ರಾಣೆಬೆನ್ನೂರು: ‘ಜಾಗತೀಕರಣದ ಪ್ರಭಾವದಿಂದ ಜಾನಪದ ಕಲೆ ಹಾಗೂ ಸಂಸ್ಕೃತಿಯ ಬಹುತ್ವಗಳು ನಾಶವಾಗುತ್ತಿವೆ. ವಿದ್ಯಾರ್ಥಿಗಳಿಗೆ ಜನಪದ ಕ್ರೀಡೆ, ಜನಪದ ಕಲೆ, ಜನಪದ ಆಚರಣೆಗಳನ್ನು ಪರಿಚಯಿಸುವ ಅಗತ್ಯವಿದೆ’ ಎಂದು ಪ್ರಾಚಾರ್ಯ ಪ್ರೊ.ಎಸ್.ಪಿ. ಗೌಡರ ಹೇಳಿದರು.

ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಜನಪದ ಕಲೆ, ಸಾಹಿತ್ಯ ಮರೆಯಾಗುತ್ತಿದ್ದು, ಜಾನಪದ ಜಾತ್ರೆ ಮೂಲಕ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಜನಪದ ಕಲಾವಿದ ಮಂಜುನಾಥ ಸುಂಕಾಪುರ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ. ರವಿ.ಎಂ ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಎತ್ತಿನ ಬಂಡಿ, ಹಬ್ಬದ ಹೋರಿ ಹಾಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳು ತಯಾರಿಸಿದ ‘ಅರಳು ಬಿಡುಗಡೆ’ ಪತ್ರಿಕೆಯ 2ನೇ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹದೇವಪ್ಪ ನಾರಜ್ಜಿ, ಚನ್ನಬಸಪ್ಪ ನಾಡಿಗೇರ, ಹನುಮಂತಪ್ಪ ಕಾರಗಿ, ಪ್ರೊ.ಬಸವರಾಜ ಹುಗ್ಗಿ, ಶೋಭಾ ನಂದಿಹಳ್ಳಿ, ಪ್ರಾಧ್ಯಾಪಕರಾದ ರೇವಣಸಿದ್ದಪ್ಪ ಕೆ.ಬಿ., ಮಂಜುನಾಥ ಬಿ.ಕೆ., ಅಂಬಿಕಾ ಹೊಸಮನಿ, ನಾಗರಾಜ ಗೋಡಿಹಾಳ, ರವಿಕುಮಾರ ಎಸ್.ಯು, ವಿರೇಶ ಷಡಕ್ಷರಿಮಠ, ಗಂಗವ್ವ ದಾನಪ್ಪನವರ, ಮೇಘನಾ ಮಾಂಗ್, ಮೀನಾಕ್ಷಿ ಪೂಜಾರ, ಕುಮಾರ ಕರಿಯಜ್ಜಿ ಚಂದ್ರಾನಾಯಕ, ಶಂಕ್ರಪ್ಪ ಹರಿಜನ, ಸತೀಶ ನಾಯಕ, ಶಿವಶಂಕರ ಅಂಗಡಿ, ಶಿವಾನಂದ ಕೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-22-2125456284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.