ಬೆಂಗಳೂರು: ಮೈಸೂರು ಕ್ಯಾಂಪಸ್ನಲ್ಲಿ ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವೀಸಸ್ ಆಯೋಜಿಸಿದ್ದ ‘ಟೆಕ್ಜಿಯಂ’ 9ನೇ ಆವೃತ್ತಿಯ ಸ್ಪರ್ಧೆಯಲ್ಲಿ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಆರ್ಐಟಿ) ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ಜ್ಯೋತಿಲಕ್ಷ್ಮೀ ಆರ್. ಮಾರ್ಗದರ್ಶನದಲ್ಲಿ ಆರ್ಐಟಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಕೆ.ಆರ್.ನಂದೀಶ್, ಉಮಂಗ್ ಕುಮಾರ್ ಪ್ರಸಾದ್ ಹಾಗೂ ಪೀಯೂಷ್ ಸಿಂಗ್ ಅವರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಶೈಕ್ಷಣಿಕ ಮತ್ತು ಉದ್ಯಮದ ಮಧ್ಯೆ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಏರ್ಪಡಿಸಿದ್ದ ಮುಕ್ತ ನಾವೀನ್ಯ ಸ್ಪರ್ಧೆ ಇದಾಗಿತ್ತು.

ಈ ಸ್ಪರ್ಧೆಯಲ್ಲಿ ದೇಶದ 540 ಕಾಲೇಜುಗಳಿಂದ 62,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಐಐಐಟಿ ಜಬಲ್ಪುರ, ಪಿಎಸ್ಜಿ ಟೆಕ್ ಕೊಯಮತ್ತೂರು ಹಾಗೂ ವಿಐಟಿಯಂತಹ ಸಂಸ್ಥೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

‘ನೆಕ್ಸ್ಟ್ ಜೆನ್ ಸೆಲ್ಸ್ ಚಾರ್ಜಿಂಗ್ ಹೈಬ್ರಿಡ್ ಸ್ಕೂಟರ್’ ಶೀರ್ಷಿಕೆಯಲ್ಲಿ ಪ್ರಾಜೆಕ್ಟ್ ಪ್ರದರ್ಶಿಸಲಾಗಿತ್ತು. ಸಾಂಪ್ರದಾಯಿಕ 125 ಸಿಸಿ ಇಂಟರ್ನಲ್ ಕಂಬಶ್ಚನ್ ಎಂಜಿನ್ (ಐಸಿಇ) ಸ್ಕೂಟರ್ ಅನ್ನು ಸರಣಿ ಹೈಬ್ರಿಡ್ ಎಲೆಕ್ಟ್ರಿಕ್ ಪವರ್ ಟ್ರೇನ್ ಮೂಲಕ ಪುನರ್ ರೂಪಿಸುವ ಮತ್ತು ಜೋಡಿಸುವ ವಿಧಾನ ಇದಾಗಿತ್ತು.

ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ಆರ್. ಸೀತಾರಾಮ್, ಉಪಾಧ್ಯಕ್ಷ ಎಂ.ಆರ್. ಜಾನಕಿರಾಮ್, ಕಾರ್ಯದರ್ಶಿ ಎಂ.ಆರ್. ಆನಂದರಾಮ್, ಆರ್ಐಟಿ ನಿರ್ದೇಶಕರಾದ ಎಂ.ಆರ್. ಸಂಪಂಗಿರಾಮ್. ಎಂ.ಆರ್. ಕೋದಂಡರಾಮ್, ಆರ್ಐಟಿ ಪ್ರಾಂಶುಪಾಲರು ವಿಜಯಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-4-952326775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.