ರಟ್ಟೀಹಳ್ಳಿ: ‘ಮನೆಗಳಿಗೆ, ಹುಲ್ಲಿನ ಬಣವೆಗಳಿಗೆ, ಮರದ ರಾಶಿಗಳಿಗೆ ವಿದ್ಯುತ್ ಸಾಮಗ್ರಿಗಳಿಗೆ, ಸಿಲಿಂಡರ್ಗಳಿಗೆ ಬೆಂಕಿ ತಗುಲಿದಾಗ ನೀರು, ಮರಳು, ದಪ್ಪನೆ ಹೊದಿಕೆ ಬಳಸಿ ಬೆಂಕಿ ನಂದಿಸಬಹುದು’ ಎಂದು ಅಗ್ನಿಶಾಮಕ ದಳದ ಅಧಿಕಾರಿ ವಿನಯ ಎಂ.ಕೆ. ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆಯಲ್ಲಿ ಮಾತನಾಡಿ, ‘ಬೆಂಕಿ ದೊಡ್ಡದಿರಲಿ, ಚಿಕ್ಕದಿರಲಿ ಮೊದಲು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಬೇಕು. ಜೀವ ರಕ್ಷಣಗೆ ಅಗ್ನಿ ಸುರಕ್ಷತಾ ವಿಧಾನಗಳನ್ನು ವಿದ್ಯಾರ್ಥಿಗಳು ಅರಿತುಕೊಂಡಿರಬೇಕು’ ಎಂದರು.

ಉಪನ್ಯಾಸಕ ಎಂ.ಆರ್. ಅಂಚಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿದ್ಯಾರ್ಥಿಗಳು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಹಾಗೂ ನಾಯಕತ್ವ ಗುಣಕ್ಕೆ ಇಂತಹ ಅರಿವು ಕಾರ್ಯಕ್ರಮ ಸಹಕಾರಿ’ ಎಂದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಾಚಾರ್ಯ ರಾಘವೇಂದ್ರ ಎ.ಜಿ. ವಹಿಸಿ ಮಾತನಾಡಿದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಂಜೀವ ಬೋಗಲ, ನವೀನ ಎಸ್. ಹನುಮಂತ ಕೆ. ಸಂತೋಷ ಸತ್ತಗಿಹಳ್ಳಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸದ ನಂತರ ಬೆಂಕಿ ನಂದಿಸುವ ಪ್ರಾತ್ಯಕ್ಷತೆಯನ್ನು ತೋರಿಸಿದರು.

ಉಪನ್ಯಾಸಕರಾದ ಸಿ.ಎಸ್. ಕಮ್ಮಾರ, ಎಂ.ಬಿ. ತಲ್ಲೂರ, ಎಚ್.ಬಿ. ಕೆಂಚಳ್ಳಿ, ಬಿ.ಸಿ. ತಿಮ್ಮೇನಹಳ್ಳಿ, ವಿ.ಎಸ್. ರೂಳಿ, ಸಿ.ಆರ್. ಹಿತ್ತಲಮನಿ, ವೈ.ವೈ. ಮರಳಿಹಳ್ಳಿ, ಎಂ.ಎಂ. ಪ್ಯಾಟ, ಯಲ್ಲಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-22-205219684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.