ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ವಸತಿ ಶಾಲೆಗಳ ಪಾತ್ರ ಅನನ್ಯವಾದುದು. ಆರ್ಥಿವಾಗಿ ಹಿಂದುಳಿದ, ಆದರೆ ಅದ್ಭುತ ಬುದ್ಧಿಶಕ್ತಿ ಹೊಂದಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಈ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಜವಾಹರ ನವೋದಯ ವಿದ್ಯಾಲಯ (ಜೆಎನ್ವಿ)ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ನವೋದಯ ವಿದ್ಯಾಲಯ ಸಮಿತಿ (ಎನ್ವಿಎಸ್) ನಡೆಸುವ ಈ ಶಾಲೆಗಳು ಪ್ರತಿ ಜಿಲ್ಲೆಗೆ ಒಂದರಂತೆ ಇವೆ. ಪ್ರವೇಶ ಪರೀಕ್ಷೆಯ ಮೂಲಕ 6ನೇ ತರಗತಿಗೆ ಇಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವೈಶಿಷ್ಟ್ಯ: ಗ್ರಾಮೀಣ ಭಾಗದ ಮಕ್ಕಳಿಗೆ ಶೇ 75ರಷ್ಟು ಸೀಟುಗಳು ಮೀಸಲಿರುತ್ತವೆ. ಸಿಬಿಎಸ್ಇ ಪಠ್ಯಕ್ರಮ ಹೊಂದಿದ್ದು, 6ರಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ, ವಸತಿ, ಊಟ ಮತ್ತು ಪಠ್ಯಪುಸ್ತಕಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಭಾವೈಕ್ಯ ಮೂಡಿಸಲು ಬೇರೆ ರಾಜ್ಯಗಳೊಂದಿಗೆ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮ ಇಲ್ಲಿದೆ.

6ನೇ ವರ್ಗಕ್ಕೆ ಪ್ರವೇಶಕ್ಕಾಗಿ 5ನೇ ವರ್ಗ ಕಲಿಯುವಾಗ ಬಹುತೇಕ ಆಗಸ್ಟ್ನಿಂದ ಅಕ್ಟೋಬರ್ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿರುತ್ತದೆ. ಪ್ರತಿ ವರ್ಷ ಜನವರಿಯಲ್ಲಿ (ಬಹುತೇಕ) ಪ್ರವೇಶ ಪರೀಕ್ಷೆ ನಡೆಯುತ್ತದೆ. ಮಾನಸಿಕ ಸಾಮರ್ಥ್ಯ ಪರೀಕ್ಷೆ (ಚಿತ್ರ ಆಧಾರಿತ ಪರೀಕ್ಷೆ: 50 ಅಂಕಗಳು (40 ಪ್ರಶ್ನೆಗಳು), ಗಣಿತ ಪರೀಕ್ಷೆ 25 ಅಂಕಗಳು (20 ಪ್ರಶ್ನೆಗಳು), ಭಾಷಾ ಪರೀಕ್ಷೆ 25 ಅಂಕಗಳು (20 ಪ್ರಶ್ನೆಗಳು) ಬಹು ಆಯ್ಕೆಯ ಪರೀಕ್ಷೆ ಇರುತ್ತದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 9ನೇ ವರ್ಗಕ್ಕೂ ಪ್ರವೇಶ ಪರೀಕ್ಷೆಯ ಮೂಲಕ ಲ್ಯಾಟರಲ್ ಎಂಟ್ರಿ ಇರುತ್ತದೆ. 8ನೇ ವರ್ಗದವರೆಗೆ ನವೋದಯ ಬಿಟ್ಟು ಹೋದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಇದು ಕೂಡಾ ಸಾಮಾನ್ಯವಾಗಿ ಸೆಪ್ಟೆಂಬರ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಪ್ರವೇಶ ಪರೀಕ್ಷೆ ಇರುತ್ತದೆ.

11ನೇ ವರ್ಗದ ವಿಜ್ಞಾನ ವಿಭಾಗಕ್ಕೂ ನೇರವಾಗಿ ಪ್ರವೇಶ ಒದಗಿಸಲಾಗುತ್ತದೆ. 10ನೇ ವರ್ಗಕ್ಕೆ ಬಿಟ್ಟು ಹೋದ ವಿದ್ಯಾರ್ಥಿಗಳ ಸಂಖ್ಯೆಯಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಹುತೇಕ ಪ್ರವೇಶ ಪರೀಕ್ಷೆ ಇಲ್ಲದೆಯೇ ಎಸ್ಎಸ್ಎಲ್ಸಿಯಲ್ಲಿ ವಿಜ್ಞಾನ, ಗಣಿತ, ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪರಿಗಣಿಸಿ ಆಯ್ಕೆ ಮಾಡ ಲಾಗುತ್ತದೆ. ಮೇ ಇಲ್ಲವೇ ಜೂನ್ ತಿಂಗಳಲ್ಲಿ ಜಿಲ್ಲೆಯ ನವೋದಯ ಶಾಲೆಯನ್ನು ಸಂಪರ್ಕಿಸಬಹುದು. ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಡ್ಯಾಂಸೈಟ್ ನಲ್ಲಿ ಜವಾಹರ ನವೋದಯ ವಿದ್ಯಾಲಯ ಇದೆ.

6ನೇ ವರ್ಗದ ಪ್ರವೇಶಕ್ಕಾಗಿ 5ನೇ ವರ್ಗ ಕಲಿಯುವಾಗ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ( ಎನ್ ಟಿ ಎ) ನಡೆಸುವ ಈ ಪರೀಕ್ಷೆಯಲ್ಲಿ ಗಣಿತ, ಜ್ಞಾನೇಂದ್ರಿಯ ಪರೀಕ್ಷೆ, ಭಾಷಾ ಪರೀಕ್ಷೆ, ಸಾಮಾನ್ಯ ಜ್ಞಾನ ಸೇರಿ 300 ಅಂಕಗಳಿಗೆ ಪ್ರವೇಶ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆ ಪಾಸಾದ ನಂತರ ವೈದ್ಯಕೀಯ ತಪಾಸಣೆಯಲ್ಲಿ ಪಾಸಾಗಬೇಕು. 9ನೇ ವರ್ಗಕ್ಕೆ ಪ್ರವೇಶಕ್ಕಾಗಿ 8ನೇ ವರ್ಗ ಕಲಿಯುವಾಗ ಆಂಗ್ಲ ಮಾಧ್ಯಮದಲ್ಲಿ 400 ಅಂಕಗಳ ಪ್ರವೇಶ ಪರೀಕ್ಷೆ ಇರುತ್ತದೆ.

ಈ ಎರಡು ಆಯ್ಕೆಗಾಗಿ ಆನ್ ಲೈನ್ ಮೂಲಕವೇ ಇ-ಕೌನ್ಸೆಲಿಂಗ್ ಮೂಲಕ ತಮಗೆ ಬೇಕಾದ ಶಾಲೆಗಳನ್ನು ಆಯ್ದುಕೊಳ್ಳಬೇಕು.

ಕ್ರೈಸ್ ಅಡಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ: ಹೆಣ್ಣು ಮಕ್ಕಳಲ್ಲಿ ಧೈರ್ಯ, ಶಿಸ್ತು ಮತ್ತು ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಸ್ಥಾಪಿತವಾದ ದೇಶದ ಏಕೈಕ ಸೈನಿಕ ಶಾಲಾ ಮಾದರಿಯ ಹೆಣ್ಣು ಮಕ್ಕಳ ವಸತಿ ಶಾಲೆಯಾಗಿದೆ.

ಏಕಲವ್ಯ ಮಾದರಿ ವಸತಿ ಶಾಲೆ: ಪರಿಶಿಷ್ಟ ಪಂಗಡದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ ಇವು ನಡೆಯುತ್ತಿವೆ.

ಅಟಲ್ ಬಿಹಾರಿ ವಾಜಪೇಯಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ: ಇವು ಕೂಡ ಸಮಾಜದ ವಂಚಿತ ವರ್ಗಗಳ ಮಕ್ಕಳಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಶಿಕ್ಷಣ ನೀಡುತ್ತಿವೆ.ಮೊರಾರ್ಜಿ ಮತ್ತು ಚೆನ್ನಮ್ಮ ವಸತಿ ಶಾಲೆಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧನೆ ಮಾಡುತ್ತಿವೆ.

ಗ್ರಾಮೀಣ ಭಾಗದ ಪೋಷಕರು, ಖಾಸಗಿ ಶಾಲೆಗಳ ಭಾರೀ ಶುಲ್ಕದ ಬೆನ್ನತ್ತದೆ, ಸರ್ಕಾರದ ಇಂತಹ ಅದ್ಭುತ ಯೋಜನೆಗಳ ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕಿದೆ.

ಈ ಎಲ್ಲಾ ವಸತಿ ಶಾಲೆಗಳು ಕೇವಲ ಅಕ್ಷರ ಜ್ಞಾನವನ್ನಷ್ಟೇ ನೀಡದೆ, ಸ್ವಾವಲಂಬನೆ, ಶಿಸ್ತು ಮತ್ತು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಆತ್ಮವಿಶ್ವಾಸವನ್ನುತುಂಬುತ್ತಿವೆ. ಬಡತನ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಬಾರದು ಎಂಬ ಆಶಯವನ್ನು ಈ ಶಾಲೆಗಳು ಸಾಕಾರಗೊಳಿಸುತ್ತಿವೆ. ದಕ್ಷ ಆಡಳಿತ ಮತ್ತು ಪೋಷಕರ ಜಾಗೃತಿಯಿಂದ ಈ ಶಾಲೆಗಳ ಯಶಸ್ಸು ಮತ್ತಷ್ಟು ಹೆಚ್ಚಾಗಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-345594786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.