ರಾಣೆಬೆನ್ನೂರು: ‘ಮಕ್ಕಳಿಗೆ ಸಂಸ್ಕಾರ, ಸನ್ನಡತೆ, ಶಿಕ್ಷಣ ಮುಖ್ಯ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ಮಾತ್ರವಲ್ಲದೇ, ನಮ್ಮ ಸನಾತನ ಧರ್ಮ, ಸಂಸ್ಕೃತಿ ಮತ್ತು ದಿನನಿತ್ಯದ ಆಚರಣೆಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕ’ ಎಂದು ನೇತ್ರ ತಜ್ಞ ವೈದ್ಯ ಡಾ. ಚಂದ್ರಶೇಖರ ಕೇಲಗಾರ ಹೇಳಿದರು.

ಇಲ್ಲಿನ ರಾಜರಾಜೇಶ್ವರಿನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಾತಾ ಸತ್ಸಂಗ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಅವರಿಗೆ ನಮ್ಮ ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ಧತಿಗಳ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ನಮ್ಮ ಮುಂದಿನ ಪೀಳಿಗೆಯವರಿಗೂ ಕಲಿಸುವ ಮತ್ತು ಉಳಿಸುವ ಜವಾಬ್ದಾರಿ ನಮ್ಮದೇ ಆಗಿದೆ’ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಸಾನ್ನಿಧ್ಯ ವಹಿಸಿದ್ದರು. ‘ಇಂದು ಮಕ್ಕಳು ದೈಹಿಕವಾಗಿ ಪರಿಶ್ರಮ ಪಡುತ್ತಿಲ್ಲ. ಸದಾಕಾಲ ಟಿವಿಯಲ್ಲಿ ಕಾರ್ಟೂನ್ ಇಲ್ಲವೇ ಮೊಬೈಲ್ ಗೇಮ್ಸ್, ರೀಲ್ಸ್ ನೋಡುವುದರಿಂದ ಕಣ್ಣುಗಳಿಗೆ ಹಾನಿ ಮತ್ತು ಮನಸ್ಸಿಗೆ ಹಾನಿ ಉಂಟಾಗುತ್ತಿದೆ. ಮಕ್ಕಳಿಗೆ ಸಂಸ್ಕಾರದ ಬಗ್ಗೆ ಶಾಲೆ ಮತ್ತು ಬಾಹ್ಯ ಪ್ರಪಂಚದಲ್ಲೂ ಶಿಕ್ಷಣ ಸಿಗುತ್ತಿಲ್ಲ. ಗುರುಕುಲದ ಶೈಕ್ಷಣಿಕ ಪದ್ಧತಿಯ ಅನಂತ ಪ್ರಯೋಜನಗಳು, ಸಾಮಾನ್ಯರಿಗೂ ಅರಿವಿಗೆ ಬರಬೇಕೆಂಬ ವಿಶಿಷ್ಟ ಉದ್ದೇಶದೊಂದಿಗೆ ಶಿಬಿರವನ್ನು ಆಯೋಜಿಸಲಾಗಿದೆ’ ಎಂದರು.

ಪ್ರತಿದಿನ ಬೆಳಿಗ್ಗೆ ಮಕ್ಕಳಿಗೆ ಯೋಗಾಭ್ಯಾಸ, ಭಗವದ್ಗೀತೆ, ಭಾರತೀಯ ಸಂಸ್ಕೃತಿಯ ಪರಿಚಯ, ಪ್ರಾರ್ಥನೆ, ಸಂಗೀತ ಅಭ್ಯಾಸದ ಜೊತೆ ಸದಾಚಾರ ಮತ್ತು ನೈತಿಕ ಶಿಕ್ಷಣದ ಮೌಲ್ಯಗಳನ್ನು ತಿಳಿಸಿಕೊಡಲಾಗುತ್ತದೆ. ಈ ಶಿಬಿರದಲ್ಲಿ ಪಡೆದ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಯಾಗಬೇಕು ಎಂದರು.

ನಿವೃತ್ತ ಪಿಎಸ್ಐ ಹಾಗೂ ಯೋಗ ಶಿಕ್ಷಕ ಕೆ.ಸಿ. ಕೋಮಲಾಚಾರ್, ಶಿಬಿರ ಸಂಚಾಲಕ ಗುರುದತ್ತ ನಾಡಗೇರ, ಎಸ್.ಜಿ. ಮುಂಡರಗಿ ಹಾಗೂ ಶಿಬಿರಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-22-127268193

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.