ, ಶ್ರೀನಿವಾಸ ಸುರಹೊನ್ನೆ, ಕೊಟ್ರೇಶಪ್ಪ ಎಮ್ಮಿ, ಮಾಲತೇಶ ಗಡಾದ, ನಾಗರಾಜ ಕಾಕಿ, ಬಸವರಾಜ ಶ್ಯಾವಿ, ರಾಜು ಬೂದನೂರ, ಪ್ರವೀಣ ಸುರಹೊನ್ನೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-22-419428888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.