ರಾಣೆಬೆನ್ನೂರು: ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆದರೆ ಸಾಲದು. ಕೌಶಲಗಳನ್ನು ಅಳವಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದಾಗ ಸರ್ಕಾರಿ ಹುದ್ದೆ ಪಡೆಯಲು ಸಾಧ್ಯ ಎಂದು ಮೈಸೂರು ನಿವೃತ್ತ ಜೆಡಿಪಿಐ ಹಾಗೂ ವಿಶ್ವವಿಕಾಸ ಟ್ರಸ್ಟ್ ಅಧ್ಯಕ್ಷ ಮಂಟಲಿಂಗಾಚಾರ್ಯ ಹೇಳಿದರು.

ಇಲ್ಲಿನ ಉಮಾಶಂಕರ ನಗರದ ವಿಶ್ವವಿಭು ರೇಕಿ ಧ್ಯಾನಪೀಠದಲ್ಲಿ ವಿಶ್ವಕರ್ಮ ಬ್ರಾಹ್ಮಣ ಸಮಾಜದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗುರೂಜೀ ಮೌನೇಶ್ವರ ಆಚಾರ್ಯರ ಹಿಂದೂಸ್ಥಾನಿ ರಾಷ್ಟ್ರೀಯ ತಬಲಾವಾದನ ದರ್ಶನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ನಮ್ಮ ಆಚಾರ ವಿಚಾರಗಳನ್ನು ನಿತ್ಯ ಜೀವನದಲ್ಲಿ ಆಚರಿಸಿಕೊಂಡಾಗ ಪರಸ್ಪರ ಪ್ರೀತಿ-ಗೌರವ ಭಾವನೆಗಳನ್ನು ಇಟ್ಟುಕೊಂಡಾಗ ಸಮಾಜದ ಸಾಮೂಹಿಕ ಪ್ರಗತಿಯಾಗಿ ಸಮಷ್ಟಿ ಸೃಷ್ಟಿಯಾಗುತ್ತದೆ. ಬ್ರಾಹ್ಮಣ್ಯ ಮತ್ತು ಶಿಲ್ಪ ಇವೆರಡನ್ನು ಹೊಂದಿದ ಪ್ರತಿಭಾವಂತರ ಪರಂಪರೆಯಾಗಿದೆ. ಪಂಚ ಶಿಲ್ಪಗಳ ಮೂಲಕ ಪ್ರಪಂಚಕ್ಕೆ ಅದ್ಭುತವಾದ ಕೊಡುಗೆಯನ್ನು ಕೊಟ್ಟ ಬುದ್ದಿವಂತ ಸಮಾಜ ನಮ್ಮದಾಗಿದೆ' ಎಂದರು.

ಗದಗಿನ ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣಾಚಾರ್ಯ ಅರ್ಕಸಾಲಿ ಮಾತನಾಡಿ, ಮೌನೇಶ್ವರ ಆಚಾರ್ಯ ಅವರ ಹಿಂದೂಸ್ತಾನಿ ಶಾಸ್ತ್ರೀಯ ತಬಲಾ ವಾದನ ದರ್ಶನ ಎಂಬ ಗ್ರಂಥವು ವಿದ್ವತ್ ಪೂರ್ಣವಾಗಿದೆ. ತಬಲಾ ಕಲಿಯುವ ಮತ್ತು ಕಲಿಸುವ ಗುರುಗಳಿಗೆ ಮಾರ್ಗದರ್ಶನ ಮಾಡುವಂತಹ ಒಂದು ಅಮೂಲ್ಯವಾದ ಗ್ರಂಥವಾಗಿದೆ ಎಂದರು.

ಮೌನೇಶ್ವರ ಗುರೂಜೀ ಸಾನ್ನಿಧ್ಯ ವಹಿಸಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವಿಜಯಕುಮಾರ ಪತ್ತಾರ ವಿಜ್ಞಾನ (ಶೇ 93.5 ), ಸ್ಪೂರ್ತಿ ಬಡಿಗೇರ ವಾಣಿಜ್ಯ (ಶೇ 95.8 ), ತೇಜಶ್ವಿನಿ ಬಡಿಗೇರ ಕಲಾ (ಶೇ 93.1 ), ಭರತ ಬಡಿಗೇರ ವಿಜ್ಞಾನ (ಶೇ 85.1), ಸೃಷ್ಠಿ ಮಾಯಾಚಾರಿ ವಿಜ್ಞಾನ (ಶೇ 86.8 ), ವೇದಶ್ರೀ ಕಮ್ಮಾರ ವಿಜ್ಞಾನ (ಶೇ 96.8 ) ಇವರನ್ನು ಸನ್ಮಾನಿಸಿದರು.

ಬಸವರಾಜ ಬೆಂತೂರು, ಭೀಮಸೇನ ಬಡಿಗೇರ, ಚಾಮರಾಜ ಕಮ್ಮಾರ, ನಾಗರಾಜಚಾರ್ಯ ಅರ್ಕಾಚಾರ, ಉಮೇಶ ದೈವಜ್ಞ, ಮಲ್ಲಿಕಾರ್ಜುನ ಆಚಾರ್ಯ, ಸುನೀತ, ನಾರಾಯಣಚಾರ್ಯ ಅರ್ಕಸಾಲಿ, ಶಿವಾನಂದ ಬಡಿಗೇರ, ಮಹೇಶ ಬಡಿಗೇರ, ಮಂಜಪ್ಪ ಬಡಿಗೇರ, ರಾಘವೇಂದ್ರ ಬಡಿಗೇರ, ಬಸವರಾಜ ಬಡಿಗೇರ, ಕೃಷ್ಣ ಬಡಿಗೇರ, ಸುರೇಶ ಬಡಿಗೇರ, ತಾರಾದೇವಿ ಬಡಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-22-467715466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.