ರಾಣೆಬೆನ್ನೂರು: ‘ಗೂಗಲ್ ಅಜ್ಜಿ’ ಪುಸ್ತಕವನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ ಮಾಡಿರುವುದು ಸ್ತುತ್ಯಾರ್ಹ. ಪುಸ್ತಕದ ಕೇಂದ್ರ ಬಿಂದು ಅಜ್ಜಿಯ ಅನುಭವಗಳು ಇಲ್ಲಿ ಕೇಂದ್ರೀಕೃತವಾಗಿರುವುದು ಹಾಗೂ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದು ಹೆಮ್ಮೆಯ ವಿಷಯ’ ಎಂದು ಸಾಹಿತಿ ಪುಟ್ಟು ಕುಲಕರ್ಣಿ ಹೇಳಿದರು.

ಇಲ್ಲಿನ ಗೌರಿಶಂಕರ ನಗರದಲ್ಲಿ ಚೈತನ್ಯ ಸೇವಾ ಸಮಿತಿಯ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಗೂಗಲ್ ಅಜ್ಜಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ದಿನಗಳಲ್ಲಿ ಮೊಮ್ಮಕ್ಕಳೇ ಅಜ್ಜಿಯರಿಗೆ ಮೊಬೈಲ್ ಮೂಲಕ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಾಠ ಹೇಳುವಂತಹ ಪರಿಸ್ಥಿತಿ ಎದುರಾಗಿರುವುದು ವಿಷಾದಕರ ಸಂಗತಿ’ ಎಂದರು.

‘ಇದೀಗ ಎಲ್ಲವೂ ಗೂಗಲ್ ಮಯವಾಗಿ ಎಲ್ಲರ ಮನದೊಳಗೆ ಹಾಸುಹೊಕ್ಕಾಗಿ ಸಂಸ್ಕೃತಿ, ಸಂಸ್ಕಾರಕ್ಕೆ ಧಕ್ಕೆ ಉಂಟಾಗುತ್ತಿದೆ. ಯಂತ್ರವೇ ಇಂದು ಜೀವನದ ಅವಿಭಾಜ್ಯದ ತಂತ್ರವಾಗಿದೆ. ಗೂಗಲ್ ಅನ್ವೇಷಣೆಯಿಂದಾಗಿ ಭಾಷೆಯ ಗೊಂದಲ ಉಂಟಾಗುತ್ತಿದೆ. ಪುಸ್ತಕ ಓದುವವರು ಕಡಿಮೆಯಾಗಿದ್ದಾರೋ ಅಥವಾ ಓದುವಂತಹ ಪುಸ್ತಕ ಇಂದು ಬರುತ್ತಿಲ್ಲವೋ ಎಂಬ ಜಿಜ್ಞಾಸೆಯಲ್ಲಿ ಜನರು ಮುಳುಗಿದ್ದಾರೆ’ ಎಂದರು.

ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಭಾರತೀಯ ಸಂಸ್ಕೃತಿಯು ಇಂದು ವಿಶ್ವಕ್ಕೆ ದಾರಿದೀಪವಾಗಿದೆ. ವಿದೇಶಗಳಲ್ಲೂ ಭಾರತೀಯ ಸಂಸ್ಕೃತಿಯ ಆಚರಣೆಯ ಪದ್ಧತಿ ಇದೆ ಎಂದು ತಿಳಿದು ನಾವೆಲ್ಲ ಹೆಮ್ಮೆ ಪಡಬೇಕಾಗಿದೆ. ನಮ್ಮ ಸಂಸ್ಖರತಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ರಕ್ಷಿಸಬೇಕಾಗಿದೆ’ ಎಂದರು.

ಸಮಿತಿಯ ಅಧ್ಯಕ್ಷ ಗುರುರಾಜ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಏರ್ಕಮಾಂಡರ್ ಅರುಣಕುಮಾರ ಬೇವಿನಮರದ ಪುಸ್ತಕ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಕೃತಿಯ ಕನ್ನಡ ಅನುವಾದಕ ಶಿಗ್ಗಾವಿಯ ಬಸವಂತಪ್ಪ ಎಲಿಗಾರ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಲೇಖಕರಾದ ತರುಣಕುಮಾರ್ ಜೂಜಾರೆ, ನಿವೇದಿತಾ ಜೂಜಾರೆ ಮತ್ತು ಶಶಿಕಲಾ ಎಲಿಗಾರ, ಧೀರೇಂದ್ರ ಏಕಬೋಟೆ, ರಾಜೇಶ್ವರಿ ಏಕಬೋಟೆ, ವೆಂಕಟೇಶ ಕುಲಕರ್ಣಿ, ನರೇಂದ್ರ ಏಕಬೋಟೆ ಮತ್ತು ಚೈತನ್ಯ ಸೇವಾ ಸಮಿತಿಯ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-23-641780049

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.