ರಟ್ಟೀಹಳ್ಳಿ: ವಿದ್ಯೆ ಮನುಷ್ಯನಿಗೆ ಅವಶ್ಯ. ಮನುಷ್ಯ ಜಾತಿ ಯಾವುದೇ ಇರಲಿ ವಿದ್ಯೆಗೆ ರಾಜನೂ ಗೌರವ ನೀಡುತ್ತಾನೆ ಎಂದು ಅಗಡಿ ಆನಂದವನ ಕ್ಷೇತ್ರದ ಗುರುದತ್ತಸ್ವಾಮಿ ಚಕ್ರವರ್ತಿ ಸ್ವಾಮೀಜಿ ಅಭಿಪ್ರಾಯಪಟ್ಟರು

ರಟ್ಟೀಹಳ್ಳಿ ಪಟ್ಟಣದ ನಾಡಿಗೇರ ಏಜುಕೇಶನ್ ಟ್ರಸ್ಟ್ ವತಿಯಿಂದ ಭಾನುವಾರ ಜ್ಞಾನಮುದ್ರಾ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿದ್ಯೆ ಪಡೆಯುವುದು ಮನುಷ್ಯನ ಹಕ್ಕಲ್ಲ. ಅದು ಕರ್ತವ್ಯ. ಬಡತನದಿಂದಾರೂ ಜೀವನ ನಡೆಸಬಹುದು. ವಿದ್ಯೆ ಇಲ್ಲವೆಂದರೆ ಜೀವನ ನಡೆಸುದು ಕಷ್ಟ. ವಿದ್ಯೆಯೊಂದಿಗೆ ಸಂಸ್ಕಾರ ದೊರೆತರೆ ಮಾತ್ರ ಅಂತಹ ಶಿಕ್ಷಣಕ್ಕೆ ಮಹತ್ವ ಎಂದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ ವಿದ್ಯೆ ಮಹತ್ವ ಅರಿತು ಸರ್ಕಾರದೊಂದಿಗೆ ವಿವಿಧ ಮಠಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯೆಯೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಜ್ಞಾನಮುದ್ರಾ ಪೂರ್ವಪ್ರಾಥಮಿಕ ಶಾಲೆಯು ಸಂಸ್ಕಾರಯುತ ಶಿಕ್ಷಣ ನೀಡಿ ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವಂತಾಗಲಿ ಎಂದರು.

ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಜ್ಞಾನ ಪವಿತ್ರವಾದುದು. ಪ್ರತಿ ಮನುಷ್ಯನ ಜೀವನ ಸಾರ್ಥಕತೆ ಅವನ ಜ್ಞಾನದಿಂದ ಮಾತ್ರ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಪ್ರಕಾಶ ನಾಢಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ನಾಡಿಗೇರ ಏಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಶೀಲ ನಾಡಿಗೇರ, ಕಾರ್ಯದರ್ಶಿ ಸುರಭಿ ನಾಡಗೇರ, ಸದಸ್ಯರಾದ ಶಕುಂತಲಾ ನಾಡಿಗೇರ, ಸ್ಮೀತಾ ನಾಡಿಗೇರ, ಬಸವರಾಜ ಸಾಲಿ, ಸುನೀಲ ನಾಡಿಗೇರ, ಲಕ್ಷ್ಮೀಕಾಂತ ಪಾಟೀಲ, ಸಲಹಾ ಸಮಿತಿ ಸದಸ್ಯರಾದ ರವೀಂದ್ರ ನಾಡಿಗೇರ, ಗುರುರಾಜ ನಾಡಿಗೇರ, ವನಿತಾ ಪಾಟೀಲ, ವೀಣಾ ನಾಡಿಗೇರ, ನವೀನ ನಾಡಿಗೇರ, ಸಂದೇಶ ನಾಡಿಗೇರ ಸೇರಿದಂತೆ ಶಾಲಾ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶಾಲೆಯಲ್ಲಿ ಸರಸ್ವತಿ ಪೂಜೆ, ನಂತರ ರಾಯರ ಮಠದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಜರುಗಿತು. ಆಗಮಿಸಿದ ಎಲ್ಲ ಜನತೆಗೆ, ಮಕ್ಕಳಿಗೆ ಮತ್ತು ಪೋಷಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-22-630527575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.