ರಾಣೆಬೆನ್ನೂರು: ‘ವಿದ್ಯಾರ್ಥಿ ಜೀವನದಲ್ಲಿ ಬದುಕಿಗೆ ಅಗತ್ಯವಾಗಿ ಬೇಕಾಗಿರುವ ಕೆಲವು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಬುದ್ದನ ಸಹನೆಯ ಜ್ಯೋತಿ, ಪೈಗಂಬರನ ಸಹೋದರತ್ವ ಜ್ಯೋತಿ, ಕ್ರಿಸ್ತನ ಶಾಂತಿಯ ಜ್ಯೋತಿ, ಮಹಾವೀರನ ತ್ಯಾಗದ ಜ್ಯೋತಿ, ಬಸವನ ಭಕ್ತಿಯ ಜ್ಯೋತಿಯಂತೆ ನಮ್ಮ ಬಾಳು ಬೆಳಗಬೇಕು‘ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಬಿ.ನಂದ್ಯಾಲ ಹೇಳಿದರು.

ತಾಲ್ಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ನಡೆದ ಕ್ಯಾಂಪಸ್ ಡೇ ಹಾಗೂ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ತಲ್ಲೀನತೆ ತನ್ಮಯತೇ ನಿಮ್ಮ ಬದುಕಿನ ಮೌಲ್ಯಗಳಾಗಬೇಕು. ಅವುಗಳಿಂದ ಈ ಜಗತ್ತಿನ ಮಹಾನ್ ವ್ಯಕ್ತಿಗಳು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಅಂತವರ ಸಾಲಿಗೆ ನೀವು ಸೇರಬೇಕು. ಈ ಜಗತ್ತಿನಲ್ಲಿ ಯಾವುದು ಬೇಕಾದರೂ ನಾಶವಾಗಬಹುದು. ಆದರೆ ಕೃಷಿ ನಾಶವಾಗದ ಆಸ್ತಿ. ನೀವು ಅದರ ಪ್ರೇರಕರಾಗಿ, ಪಾಲಕರಾಗಿ ಆ ಮೂಲಕ ಅದ್ವಿತೀಯ ಸಂಶೋಧನೆ ಮಾಡಿ ಅದರ ವ್ಯಾಪಕತೆ ವಿಸ್ತರಿಸಿದಾಗ ನೀವು ಕಲಿತ ವಿದ್ಯೆಗೆ ಸಾರ್ಥಕತೆ ದೊರೆಯುತ್ತದೆ‘ ಎಂದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ ಅವರು ಮಾತನಾಡಿ, ಶ್ರದ್ಧೆ, ತಾಳ್ಮೆ, ಶಿಸ್ತು, ಕಾಯಕ ಪ್ರಜ್ಞೆ, ಸಹನೆ, ತನ್ಮಯತೆ ಇಂತಹ ಗುಣಗಳನ್ನು ಮೈಗೂಡಿಸಿಕೊಂಡು ಅಧ್ಯಯನಶೀಲರಾಗಿ ಜ್ಞಾನದ ಹರವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಕ್ರೀಡೆಯಲ್ಲಿ ಸಾಧನೆ ಮಾಡಿದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂಭ್ರಮದ ತರಂಗೋತ್ಸವ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು. ಆವರಣದ ಮುಖ್ಯಸ್ಥ ಕೆ.ವಿ.ಬಸವಕುಮಾರ, ಪ್ರಭು ಎಸ್.ಟಿ, ಉದಯಕಿರಣ, ಲಕ್ಷ್ಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-22-1943966972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.