ಸಾಗರ: ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಅದರ ಕುರಿತು ಅರಿವು ಬೆಳೆಸಿಕೊಳ್ಳುವುದು ಅತ್ಯವಶ್ಯಕ’ ಎಂದು ಬೆಂಗಳೂರಿನ ಪೈರ್ ಸ್ಪೈಕ್ ಎಜುಕೇಷನ್ ಆ್ಯಂಡ್ ಟೆಕ್ನಾಲಜಿಸ್ ಸಂಸ್ಥೆಯ ಸಂಸ್ಥಾಪಕ ರವಿ ಹೆಗ್ಡೆ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ಕಾಕಾಲ್ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ವರ್ಲ್ಡ್ ವೈಸ್ ಲಾಂಗ್ವೇಜ್ ಲ್ಯಾಬ್ನ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ತಿಳಿವಳಿಕೆ, ಕಲಿಕೆ-ಗಳಿಕೆ ಕುರಿತ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

‘ಊಹಿಸಲು ಸಾಧ್ಯವಿಲ್ಲದ ವೇಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿದೆ. ಈ ಕಾರಣ ಹಲವು ಆತಂಕ ಹಾಗೂ ಅನುಮಾನಗಳು ಸೃಷ್ಟಿಯಾಗಿವೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದ ಮೇಲಿನ ಅವಲಂಬನೆ ಅನಿವಾರ್ಯವಾಗಲಿದೆ. ಆದರೆ ನಿರುದ್ಯೋಗ ಹೆಚ್ಚಲಿದೆ ಎಂಬ ಆತಂಕ ಬೇಡ’ ಎಂದು ಹೇಳಿದರು.

‘ಪ್ರತಿ ಹೊಸ ತಂತ್ರಜ್ಞಾನ ಜಗತ್ತನ್ನು ಪ್ರವೇಶಿಸಿದಾಗ ಅನೇಕ ಕ್ಷೇತ್ರಗಳಲ್ಲಿ ಅನಿಶ್ಚಿತತೆ ಮೂಡುತ್ತದೆ. ಕಂಪ್ಯೂಟರ್ ಬಳಕೆ ಆರಂಭವಾದಾಗಲೂ ಇದೇ ರೀತಿ ಆಗಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡೆ ಅವಕಾಶಗಳನ್ನು ಯುವಜನತೆ ಸೃಷ್ಟಿಸಿಕೊಳ್ಳಬಹುದು’ ಎಂದು ವರ್ಲ್ಡ್ ವೈಸ್ ಲಾಂಗ್ವೇಜ್ ಲ್ಯಾಬ್ನ ಸಂಸ್ಥಾಪಕ ಅವಿನಾಶ್ ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಗಣಪತಿ ಎ.ಎಸ್., ಪ್ರಮುಖರಾದ ಕೇಶವ ಸಂಪೆಕೈ, ಬಾಗಿ ಸತ್ಯನಾರಾಯಣ, ವಿ.ಜಿ.ಶ್ರೀಧರ್, ಪ್ರಕಾಶ್ ಕಾಕಾಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-42-1888704764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.